ಆಷಾಢ-ಶ್ರಾವಣ ಮಾಸದ ಪಂಚಾಂಗ : ಆಗಸ್ಟ್ 9ರಿಂದ 15

ಆಷಾಢ ಮಾಸದ ಆಗಸ್ಟ್ 9ರಿಂದ 15ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Ashada-Shravana masa - Aug 09 to 15 : Rahu Kala, Gulika Kala, Yamaganda Kala

ಆಗಸ್ಟ್.9. ರವಿವಾರ : ರೋಹಿಣಿ ನಕ್ಷತ್ರ. ಕ್ವಿಟ್ ಇಂಡಿಯಾ (ಕ್ರಾಂತಿ) ದಿನಾಚರಣೆ. ಕಚೇರಿ ಅಧಿಕಾರಿಗಳ ಭೇಟಿಗೆ ಮತ್ತು ಬಾಡಿಗೆ ಮನೆ ಪ್ರವೇಶಕ್ಕೆ ಸೂಕ್ತ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಆ.10. ಸೋಮವಾರ : ಮೃಗಶಿರಾ. ಏಕಾದಶಿ. ಕೃಷಿಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಮತ್ತು ಕಚೇರಿಯ ಮುಖ್ಯಸ್ಥರನ್ನು ಭೇಟಿಯಾಗಲು ಶುಭ. ದೂರ ಪ್ರಯಾಣದಿಂದ ಯಶಸ್ಸು. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಆ.11. ಮಂಗಳವಾರ : ಆರಿದ್ರಾ. ದೂರ ಪ್ರಯಾಣದಿಂದ ಶುಭ. [ಆರಿದ್ರಾ ನಕ್ಷತ್ರದವರೇ, ಸಂಶಯ ಬಿಡಿ ಸ್ವಾಮಿ]

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಆ.12. ಬುಧವಾರ : ಪುನರ್ವಸು. ಹಣ ಠೇವಣಿ ಇಡಲು ಮತ್ತು ಹೊಸ ವಾಹನ ಕೊಳ್ಳಲು ಶುಭಕರ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಆ.13. ಗುರುವಾರ : ಪುಷ್ಯ. ದೂರ ಪ್ರಯಾಣದಿಂದ ಶುಭ. [ಸಾತ್ವಿಕ ಸ್ವಭಾವದ ತ್ಯಾಗಮಯಿ ಪುಷ್ಯ ನಕ್ಷತ್ರದವರು]

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಆ.14. ಶುಕ್ರವಾರ : ಆಶ್ಲೇಷ. ನಿಜ ನಾಗರ ಅಮವಾಸ್ಯೆ. (ಆ.13 ಗುರುವಾರದ ಸಂಜೆ 6-50 ಕ್ಕೆ ಅಮವಾಸ್ಯೆ ಆರಂಭ. ಶುಕ್ರವಾರ ಆ.14ರ ರಾತ್ರಿ 8.30ಕ್ಕೆ ಮುಕ್ತಾಯ). ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಆಗಸ್ಟ್.15. ಶನಿವಾರ : ಮಘಾ. ಶ್ರಾವಣ ಮಾಸ ಆರಂಭ. ಭಾರತ ಸ್ವಾತಂತ್ರ್ಯ ದಿನ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.

ಈ ವಾರದ ಗ್ರಹಗತಿ : ಮೇಷ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕರ್ಕ: ಸೂರ್ಯ+ಮಂಗಳ. ಸಿಂಹ: ಶುಕ್ರ+ಗುರು+ಬುಧ. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+