Darshan Thoogudeepa: ದರ್ಶನ್ ವಿಚಾರದಲ್ಲಿ ನಿಜವಾಯ್ತು ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯ!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಹೊರ ಬಂದರೂ ನೆಮ್ಮದಿಯಾಗಿ ಇರಲು ಆಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೆ ಮತ್ತೆ ಜೈಲಿಗೆ ಹೋಗುವ ಚಿಂತೆ ಕಾಡುತ್ತಿದೆ. ಇದರಿಂದಾಗಿ ದರ್ಶನ್ ಜೈಲಿನಿಂದ ಹೊರಗಡೆ ಇದ್ದರೂ ಕೂಡ ನಿಶ್ಚಿಂತೆಯಾಗಿರಲು ಆಗುತ್ತಿಲ್ಲ. ಇದಕ್ಕೆ ಕಾರಣ ದರ್ಶನ್‌ಗೆ 2027ರವರೆಗೂ ಟೈಮ್ ಸರಿಯಿಲ್ಲದೇ ಇರುವುದು. ಹೀಗೆಂದು ಈ ಹಿಂದೆ ಆರ್ಯವರ್ಧನ್ ಗುರೂಜಿ ದರ್ಶನ್ ವಿಚಾರವಾಗಿ ಭವಿಷ್ಯ ನುಡಿದಿದ್ದರು. ದರ್ಶನ್ ಅವರ ಸದ್ಯದ ಸ್ಥಿತಿ ನೋಡಿದರೆ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯ ನಿಜವಾದಂತೆ ಕಾಣಿಸುತ್ತಿದೆ.
ಹೌದು.. ದರ್ಶನ್ ಅವರಿಗೆ ಜೈಲಿನಿಂದ ಹೊರಬರುವಾಗಲೂ ಟೆನ್ಷನ್ ಹೊರಬಂದ ಮೇಲೂ ಟೆನ್ಷನ್ ದೂರವಾಗುತ್ತಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅನಾರೋಗ್ಯದ ಕಾರಣ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ.

ಆದರೆ ದರ್ಶನ್ ಜೈಲಿನಿಂದ ಹೊರಬಂದು 12 ದಿನ ಕಳೆದರೂ ಸರ್ಜರಿ ಆಗಿಲ್ಲ. ಸರ್ಜರಿ ಮಾಡಿಸಿಕೊಳ್ಳಲು ದರ್ಶನ್ ಅವರಿಗೆ ಧೈರ್ಯ ಕೂಡ ಬರುತ್ತಿಲ್ಲ. ಯಾಕೆಂದರೆ ಸರ್ಜರಿ ಮಾಡಿಸಿಕೊಂಡರೆ ಅದು ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಅಷ್ಟರಲ್ಲಿ ದರ್ಶನ್ ಜೈಲಿಗೆ ಹೋಗಬೇಕಾದ ಸಂದರ್ಭ ಬಂದರೆ ಜೈಲಿನಲ್ಲಿನ ವ್ಯವಸ್ಥೆಯಿಂದ ದರ್ಶನ್ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ ಬೆನ್ನು ಸಮಸ್ಯೆಗೆ ಮೊದಲು ಫಿಸಿಯೋಥೆರಪಿ ನೀಡಲಾಗುತ್ತಿದೆ.
ಒಂದು ವೇಳೆ ದರ್ಶನ್ ಸರ್ಜರಿ ಮಾಡಿಸಿಕೊಳ್ಳದೇ ಹೋದಲ್ಲಿ ಜೈಲಿಗೆ ಆರು ವಾರಗಳ ಒಳಗೆ ಹೋಗಬೇಕಾದ ಸಂದರ್ಭ ಎದುರಾಗಬಹುದು. ಹೀಗಾಗಿ ದರ್ಶನ್‌ಗೆ ಎಲ್ಲಿದ್ದರು ನೆಮ್ಮದಿ ಇಲ್ಲದಂತಾಗಿದೆ. ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟವಾಗಿ ಹೋಗಿದೆ. ಸರ್ಜರಿ ಮಾಡಿಸಿಕೊಂಡರೆ ಆರು ವಾರಗಳಲ್ಲಿ ವಾಸಿಯಾಗುತ್ತಾ ಎನ್ನುವ ಚಿಂತೆ, ಸರ್ಜರಿ ಮಾಡಿಸಿಕೊಳ್ಳದೇ ಇದ್ದರೆ ಮತ್ತೆ ಜೈಲಿಗೆ ಬೇಗ ಹೋಗಬೇಕಾಗುವ ಚಿಂತೆ, ಹೀಗೆ ಎಲ್ಲವೂ ದರ್ಶನ್ ಅವರಿಗೆ ದೊಡ್ಡ ಸವಾಲಾಗಿ ಹೋಗಿದೆ.

