ಇನ್ನೊಂದು ವಾರದಲ್ಲಿ ಮೂರು ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಹರಿದು ಬರಲಿದೆ ಧನ ಸಂಪತ್ತು
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಮತ್ತು ನಕ್ಷತ್ರ ಸಂಚಾರಕ್ಕೆ ವಿಶೇಷ ಮಹತ್ವವಿದೆ. ನವಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿ, ನಕ್ಷತ್ರವನ್ನು ಬದಲಿಸುತ್ತದೆ. ಈ ಪೈಕಿ ಗುರು ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಪ್ರವೇಶಿಸಲು ಒಂದು ವರ್ಷವನ್ನು ತೆಗೆದುಕೊಳ್ಳುತ್ತದೆ. ಇದೀಗ ಗುರು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಗುರುವಿನ ನಕ್ಷತ್ರ ಬದಲಾವಣೆ ಎಲ್ಲಾ ರಾಶಿಯವರ ಜಾತಕ ಫಲದ ಮೇಲೆ ಪರಿಣಾಮ ಬೀರುವುದು.
ಗುರುವಿನ ನಕ್ಷತ್ರ ಬದಲಾವಣೆಯಿಂದ ಲಾಭ
ಆಗಸ್ಟ್ 19 ರಂದು ಗುರು ಗ್ರಹ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಗುರುವಿನ ನಕ್ಷತ್ರ ಬದಲಾವಣೆಯ ಪರಿಣಾಮವಾಗಿ ಕೆಲವು ರಾಶಿಯವರಿಗೆ ವಿಶೇಷ ಲಾಭವಾಗುವುದು. ಆರ್ಥಿಕವಾಗಿ, ವೃತ್ತಿಪರವಾಗಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ಫಲ ಸಿಗುವುದು.
ಆಗಸ್ಟ್ 19 ರಂದು ನಕ್ಷತ್ರ ಬದಲಿಸಲಿರುವ ಗುರು
ಗುರುವು ಪ್ರಸ್ತುತ ಪುಷ್ಯ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಆಗಸ್ಟ್ 18 ರವರೆಗೆ ಗುರು ಇದೇ ನಕ್ಷತ್ರದಲ್ಲಿ ಸಂಚಾರ ಮುಂದುವರೆಸಲಿದ್ದಾನೆ. ಆಗಸ್ಟ್ 19 ರಂದು ಗುರು ಪುಷ್ಯ ನಕ್ಷತ್ರದಿಂದ ಹೊರ ಬಂದು ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಗುರು ನಕ್ಷತ್ರ ಬದಲಾವಣೆಯು ಶನಿಯ ಪ್ರಭಾವಕ್ಕೆ ಸಂಬಂಧಿಸಿದ ನಕ್ಷತ್ರದಲ್ಲಿ ನಡೆಯಲಿದೆ. ಇದರಿಂದ ಕೆಲವು ರಾಶಿಯವರಿಗೆ ಗುರು ಮತ್ತು ಶನಿಯ ಪ್ರಭಾವಗಳ ಸಂಯೋಜನೆಯು ಬಹಳ ಮುಖ್ವಾಗಿರುವುದು.

ಮೇಷ ರಾಶಿ (Aries): ಗುರುವಿನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಬಹುದು. ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಾಗುವುದು. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳು ಸಿಗಬಹುದು. ತುಂಬಾ ಸಮಯದಿಂದ ನಿಂತು ಹೋಗಿದ್ದ ಕೆಲಸ ಮತ್ತೆ ಶುರುವಾಗುವುದು. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರುವುದು ಉತ್ತಮ. ಜಮೀನು ಖರೀದಿಸಲು ಇದು ಸೂಕ್ತವಾದ ಸಮಯ. ಹೂಡಿಕೆ ಮಾಡುವ ಬಗ್ಗೆ ಯೋಚನೆ ಇದ್ದರೆ ಲಾಭವಾಗುವುದು.
ತುಲಾ ರಾಶಿ (Libra): ಗುರುವಿನ ನಕ್ಷತ್ರ ಬದಲಾವಣೆಯು ತುಲಾ ರಾಶಿಯವರಿಗೂ ವಿಶೇಷ ಲಾಭ ನೀಡುವುದು. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹೊಸ ಉದ್ಯೋಗದ ಆಫರ್ ಸಿಗುವುದು. ಕೆಲಸ ಬದಲಾಯಿಸುವುದಕ್ಕೂ ಇದು ಸರಿಯಾದ ಸಮಯ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ಹೊಸ ಹೊಸ ಅವಕಾಶಗಳು ಸಿಗುವುದು. ವ್ಯವಹಾರದಲ್ಲಿಯೂ ಹೊಸ ಅವಕಾಶಗಳು ಒಲಿಯುವ ಸೂಚನೆಗಳಿವೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವ ನಿರೀಕ್ಷೆಯಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು.
ಮಿಥುನ ರಾಶಿ (Gemini): ಮಿಥುನ ರಾಶಿಯವರಿಗೆ ಅಭಿವೃದ್ಧಿ ಅವಕಾಶ ಸಿಗುವುದು. ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರ ಸಮಯ. ಹೊಸ ವ್ಯವಹಾರ ಆರಂಭಿಸಬಹುದು. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಕಷ್ಟಪಟ್ಟು ಕೆಲಸ ಮಾಡುವವರಿಗೆ ಪ್ರಗತಿಯ ದಾರಿ ತೆರೆದುಕೊಳ್ಳುವುದು.
ಗುರು ಮತ್ತು ಶನಿಯಿಂದ ಪ್ರಭಾವಿತವಾಗುವ ನಕ್ಷತ್ರಗಳಲ್ಲಿನ ಈ ಬದಲಾವಣೆಯು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಮೇಷ, ತುಲಾ ಮತ್ತು ಮಿಥುನ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರವಾಗಿರುವುದು. ಗುರುವಿನ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳನ್ನು ನೀಡುವುದು. ವ್ಯವಹಾರದಲ್ಲಿ ಪ್ರಗತಿಯಾಗುವುದು. ಬಾಕಿ ಇರುವ ಯೋಜನೆಗಳಲ್ಲಿ ಪ್ರಗತಿಯಾಗುವುದು. ಈ ಫಲಿತಾಂಶಗಳು ಪ್ರತಿಯೊಬ್ಬ ವ್ಯಕ್ತಿಯ ಜನ್ಮ ಜಾತಕ ಮತ್ತು ಗ್ರಹಗಳ ಸ್ಥಾನವನ್ನು ಅವಲಂಬಿಸಿ ಬದಲಾಗಬಹುದು.


Click it and Unblock the Notifications
