Comet browser: ಎಐ ಚಾಲಿತ ಹೊಸ ಬ್ರೌಸರ್ ಬಿಡುಗಡೆ ಮಾಡಿದ Perplexity, ಇದರಿಂದ ಏನು ಲಾಭ? ಮಾಹಿತಿ, ವಿವರ
Perplexity Comet browser: ಪರ್ಪ್ಲೆಕ್ಸಿಟಿಯು ( ಎಐ ಟೂಲ್ ) ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಎಐ ಚಾಲಿತ ಹೊಸ ಬ್ರೌಸರ್ ಅನ್ನು ಇಂದು ( ಜೂಲೈ 10 ) ಬಿಡುಗಡೆ ಮಾಡಿದೆ. 'ಕಾಮೆಟ್' ಎಂಬ ಹೆಸರಿನ ಬ್ರೌಸರ್ ಅನ್ನು ಹೊರತರುವ ಮೂಲಕ ಬಳಕೆದಾರರ ಸರ್ಚ್ ಸಮಯವು ಕಡಿಮೆಯಾಗಲಿದೆ ಎಂಬ ಮಾಹಿತಿಯನ್ನು ಪರ್ಪ್ಲೆಕ್ಸಿಟಿ ಹಂಚಿಕೊಂಡಿದೆ. ಕಾಮೆಟ್ ಬ್ರೌಸರ್ ಕ್ರೋಮಿಯಂ ಆಧಾರಿತವಾಗಿದೆ. ಇದರಿಂದ ಬಳಕೆದಾರರು ಕ್ರೋಮ್ ಎಕ್ಸ್‌ಟೆನ್ಷನ್‌ಗಳನ್ನು ಬಳಸಿಕೊಳ್ಳಬಹುದಾಗಿದೆ. ಕಾಮೆಟ್ ಬ್ರೌಸರ್ ಕ್ರೋಮಿಯಂ ಆಧಾರಿತವಾಗಿರುವುದರಿಂದ ವೆಬ್‌ಸೈಟ್‌ಗಳೊಂದಿಗೆ ತಾಂತ್ರಿಕ ಸಮಸ್ಯೆಗಳಿಲ್ಲದೆ ಕೆಲಸ ಮಾಡಲಿದೆ ಎಂದು ಪರ್ಪ್ಲೆಕ್ಸಿಟಿ ಹೇಳಿದೆ.
ಪರ್ಪ್ಲೆಕ್ಸಿಟಿಯ ಎಐ ವೈಶಿಷ್ಟ್ಯಗಳನ್ನು 'ಕಾಮೆಟ್'ಗೆ ಅಳವಡಿಸಲಾಗಿದೆ. ಪರ್ಪ್ಲೆಕ್ಸಿಟಿಯ ಸರ್ಚ್ ಎಂಜಿನ್ ಅನ್ನು ಡಿಫಾಲ್ಟ್ ಆಯ್ಕೆಯಾಗಿಯೂ ನಾವು ಬಳಸಬಹುದಾಗಿದೆ. ಜೊತೆಗೆ, ಒಂದು ಸೈಡ್‌ಬಾರ್‌ನಲ್ಲಿ ಎಐ ಅಸಿಸ್ಟೆಂಟ್ ಲಭ್ಯವಿದ್ದು, ಇದು ಬ್ರೌಸರ್‌ನ ಅನೇಕ ಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲಿದೆ.

'ಕಾಮೆಟ್' ಮೂಲಕ ಆನ್‌ಲೈನ್ ಶಾಪಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಕಾಮೆಟ್‌ನ ಎಐ ಅಸಿಸ್ಟೆಂಟ್ ಬಳಕೆದಾರರಿಗೆ ಉತ್ಪನ್ನಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಹೋಲಿಕೆ ಮಾಡಲು ಸಹಾಯ ಮಾಡುತ್ತದೆ. ಉದಾಹರಣೆಗೆ, ವೇಗವಾಗಿ ಡೆಲಿವರಿ ಮಾಡುವ ಅಥವಾ ಉತ್ತಮ ರಿಟರ್ನ್ ಪಾಲಿಸಿ ಹೊಂದಿರುವ ಶಾಪ್‌ಗಳನ್ನು ಈ ಬ್ರೌಸರ್ ಮೂಲಕ ಕಂಡುಹಿಡಿಯಬಹುದಾಗಿದೆ.