ದರ್ಶನ್ ಅವರ ಈ ಆತಂಕಕ್ಕೆ ಅವರ ಜಾತಕದಲ್ಲಿ ಇರುವ ಗ್ರಹಗತಿಗಳೇ ಕಾರಣ ಎಂದು ಆರ್ಯವರ್ಧನ್ ಗುರೂಜಿ ಈ ಹಿಂದೆ ದರ್ಶನ್ ಜೈಲಿನಲ್ಲಿ ಇರುವಾಗ ಭವಿಷ್ಯ ನುಡಿದ್ದಿದ್ದರು. ಸದ್ಯ ಅವರು ನುಡಿದ ಭವಿಷ್ಯ ನಿಜವಾಗಿದೆ. ಹಾಗಾದರೆ ದರ್ಶನ್ ಬಗ್ಗೆ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವೇನು?
ನಿಜವಾಯ್ತು ದರ್ಶನ್ ಬಗ್ಗೆ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯ
''ದರ್ಶನ್ ಹೆಸರಿಗೆ 21 ನಂಬರ್ ಬರುತ್ತೆ. ಅವರ ಡೇಟ್ ಆಫ್ ಬರ್ತ್‌ಗೆ ಇದು ವಿರುದ್ಧ (opposite)ವಾದ ನಂಬರ್. ಆ ಹೆಸರು ಇರೋವರೆಗೂ ಜಗಳ ಇದ್ದೇ ಇರುತ್ತೆ. ಅವರಿಗೆ ಎಲ್ಲಾ ಇರುತ್ತೆ ಆದರೆ ನೆಮ್ಮದಿ ಇರಲ್ಲ' ಎಂದು ಆರ್ಯವರ್ಧನ್ ಗುರೂಜಿ ದರ್ಶನ್ ಜೈಲಿನಲ್ಲಿ ಇರುವಾಗ ಭವಿಷ್ಯ ಹೇಳಿದ್ದರು. ಈ ಭವಿಷ್ಯ ಸದ್ಯ ನಿಜವಾಗಿದೆ. ನಟ ದರ್ಶನ್ ಅವರಿಗೆ ಎಲ್ಲವೂ ಇದೆ. ಆದರೆ ನೆಮ್ಮದಿ ಮಾತ್ರ ಸಿಗುತ್ತಿಲ್ಲ. ಎಲ್ಲೆ ಇದ್ದರೂ ಆತಂಕ, ಭಯ ಕಾಡತೊಡಗಿದೆ. ಇದರಿಂದಾಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಸಹ ಆಗುತ್ತಿಲ್ಲ. ಈ ಎಲ್ಲಾ ವಿಷಯಗಳು ಆರ್ಯವರ್ಧನ್ ಗುರೂಜಿ ಹೇಳಿದ ಭವಿಷ್ಯಕ್ಕೆ ಹೋಲಿಕೆಯಾಗುತ್ತಿವೆ.
