ಅಶ್ವಿನ್ ಮಾಸದ ವಾರದ ಪಂಚಾಂಗ : ಅ.18ರಿಂದ 24
ಅಶ್ವಿನ್ ಮಾಸದ ಅಕ್ಟೋಬರ್ 18ರಿಂದ 24ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಅ.18. ರವಿವಾರ : ಜ್ಯೇಷ್ಠಾ ನಕ್ಷತ್ರ. ತುಲಾ ಸಂಕ್ರಮಣ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಅ.19. ಸೋಮವಾರ : ಮೂಲಾ. ಕೃಷಿಗೆ ಸಂಬಂಧಪಟ್ಟ ಜಾನುವಾರುಗಳ ವ್ಯವಹಾರಕ್ಕೆ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಅ.20. ಮಂಗಳವಾರ : ಪೂರ್ವಾಷಾಢಾ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಅ.21. ಬುಧವಾರ : ಉತ್ತರಾಷಾಢಾ. ಹೊಸ ಮನೆ ಪೂಜಿಸಲುತ್ತಮ. ದುರ್ಗಾಷ್ಟಮಿ. ಪೊಲೀಸ್ ಹುತಾತ್ಮರ ದಿನಾಚರಣೆ. ಮುಖ್ಯ ಕೆಲಸಕ್ಕಾಗಿ ಕಚೇರಿ ಮುಖ್ಯಾಧಿಕಾರಿ ಭೇಟಿಗೆ ಶುಭ. ದೂರ ಪ್ರಯಾಣದಿಂದ ನಷ್ಟ. [ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?]
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಅ.22. ಗುರುವಾರ : ಶ್ರವಣಾ. ಕಚೇರಿ ಮುಖ್ಯಸ್ಥರನ್ನು ಭೇಟಿಯಾಗಲು ಶುಭ. ನವರಾತ್ರಿ ಹಬ್ಬದ ಮುಕ್ತಾಯ. ಮಹಾನವಮಿ. ಆಯುಧ ಪೂಜೆ, ಸರಕಾರಿ ರಜೆ. ಹೊಸ ವಾಹನ ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಅ.23.ಶುಕ್ರವಾರ : ಧನಿಷ್ಠಾ. ಎಲ್ಲ ಕಾರ್ಯಗಳಿಗೂ ಉತ್ತಮ. ಶಮೀವೃಕ್ಷ ಪೂಜಾ ದಿನ. ವಿಜಯದಶಮಿ. ಸರಕಾರಿ ರಜೆ. ದೂರ ಪ್ರಯಾಣದಿಂದ ಶುಭಕರ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಅ.24. ಶನಿವಾರ : ಶತತಾರಾ. ಏಕಾದಶಿ. ವಿಶ್ವಸಂಸ್ಥಾ ದಿನ. ಮೊಹರಂ ಕಡೇ ದಿನ. ಸರಕಾರಿ ರಜೆ. ಸ್ವಾತಿ ಮಳೆ ಆರಂಭ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಬುಧವಾರ, ಗುರುವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಈ ವಾರದ ಅಮವಾಸ್ಯೆಯ ನಂತರ ಅ.27 ರ ಸೀಗಿ ಹುಣ್ಣಿಮೆಯವರೆಗೂ ಶುಭಕರ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಎಲ್ಲ ಕೆಲಸ ಕಾರ್ಯ ಮಾಡಿಕೊಳ್ಳುವುದು ಉತ್ತಮ.
ಈ ವಾರದ ಗ್ರಹಗತಿ : ಸಿಂಹ : ಶುಕ್ರ+ಮಂಗಳ+ಗುರು. ಕನ್ಯಾ : ರಾಹು+ಬುಧ. ತುಲಾ : ರವಿ. ವೃಶ್ಚಿಕ : ನೀಚಶನಿ. ಧನುಸ್ಸು : ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಮೀನ : ಕೇತು.












Click it and Unblock the Notifications