ಜ್ಯೋತಿಷ್ಯ: ಮದುವೆ ವಿಳಂಬಕ್ಕೆ ಪರಿಹಾರ ತಿಳಿಸಿ...

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಭವಿಷ್ಯದ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಕಳಿಸಿದರೆ ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಉತ್ತರ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಆ ನಂತರ ಅನೇಕ ಓದುಗರು ತಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದರು. ಆ ಪೈಕಿ ಆಯ್ದ 3 ಪತ್ರಕ್ಕೆ ಜ್ಯೋತಿಷಿಗಳು ಉತ್ತರಿಸಿದ್ದಾರೆ.

ಅಂದಹಾಗೆ ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ astrology.kannada@oneindia.co.in ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ್ಯೋತಿಷ್ಯ: ಗುರುಬಲದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದ ನರೇಂದ್ರ ಮೋದಿ]

Astrolgy Solution to Oneindia Kannada readers by astrologer Vittal Bhat

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ

ಪ್ರಶ್ನೆ: ನಮಸ್ತೆ. ನನ್ನ ಮದುವೆಗಾಗಿ ಮನೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಬಹುತೇಕ ಪ್ರಸ್ತಾವಗಳು ಅಂತಿಮ ಹಂತದವರೆಗೆ ಬಂದು ನಿಲ್ಲುತ್ತಿದೆ. ಈ ಬಗ್ಗೆ ನನ್ನ ಕುಟುಂಬದವರಿಗೆ ಚಿಂತೆಯಾಗಿದೆ. ದಯವಿಟ್ಟು ಇದಕ್ಕೆ ಕಾರಣ ತಿಳಿಸಿ.
ಉತ್ತರ. ನಿಮ್ಮದು ಜ್ಯೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿ. ನಿಮ್ಮ ಜಾತಕದಲ್ಲಿ ಮದುವೆಗೆ ಸಂಬಂಧಿಸಿದ ಹಾಗೆ ಕೆಲ ಸಮಸ್ಯೆಗಳಿವೆ. ಅದರ ನಿವಾರಣೆಗಾಗಿ ಕುಜ, ಶುಕ್ರ ಮತ್ತು ಶನಿ ಶಾಂತಿ ಹವನ ಮಾಡಿಸಬೇಕು. ಮತ್ತು ತುಂಬ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಹಾಗೂ ದುರ್ಗಾ ಕ್ಷೇತ್ರದ ದರ್ಶನ ಮಾಡಿ. ಶುಭವಾಗಲಿ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಪ್ರಶ್ನೆ: ನಾನು ಅಂದುಕೊಂಡ ಯಾವ ಕೆಲಸವೂ ಆಗುತ್ತಿಲ್ಲ. ಮನೆ ಖರೀದಿಸಬೇಕು ಅಂದುಕೊಳ್ತಿದೀನಿ, ಅದೂ ಆಗ್ತಿಲ್ಲ. ನನಗೆ ಇನ್ನೊಬ್ಬರ ಬಳಿ ಕೆಲಸ ಮಾಡುವುದು ಇಷ್ಟವಿಲ್ಲ. ವ್ಯಾಪಾರ ಮಾಡಬೇಕು ಅನ್ನೋದು ನನ್ನಾಸೆ. ಆದರೆ ಸಮಯವೇ ಕೂಡಿಬರುತ್ತಿಲ್ಲ. ನನಗೆ ಪರಿಹಾರ ಸೂಚಿಸಿ. ಭವಿಷ್ಯ ಹೇಗಿರುತ್ತದೆ ಎಂದು ತಿಳಿಸಿ.
ಉತ್ತರ: ನಿಮ್ಮದು ಕೃತ್ತಿಕಾ ನಕ್ಷತ್ರ, ವೃಷಭ ರಾಶಿ, ಸಿಂಹ ಲಗ್ನ. ನಕ್ಷತ್ರ ಹಾಗೂ ಲಗ್ನ ಎರಡೂ ನಿಮ್ಮ ಅತಿ ಕೋಪವನ್ನು ಸೂಚಿಸುತ್ತದೆ. ಸಾಧನೆಗೆ ಅವೇ ಅಡ್ಡಿ. ಮೊದಲಿಗೆ ಸಿಟ್ಟು-ಹಟ ಸ್ವಭಾವ ಬಿಡಿ. ನಿಮ್ಮ ಜಾತಕದಲ್ಲಿ ಶುಕ್ರ ನೀಚ ಸ್ಥಿತಿಯಲ್ಲಿದ್ದು, ಯಾವ ಕಾರಣಕ್ಕೂ ವ್ಯಾಪಾರಕ್ಕೆ ಕೈ ಹಾಕಬೇಡಿ. ಶುಕ್ರ ಹಾಗೂ ಶನಿ ಶಾಂತಿ ಹವನ ಮಾಡಿಸಿ, ನಿಮ್ಮ ಇಷ್ಟಾರ್ಥ ಈಡೇರಲಿ.

ಪ್ರಶ್ನೆ: ನಾನು ಎಂಎಸ್ಸಿ ಮ್ಯಾಥಮೆಟಿಕ್ಸ್ ಮಾಡುತ್ತಿದ್ದೇನೆ. ನನ್ನ ವಿದ್ಯಾಭ್ಯಾಸದ ಬಗ್ಗೆ ತಿಳಿಸಿ. ಒಳ್ಳೆ ಅಂಕ ಬರಲು ಏನು ಮಾಡಬೇಕು, ನನಗೆ ಮುಂದೆ ಪಿಎಚ್.ಡಿ ಮಾಡುವ ಆಸೆ ಇದೆ. ಮಾಡ್ತೀನಾ? ಮುಂಚೆ ಬಹಳ ಚೆನ್ನಾಗಿ ಓದ್ತಿದ್ದೆ. ಈಗ ಎಲ್ಲಿ ಫೇಲ್ ಆಗಿಬಿಡ್ತೀನೋ ಅನಿಸ್ತಿದೆ. ನನ್ನ ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಿ.[ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]
ಉತ್ತರ: ನಿಮ್ಮ ಜಾತಕದಲ್ಲಿ ವಿದ್ಯೆ ಉತ್ತಮವಾಗಿದೆ. ಆದ್ದರಿಂದ ಕಿಂಚಿತ್ತೂ ಚಿಂತೆ ಬೇಡ. ಕಷ್ಟಪಟ್ಟು ಅಲ್ಲದೆ, ಇಷ್ಟಪಟ್ಟು ಓದಿ. ಫೇಲಾಗುವ ಭಯ ಬೇಡ. ನಿಮ್ಮ ಜಾತಕದಲ್ಲಿ ಬುಧ ಲಾಭ ಸ್ಥಾನ ಹಾಗೂ ಗುರು ಸ್ವಸ್ಥಾನ-ಭಾಗ್ಯ ಸ್ಥಾನದಲ್ಲಿದೆ. ನಿಮಗೆ ವಿದ್ಯೆ ವಿಚಾರದಲ್ಲಿ ಸಹಕಾರ ದೊರೆಯುತ್ತದೆ. ನಿಮ್ಮದು ಮೇಷ ಲಗ್ನ. ಅಂದರೆ ಹಟ ಸ್ವಭಾವ. ಅದನ್ನು ವಿದ್ಯೆಯಲ್ಲಿ ತೋರಿಸಿ. ಶುಭವಾಗಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is the suggestions, solution given by Astrologer Pandit Vittal Bhat to Oneindia Kannada readers questions.
Please Wait while comments are loading...