ಈ ಬ್ರೌಸರ್ ಮೂಲಕ ಆನ್‌ಲೈನ್ ಸರ್ಚ್ ಸಹ ಸುಲಭವಾಗುತ್ತದೆ. ಬಳಕೆದಾರರು ಕಾಮೆಟ್‌ನ ಎಐ ಅಸಿಸ್ಟೆಂಟ್ ಅನ್ನು ಓಪನ್ ಮಾಡಿದಾಗ, ಅದು ತೆರೆದಿರುವ ಟ್ಯಾಬ್‌ಗಳ ಮಾಹಿತಿಯನ್ನು ನೇರವಾಗಿ ಬಳಸಿಕೊಳ್ಳುತ್ತದೆ. ಇದರಿಂದ ಪ್ರಶ್ನೆಗಳನ್ನು ಕಾಪಿ-ಪೇಸ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಕಾಮೆಟ್ ಬ್ರೌಸರ್ ಪ್ರಸ್ತುತ ವಿಂಡೋಸ್ ಮತ್ತು ಮ್ಯಾಕ್ ಒಎಸ್ ( ಆಪಲ್ ) ನಲ್ಲಿ ಲಭ್ಯವಿದೆ. ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಬೆಂಬಲ ನೀಡುವ ಯೋಜನೆ ಇದೆ. ಮೊಬೈಲ್ ಆವೃತ್ತಿಯನ್ನೂ ಹೊರತರಲಿದ್ದೇವೆ ಎಂಬ ಮಾಹಿತಿಯನ್ನು ಕಂಪನಿ ಹಂಚಿಕೊಂಡಿದೆ.
ಈ ಬ್ರೌಸರ್ ಪ್ರಸ್ತುತ ಪರ್ಪ್ಲೆಕ್ಸಿಟಿ ಮ್ಯಾಕ್ಸ್ (Perplexity Max) ಎಂಬ 200 ಡಾಲರ್ ಮಾಸಿಕ ಸಬ್ಸ್ಕ್ರಿಪ್ಶನ್ ಪ್ಲಾನ್‌ನಲ್ಲಿ ಮಾತ್ರ ಲಭ್ಯವಿದೆ. ಇದರಲ್ಲಿ ರಿಸೊನಿಂಗ್ ಮಾಡೆಲ್‌ಗಳನ್ನು ಬಳಸಿ ಉತ್ತರಿಸುವ, ಪರ್ಪ್ಲೆಕ್ಸಿಟಿಯ ವಿಶೇಷ ಸರ್ಚ್ ಎಂಜಿನ್ ಮತ್ತು ಡೇಟಾ ವಿವರಣೆಗಳನ್ನು ತಯಾರಿಸುವ ಲ್ಯಾಬ್ಸ್ ಎಂಬ ವೈಶಿಷ್ಟ್ಯಗಳಿವೆ. ವೇಟಿಂಗ್ ಲಿಸ್ಟ್‌ನಲ್ಲಿ ಹೆಸರು ನೊಂದಾಯಿಸಿದವರಿಗೆ ಕೂಡ ಇದು ಬೇಗನೇ ಲಭ್ಯವಾಗಲಿದೆ.
ಪರ್ಪ್ಲೆಕ್ಸಿಟಿ ಕಂಪನಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಮುಂದಿನ ದಿನಗಳಲ್ಲಿ ಎಂಟರ್ಪ್ರೈಸ್ ಆವೃತ್ತಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರಲ್ಲಿ ಸೆಂಟ್ರಲ್ ನಿರ್ವಹಣಾ ಸಾಧನಗಳು, ಬಳಕೆಯ ಮೇಲೆ ನಿಗಾವಹಿಸುವಿಕೆ ಮತ್ತು ಸೈಬರ್ ಸುರಕ್ಷತಾ ಸಾಧನಗಳ ಫೆಸಿಲಿಟಿಯನ್ನು ಕೊಡಬಹುದು. ಇದನ್ನು ಸಂಸ್ಥೆಗಳಿಗಾಗಿ ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಪರ್ಪ್ಲೆಕ್ಸಿಟಿ ಕಂಪನಿಗೆ 'ಕಾಮೆಟ್ ಬ್ರೌಸರ್' ಹೆಚ್ಚಿನ ಲಾಭವನ್ನು ತರುವ ನಿರೀಕ್ಷೆ ಇದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications