2025 Horoscope: 2025ರಲ್ಲಿ 15 ಬಾರಿ ರಾಶಿ ಬದಲಾಯಿಸುವ ಬುಧ- ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ದ್ವಿಗುಣ
ನವಗ್ರಹಗಳಲ್ಲಿ ಬುಧ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ ಇದು ರಾಜ ಗುಣಗಳನ್ನು ನೀಡುತ್ತದೆ. ಆಲೋಚನೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಇದಕ್ಕೆ ಗ್ರಹಗಳ ರಾಜ ಎಂದು ಕರೆಯುವುದುಂಟು. ಇದಲ್ಲದೆ ಬುಧ ಗ್ರಹ ಶಿಕ್ಷಣ, ಬರವಣಿಗೆ, ಪತ್ರಿಕೋದ್ಯಮ ಮತ್ತು ಇತರ ಸಂವಹನ-ಸಂಬಂಧಿತ ಕ್ಷೇತ್ರಗಳಲ್ಲಿ ಯಶಸ್ಸನ್ನು ತರುವ ಗ್ರಹವೆಂದು ನಂಬಲಾಗುತ್ತದೆ. ಜೊತೆಗೆ ಇದು ವ್ಯಾಪಾರ, ಪಾಲುದಾರಿಕೆ ಮತ್ತು ವಹಿವಾಟುಗಳ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಇದರ ಸಂಚಾರ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾದರೆ 2025ರಲ್ಲಿ ಬುಧನು ಎಷ್ಟು ಬಾರಿ ರಾಶಿಯನ್ನು ಬದಲಾಯಿಸುತ್ತಾನೆ. ಇದರ ದಿನಾಂಕ, ಸಮಯ, ಪರಿಣಾಮ ಹಾಗೂ ಪರಿಹಾರದ ಬಗ್ಗೆ ತಿಳಿಯೋಣ.
ಸೂರ್ಯ ಹಾಗೂ ಚಂದ್ರನ ನಡುವೆ ಬುಧ ಗ್ರಹ ಸಂಚಾರ ಮಾಡುತ್ತದೆ. ಅಲ್ಲದೆ ಈ ಎರಡು ಗ್ರಹಗಳ ಗುಣಗಳನ್ನು ಸಮತೋಲನಗೊಳಿಸುತ್ತದೆ ಬುಧ ಗ್ರಹ. ಗ್ರಹಗಳ ಶ್ರೇಣಿಯಲ್ಲಿ ಸೂರ್ಯ, ಚಂದ್ರನ ನಂತರ ಮೂರನೇ ಸ್ಥಾನದಲ್ಲಿದ್ದಾನೆ ಬುಧ. ವ್ಯಾಪಾರ ತಿಳುವಳಿಕೆ ನೀಡುವ ಬುಧ ಅತ್ಯಂತ ಮಂಗಳಕರ ಗ್ರಹಳಲ್ಲಿ ಒಂದಾಗಿದೆ. ಹೀಗಾಗಿ ಅದರ ರಾಶಿ ಹಾಗೂ ನಕ್ಷತ್ರ ಬದಲಾವಣೆ ಜೀವನದ ಎಲ್ಲಾ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಅಂದಹಾಗೆ 2025ರಲ್ಲಿ ಬುಧ ಗ್ರಹ ಒಟ್ಟು 15 ಬಾರಿ ರಾಶಿಯನ್ನು ಬದಲಾಯಿಸುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ.
2025ರಲ್ಲಿ ಬುಧ ಗ್ರಹ ರಾಶಿಯ ಬದಲಾವಣೆಯ ಪಟ್ಟಿ ಹೀಗಿದೆ-
ಸಂಖ್ಯೆ- ರಾಶಿ ಹೆಸರು- ದಿನಾಂಕ- ವಾರ- ಸಮಯ
1. ಧನು ರಾಶಿ ಜನವರಿ 4, 2025ರಂದು ಶನಿವಾರ ಮಧ್ಯಾಹ್ನ 12:11ಕ್ಕೆ ಬುಧ 2025ನೇ ವರ್ಷದ ಮೊದಲ ರಾಶಿ ಬದಲಾವಣೆ ಮಾಡಲಿದ್ದಾನೆ.
2. ಮಕರ ರಾಶಿ ಜನವರಿ 24, 2025ರಂದು ಶುಕ್ರವಾರ ಸಂಜೆ 05:45 ಕ್ಕೆ ಬುಧ 2025ನೇ ವರ್ಷದ ಎರಡನೇ ರಾಶಿ ಬದಲಾವಣೆ ಮಾಡಲಿದ್ದಾನೆ.
3. ಕುಂಭ ರಾಶಿ ಫೆಬ್ರವರಿ 11, 2025ರಂದು ಮಂಗಳವಾರ ಮಧ್ಯಾಹ್ನ 12:58ಕ್ಕೆ
4. ಮೀನ ರಾಶಿ ಫೆಬ್ರವರಿ 27, 2025ರಂದು ಗುರುವಾರ ಮಧ್ಯಾಹ್ನ 11:46ಕ್ಕೆ
5. ಮೇಷ ರಾಶಿ ಮೇ 7, 2025ರಂದು ಬುಧವಾರ ಬೆಳಗ್ಗೆ 04:13 ಕ್ಕೆ
6. ವೃಷಭ ರಾಶಿ ಶುಕ್ರವಾರ ಮೇ 23, 2025ರಂದು ಮಧ್ಯಾಹ್ನ 01:05 ಗಂಟೆಗೆ
7. ಮಿಥುನ ರಾಶಿ ಜೂನ್ 6, 2025ರಂದು ಶುಕ್ರವಾರ ಬೆಳಗ್ಗೆ 09:29 ಕ್ಕೆ
8. ಕರ್ಕಾಟಕ ರಾಶಿ ಜೂನ್ 22, 2025ರಂದು ಭಾನುವಾರ ಮಧ್ಯಾಹ್ನ 09:33
9. ಸಿಂಹ ರಾಶಿ ಆಗಸ್ಟ್ 30, 2025ರಂದು ಶನಿವಾರ 04:48 PM
10. ಕನ್ಯಾರಾಶಿ ಸೆಪ್ಟೆಂಬರ್ 15, 2025ರಂದು ಸೋಮವಾರ ಬೆಳಗ್ಗೆ 11:10 ಕ್ಕೆ
11. ತುಲಾರಾಶಿ ಅಕ್ಟೋಬರ್ 3, 2025ರಂದು ಶುಕ್ರವಾರ ಮಧ್ಯಾಹ್ನ 03:47 ಕ್ಕೆ
12. ವೃಶ್ಚಿಕ ರಾಶಿ ಶುಕ್ರವಾರ ಅಕ್ಟೋಬರ್ 24, 2025ರಂದು ಮಧ್ಯಾಹ್ನ 12:39 ಕ್ಕೆ
13. ತುಲಾ ರಾಶಿ ನವೆಂಬರ್ 23, 2025ರಂದು ಭಾನುವಾರ ಮಧ್ಯಾಹ್ನ 07:58 ಕ್ಕೆ
14. ವೃಶ್ಚಿಕ ರಾಶಿ ಡಿಸೆಂಬರ್ 6, 2025ರಂದು ಶನಿವಾರ ರಾತ್ರಿ 08:52 ಗಂಟೆಗೆ
15. ಧನು ರಾಶಿ ಡಿಸೆಂಬರ್ 29, 2025ರಂದು ಸೋಮವಾರ ಬೆಳಗ್ಗೆ 07:27 ಕ್ಕೆ
2025ರಲ್ಲಿ ರಾಶಿಗಳ ಮೇಲೆ ಬುಧ ಸಂಕ್ರಮಣದ ಪ್ರಭಾವ ಹೇಗಿರಲಿದೆ?
