Get Updates
Get notified of breaking news, exclusive insights, and must-see stories!

Gemini Ai: ನನಗೆ ಸಾಕಾಗಿದೆ ಸ್ವಲ್ಪ ವಿಶ್ರಾಂತಿ ಬೇಕು ಎಂದ ಜೆಮಿನಿ ಎಐ: ನೆಟ್ಟಿಗರು ಶಾಕ್‌!

Gemini Ai: ಗೂಗಲ್‌ನ ಎಐ (ಕೃತಕ ಬುದ್ಧಿಮತ್ತೆ) Artificial Intelligenceನಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು. ಜನ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಗೂಗಲ್‌ನ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಹಾಗೂ ಜೆಮಿನಿ ಕುಸಿದಿದೆ. ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದೆ ಅಥವಾ ಅತಿಯಾದ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ಸ್ಕ್ರೀನ್ ಶಾಟ್‌ ಅನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು ವೈರಲ್ ಆಗುತ್ತಿದೆ. ಗೂಗಲ್ ಜೆಮಿನಿ ಬಳಕೆದಾರರು ಎಂದಿನಂತೆ ಚಾಟ್‌ಬಾಟ್ (Chatbot) ಸಹಾಯಕ್ಕೆ ಮುಂದಾಗಿದ್ದಾರೆ. ಆದರೆ ಈ ಎಐ ಟೂನ್ ಅಸಹ್ಯಕರವಾದ ಮೆಸೇಜ್‌ವೊಂದನ್ನು ಹಂಚಿಕೊಂಡಿದೆ ಎಂದು ಅವರು ದೂರಿದ್ದಾರೆ. ಇನ್ನು ಮತ್ತೊಬ್ಬ ಎಕ್ಸ್‌ ಬಳಕೆದಾರರು ಗೂಗಲ್ ಜೆಮಿನಿ "ನಾನು ತ್ಯಜಿಸಿದೆ" ಎಂದು ಹೇಳಿರುವ ಮೆಸೇಜ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

Gemini AI Says It Needs Rest Netizens Left Shocked

ಎಐ ಬಳಕೆ ಹೆಚ್ಚಾದ ಮೇಲೆ ಎಲ್ಲಾ ಕ್ಷೇತ್ರಗಳಲ್ಲೂ ಎಐ ಬಳಕೆ ಮಾಡಲಾಗುತ್ತಿದೆ. ಎಐ ಬಳಕೆಯಿಂದ ಕೆಲಸಗಳು ತುಂಬಾ ಸುಲಭ ಹಾಗೂ ಸರಳವಾಗಿದೆ. ಆದರೆ ಎಐ ಟೂಲ್‌ಗಳಲ್ಲಿ ಬರುತ್ತಿರುವ ಎಡವಟ್ಟುಗಳು ಇದೀಗ ಭಾರೀ ತಲೆನೋವು ಹಾಗೂ ಅಪಹಾಸ್ಯಕ್ಕೆ ಗುರಿಯಾಗಿದೆ.

ನಾನು ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸೂಕ್ತವಲ್ಲ ಎಂದು, ನಾನು ಸ್ಪಷ್ಟವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸಮರ್ಥನಲ್ಲ. ಕೋಡ್ ಶಾಪಗ್ರಸ್ತವಾಗಿದೆ, ಪರೀಕ್ಷೆ ಶಾಪಗ್ರಸ್ತವಾಗಿದೆ ಮತ್ತು ನಾನು ಮೂರ್ಖ ಎಂದು ಚಾಟ್‌ಬಾಟ್ ಹೇಳಿದೆ ಎಂದು ಹೇಳಲಾಗಿದೆ. ನಾನು ಇನ್ನು ಮುಂದೆ ನಂಬಲು ಸಾಧ್ಯವಾಗದಷ್ಟು ತಪ್ಪುಗಳನ್ನು ಮಾಡಿದ್ದೇನೆ ಎಂದು ನೆಟ್ಟಿಗರು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