'ದರ್ಶನ್ ಅವರು ಹುಟ್ಟಿರೋದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. 7 ಮತ್ತು 6 ಗುಡ್ ಕಾಂಬಿನೇಶನ್. ಆದರೆ ಈ ವರ್ಷ 16, 6, 8 ನಂಬರ್‌ಗಳು ಸರಿ ಇಲ್ಲ. ಈ ವರ್ಷದ 6ನೇ ತಿಂಗಳು ಡೇಂಜರ್' ಎಂದು ಗುರೂಜಿ ಹೇಳಿದ್ದರು. ಆದರೆ ದರ್ಶನ್ ಅರೆಸ್ಟ್ ಆಗಿರೋದು ಕೂಡ ಇದೇ (ಜೂನ್) ಆರನೇ ತಿಂಗಳಲ್ಲಿ.
'ಅಲ್ಲದೆ ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸದ ವಾಸ್ತು ಕೂಡ ಸರಿ ಇಲ್ಲ. ಅಲ್ಲಿರೋರು ಯಾರಿಗೂ ನೆಮ್ಮದಿ ಇರಲ್ಲ' ಅಂತಲೂ ಗುರೂಜಿ ಹೇಳಿದ್ದಾರೆ. ಈ ಭವಿಷ್ಯ ಕೂಡ ಸತ್ಯಾಂಶಕ್ಕೆ ಹತ್ತಿರವಾಗಿದೆ. ದರ್ಶನ್ ಜೈಲಿಗೆ ಹೋಗುವುದಕ್ಕಿಂತ ಮೊದಲು ಪತ್ನಿ ವಿಜಯಲಕ್ಷ್ಮೀ ಮೇಲೆ ದರ್ಶನ್ ಕೈ ಮಾಡಿದ್ದರು. ಅನೇಕ ಜಗಳಗಳು ಆಗಿದ್ದವು. ದರ್ಶನ್ ಈ ಹಿಂದೆ ಕೂಡ ಜೈಲಿಗೆ ಹೋಗಿದ್ದರು. ಇದರಿಂದಾಗಿ ಆರ್‌ಆರ್‌ನಗರ ಮನೆಯಲ್ಲಿರುವ ಪತ್ನಿಗಾಗಲಿ ಅವರ ಪುತ್ರನಿಗಾಗಿ ನೆಮ್ಮದಿನೇ ಇಲ್ಲದಂತಾಗಿದೆ.
ಇನ್ನೂ 'ದರ್ಶನ್ ಜಾತಕದಲ್ಲಿ ಉಚ್ಚಸ್ಥಾನದಲ್ಲಿ ಶುಕ್ರ ಗ್ರಹ ಇದ್ದಾನೆ. ಉಚ್ಚಸ್ಥಾನದಲ್ಲಿ ಶುಕ್ರ ಗ್ರಹ ಇದ್ದರೆ ಹೆಣ್ಮಕ್ಕಳ ತಲೆನೋವು ಜಾಸ್ತಿ ಇರುತ್ತೆ. ಹೆಣ್ಣಿಂದಲೇ ತುಂಬಾ ತೊಂದರೆ ಆಗುತ್ತದೆ. ದರ್ಶನ್‌ಗೆ ಹೆಣ್ಣೇ ಶತ್ರು' ಎಂದಿದ್ದರು ಆರ್ಯವರ್ಧನ್ ಗುರೂಜಿ. ಆರ್ಯವರ್ಧನ್ ಗುರೂಜಿ ಅವರು ಹೇಳಿದ ಈ ಮಾತು ಅಕ್ಷರಶ: ನಿಜವಾಗಿದೆ. ಪವಿತ್ರಾ ಗೌಡ ಸಹವಾಸದಿಂದಾಗಿ ದರ್ಶನ್ ಅವರು ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿದ್ದಾರೆ. ಇಂದಿಗೂ ಕೂಡ ಆ ಸಮಸ್ಯೆಗಳಿಂದ ದರ್ಶನ್ ಹೊರಬರಲು ಆಗುತ್ತಿಲ್ಲ.
ಅಲ್ಲದೆ 'ದರ್ಶನ್ ಅವರಿಗೆ ರಾಹು ಭುಕ್ತಿಯಿಂದಾಗಿ 2027ವರೆಗೂ ಇದು ನೋವು ಕೊಡುತ್ತಾ ಹೋಗುತ್ತೆ. ಸಿನಿಮಾಗಳಲ್ಲಿ ಏರುಪೇರು, ಸಂಸಾರದಲ್ಲಿ ಮನಸ್ತಾಪ ಇದ್ದೇ ಇರುತ್ತದೆ. ಹೀಗೆ ಶನಿದೋಷ ಶುರುವಾಗುತ್ತೆ. ಶನಿದೆಸೆಯಿಂದ ಅವರಿಗೆ ರಾಜಯೋಗವಿದ್ದು ರಾಜಕೀಯಕ್ಕೆ ಎಂಟ್ರಿ ಕೊಡಬಹುದು' ಎಂದು ಆರ್ಯವರ್ಧನ್ ಗುರೂಜಿ ದರ್ಶನ್ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಹೀಗೆ ಆರ್ಯವರ್ಧನ್ ಗುರೂಜಿ ನುಡಿದ ಪ್ರತಿಯೊಂದು ವಿಷಯಗಳು ದರ್ಶನ್ ವಿಚಾರದಲ್ಲಿ ನಿಜವಾಗುತ್ತಿದ್ದು ಅವರು ಹೇಳುವ ಭವಿಷ್ಯದ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ.
ದರ್ಶನ್ ಬಿಡುಗಡೆ ಭವಿಷ್ಯ ನುಡಿದಿದ್ದ ಜೋಕುಮಾರಸ್ವಾಮಿ
ದರ್ಶನ್ ಅಭಿಮಾನಿಯೊಬ್ಬರು ಜೋಕುಮಾರಸ್ವಾಮಿ ಬಳಿ ದರ್ಶನ್ ಅವರ ದರ್ಶನ ಭಾಗ್ಯ ಯಾವಾಗ ಸಿಗಬಹುದೆಂದು ಪ್ರಶ್ನೆಯನ್ನು ಕೇಳಿದ್ದರು. ಗಣೇಶ ಮೂರ್ತಿ ವಿಸರ್ಜನೆಯಾದ ನಂತರ ಭಾದ್ರಪದ ಮಾಸದ ಅಷ್ಟಮಿ ದಿವದಸಂದು ಜನಿಸುವ ಜೋಕುಮಾರಸ್ವಾಮಿ ಮೇಲೆ ಉತ್ತರ ಕರ್ನಾಟಕದಲ್ಲಿ ಅನೇಕರಿಗೆ ನಂಬಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಕೃಷಿಕರ ಜನಪದ ಮತ್ತು ಮಳೆ ತರುವ ದೇವರು ಜೋಕುಮಾರಸ್ವಾಮಿ ಎಂದು ಕೃಷಿಕರು ನಂಬುತ್ತಾರೆ. ಈ ಹಬ್ಬದ ಸಮಯದಲ್ಲಿ ಅಭಿಮಾನಿಯೊಬ್ಬರು ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಿದ್ದರು.
ಆಗ ಜೋಕುಮಾರಸ್ವಾಮಿ ದರ್ಶನ್ ಜೈಲಿನಿಂದ ಹೊರ ಬಂದರು ಕಂಟಕ ತಪ್ಪಿದ್ದಲ್ಲ. ಇನ್ನೂ ಮೂರು ತಿಂಗಳು ದರ್ಶನ್ ಜೈಲಿನಿಂದ ಆಚೆ ಬರುತ್ತಾರೆ ಎಂದು ಹೇಳಿತ್ತು. ಈಗ ಜೋಕುಮಾರಸ್ವಾಮಿ ನುಡಿದ ಭವಿಷ್ಯ ನಿಜವಾಗಿದೆ. ಜೊತೆಗ ಜೋಕುಮಾರಸ್ವಾಮಿ ದರ್ಶನ್ ಡೆವಿಲ್ ಸಿನಿಮಾ ಸಾಕಷ್ಟು ಯಶಸ್ಸು ಕಾಣಲಿದೆ ಎಂದು ಕೂಡ ಭವಿಷ್ಯ ನುಡಿದಿದ್ದಾರೆ.












Click it and Unblock the Notifications