2025ರ ಜನವರಿಯಲ್ಲಿ ಬುಧ ಗ್ರಹದ ಮೊದಲ ರಾಶಿ ಬದಲಾವಣೆಯು ಧನು ರಾಶಿಯಲ್ಲಿ ನಡೆಯಲಿದೆ. ವರ್ಷದ ಕೊನೆಯಲ್ಲೂ ಕೂಡ ಬುಧ ಧನು ರಾಶಿಯಲ್ಲೇ ಸಂಚಾರ ಮಾಡಲಿದ್ದಾನೆ. ಜ್ಯೋತಿಷಿಗಳ ಪ್ರಕಾರ ಬುಧ ಗ್ರಹ 2025ರಲ್ಲಿ 5 ರಾಶಿಗಳಿಗೆ ತುಂಬಾ ಅದೃಷ್ಟವನ್ನು ನೀಡುತ್ತಾನೆ. ಈ ಐದು ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. ಇವರು ರಾತ್ರೋರಾತ್ರಿ ಶ್ರೀಮಂತರಾಗಬಹುದು. ಹಾಗಾದರೆ ಆ 5 ಅದೃಷ್ಟದ ರಾಶಿಗಳ ಬಗ್ಗೆ ಈಗ ತಿಳಿಯೋಣ.

ವೃಷಭ ರಾಶಿ:
2025ರ ವರ್ಷದಲ್ಲಿ ಬುಧ ದೇವನ ಕೃಪೆಯಿಂದ ವೃಷಭ ರಾಶಿಯವರಿಗೆ ಆರ್ಥಿಕ ಜೀವನ ಸುಧಾರಣೆ ಕಾಣಲಿದೆ. ವೃತ್ತಿಯ ವಿಷಯದಲ್ಲಿ ತುಂಬಾ ಲಾಭದಾಯಕ ಅವಕಾಶಗಳು ಸಿಗಲಿದೆ. ಹೊಸ ಉದ್ಯೋಗ ಸಿಗಬಹುದು. ವ್ಯಾಪಾರಸ್ಥರು ಹೊಸ ವ್ಯಾಪಾರ ವ್ಯವಹಾರಗಳನ್ನು ಪಡೆಯುವುದರಿಂದ ಆದಾಯ ಹೆಚ್ಚಾಗಲಿದೆ. ವ್ಯಾಪಾರ ಪ್ರವಾಸಗಳು ಹೋಗಬೇಕಾಗಬಹುದು.
ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಆರೋಗ್ಯ ಉತ್ತಮವಾಗಿರಲಿದ್ದು, ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ.

ಮಿಥುನ ರಾಶಿ:
2025ರಲ್ಲಿ ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ನಿಮ್ಮ ಕೆಲಸದಲ್ಲಿ ನೀವು ಸಾಕಷ್ಟು ಲಾಭವನ್ನು ಗಳಿಸುವಿರಿ. ಆದಾಯದ ಹೊಸ ಮೂಲಗಳನ್ನು ತೆರೆದುಕೊಳ್ಳುತ್ತವೆ. ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಬಹಳಷ್ಟು ಹಣವನ್ನು ಉಳಿಸಬಹುದು. ವ್ಯಾಪಾರದಲ್ಲಿ ಹೊಸ ಗ್ರಾಹಕರನ್ನು ಭೇಟಿ ಮಾಡುವಿರಿ. ನೀವು ಸರ್ಕಾರಿ ಯೋಜನೆಗೆ ಒಪ್ಪಂದವನ್ನು ಮಾಡಿಕೊಳ್ಳಬಹುದು.
ಜಮೀನು ಅಥವಾ ಭೂಮಿಯನ್ನು ಖರೀದಿಸುವ ಅವಕಾಶ ಸಿಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಈ ವರ್ಷ ಉತ್ತಮವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ.

ಸಿಂಹ ರಾಶಿ
ಮುಂದಿನ ವರ್ಷ ಸಿಂಹ ರಾಶಿಯ ವ್ಯಾಪಾರ ವರ್ಗದವರಿಗೆ ಬಹಳ ಮಂಗಳಕರವಾಗಿರುತ್ತದೆ. ವ್ಯಾಪಾರ ಪ್ರವಾಸಗಳನ್ನು ನೀವು ಮಾಡಬಹುದು. ಹೊಸ ವ್ಯವಹಾರ ಸಂಬಂಧಗಳು ರೂಪುಗೊಳ್ಳುತ್ತವೆ. ವ್ಯಾಪಾರದಲ್ಲಿ ಲಾಭ ಮತ್ತು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹೊಸ ಮನೆ ಮತ್ತು ಕಾರು ಖರೀದಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮ ಲಾಭ ತಂದು ಕೊಡಲಿದೆ. ಕೆಲಸ ಹುಡುಕುತ್ತಿರುವ ಜನರಿಗೆ ಶೀಘ್ರದಲ್ಲೇ ಕೆಲಸ ಸಿಗಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಮಾನಸಿಕ ಒತ್ತಡ ದೂರವಾಗಲಿದೆ.

ಕನ್ಯಾರಾಶಿ
ಹೊಸ ವರ್ಷ ಕನ್ಯಾ ರಾಶಿಯ ಜನರು ಅನೇಕ ಹೊಸ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸಂಗಾತಿಯೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿ ಕೂಡಿರುತ್ತವೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ವೃತ್ತಿಯ ವಿಷಯದಲ್ಲಿ ಇದು ತುಂಬಾ ಉತ್ತಮ ಸಮಯವಾಗಿದೆ. ನೀವು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು.
ಉನ್ನತ ಆದಾಯದ ಮೂಲಗಳಿಂದ ಬಹಳಷ್ಟು ಹಣ ಬರಲಿದೆ. ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆದು ಹೊಸ ಕೆಲಸ ಆರಂಭಿಸುವಿರಿ. ಹೊಸ ವ್ಯಾಪಾರ ವ್ಯವಹಾರ ಮತ್ತಷ್ಟು ವಿಸ್ತರಣೆ ಆಗುತ್ತವೆ. ವಿದೇಶಿ ಮೂಲಗಳಿಂದ ಭಾರಿ ಲಾಭ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಪ್ರೇಮ ಸಂಬಂಧ ಸುಧಾರಣೆಯಾಗಲಿದೆ.

ಧನು ರಾಶಿ
ಧನು ರಾಶಿಯವರಿಗೆ ಹೊಸ ವರ್ಷ ಸ್ವಲ್ಪ ಸವಾಲಿನದ್ದಾಗಿರುತ್ತದೆ. ಆದರೂ 2025 ಧನು ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಹೊಸ ವರ್ಷದಲ್ಲಿ ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ತುಂಬಾ ಅನುಕೂಲಕರವಾಗಿದೆ. ಸಾವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಬುಧ ಗ್ರಹ ನಿಮಗೆ ಕರುಣಿಸಲಿದೆ.
ವ್ಯಾಪಾರದಿಂದ ದೊಡ್ಡ ಆರ್ಥಿಕ ಲಾಭ ಸಿಗಲಿದೆ. ವ್ಯಾಪಾರ ವಿಸ್ತರಿಸುವಿರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಅಧ್ಯಯನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗಲಿದೆ. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವಿರಿ. ಅಂದುಕೊಂಡ ಉದ್ಯೋಗ ಪಡೆಯುವಲ್ಲಿ ನೀವು ಯಶಸ್ವಿಯಾಗಬಹುದು. ಹೊಸ ಸಂಬಂಧಗಳು ಏರ್ಪಟ್ಟು ಬಲಗೊಳ್ಳಲಿವೆ.












Click it and Unblock the Notifications