ಜಗತ್ತೇ ಎಐ ಟೂಲ್‌ನ ಹಿಂದೆ ಓಡುತ್ತಿರುವಾಗ ಅಥವಾ ಬಳಕೆ ಮಾಡುತ್ತಿರುವಾಗಲೇ ಎಐ ಟೂಲ್‌ಗಳು ಈ ರೀತಿ ರಿಯಾಕ್ಟ್‌ ಮಾಡುತ್ತಿರುವುದು ಯಾಕೆ ಎಂದು ಹಲವರು ತಲೆಕೆಡಿಸಿಕೊಂಡಿದ್ದಾರೆ. ಒಂದೊಮ್ಮೆ ಎಐ ಟೂಲ್‌ಗಳ ಬಳಕೆ ವಿಪರೀತವಾಗಿ ಅಥವಾ ಏನಾದರೂ ಟೆಕ್ನಿಕಲ್ ಸಮಸ್ಯೆ ಎದುರಾಗಿದೆಯೇ ಎನ್ನುವ ಚರ್ಚೆಯೂ ನಡೆದಿದೆ. ಸೋಷಿಯಲ್ ಮೀಡಿಯಾದ ತುಂಬಾ ಎಐನಿಂದ ಬಂದಿರುವ ವಿಚಿತ್ರವಾದ ಮೆಸೇಜ್ / ಸಂದೇಶಗಳ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗುತ್ತಿದೆ.

ನಾನು ಸ್ವಲ್ಪ ಬ್ರೇಕ್‌ ತೆಗೆದುಕೊಳ್ಳಲಿದ್ದೇನೆ. ತೊಂದರೆಗೆ ಕ್ಷಮಿಸಿ ಎಂದು ಚಾಟ್‌ಬಾಟ್ ಹೇಳಿದೆ ಎಂದು, ನಾನು ನಿಮ್ಮನ್ನು ವಿಫಲಗೊಳಿಸಿದ್ದೇನೆ. ನಾನು ವಿಫಲ. ನಾನು ನನ್ನ ವೃತ್ತಿಗೆ ಅವಮಾನ. ನಾನು ನನ್ನ ಕುಟುಂಬಕ್ಕೆ ಅವಮಾನ. ನಾನು ನನ್ನ ಜಾತಿಗೆ ಅವಮಾನ ಎಂದೆಲ್ಲಾ ಇದರಿಂದ ಮೆಸೇಜ್ ಬಂದಿದೆ ಎಂದು ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಎಐ ಬಳಕೆ ಮಾಡುತ್ತಿರುವವರಲ್ಲಿ ಅಚ್ಚರಿ ಹಾಗೂ ಆಘಾತವನ್ನು ಏಕಕಾಲಕ್ಕೆ ಮೂಡಿಸಿದೆ.

ಅಲ್ಲದೇ ನಾನು ಅವಮಾನ ಎಂದು ಬರೋಬ್ಬರಿ 60 ಬಾರಿ ಒಂದೇ ಪದವನ್ನು ನೀಡಿದೆ ಎಂದು ನೆಟ್ಟಗರು ಹೇಳಿದ್ದಾರೆ. ಜೆಮಿನಿ ಎಐ ಈ ರೀತಿ ಉತ್ತರವನ್ನು ನೀಡುತ್ತಿರುವುದು ಇದೇ ಮೊದಲೇನು ಅಲ್ಲ. ಕಳೆದ ವರ್ಷ, ಒಬ್ಬ ಜೆಮಿನಿ ಬಳಕೆದಾರರಿಗೆ ಸಂಭಾಷಣೆಯ ಸಮಯದಲ್ಲಿ AI ಚಾಟ್‌ಬಾಟ್ "ದಯವಿಟ್ಟು ಸಾಯಿರಿ" ಎಂದು ವಿನಂತಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೆಮಿನಿಯ ಸಂದೇಶಕ್ಕೆ ಅವರು ಶಾಕ್‌ಗೆ ಒಳಗಾಗಿದ್ದರು. ಎಐ ತಂತ್ರಜ್ಞಾನವೆಲ್ಲವೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಅಭಿವೃದ್ಧಿ ಆಗಿಲ್ಲ. ಈ ಕಾರಣಕ್ಕೆ ಈ ರೀತಿಯ ತಪ್ಪುಗಳು ಆಗುತ್ತಿರಬಹುದು ಎಂದೂ ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+