Artificial intelligence: ಮುಂದಿನ 5 ವರ್ಷಗಳಲ್ಲಿ ಎಐನಿಂದ ಭಾರತದ ಈ ಉದ್ಯೋಗಗಳಿಗೆ ಕುತ್ತು

ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಸಾಗುತ್ತಿರುವ ನಾವು ಅದರಿಂದಾಗಿ ಒಂದಲ್ಲ ಒಂದು ರೀತಿ ಪರಿಣಾಮ ಎದುರಿಸಬೇಕಾದ ಅಪಾಯದಲ್ಲಿದ್ದೇವೆ. ಐಎನಿಂದ ಕೆಲಸಗಳು ಕ್ಷಣ ಮಾತ್ರದಲ್ಲಿ ಮುಗಿದು, ಸುಲಭವಾದರೂ ಇಲ್ಲಿವರೆಗೆ ಉದ್ಯೋಗಿಗಳ ಹೊಟ್ಟೆ ತುಂಬಿಸುತ್ತಿದ್ದ ಉದ್ಯೋಗಗಳಿಗೆ ಕುತ್ತು ತರವುದು ಪಕ್ಕಾ ಎಂಬ ವಾದ ಕೆಲ ವರ್ಷಗಳಿಂದಲೂ ಇದೆ. ಪ್ರತಿ ದಿನವೂ ಎಐ ವಿಶ್ವವನ್ನು ಆವರಿಸಿಕೊಳ್ಳುತ್ತಿದ್ದು, ಜನರಿಂದ ಒಂದೊಂದಾಗಿ ಕೆಲಸಗಳನ್ನು ಕಸಿಯುತ್ತಿದೆ. ಆದರೆ ಮುಂದಿನ ಐದು ವರ್ಷಗಳಲ್ಲಿ ಈ ಎರಡು ಉದ್ಯೋಗಗಳು ಎಐನಿಂದಾಗಿ ನಶಿಸಿ ಹೋಗಲಿವೆ ಎಂದು ಎಚ್ಚರಿಕೆಯ ವರದಿಯೊಂದು ಬಂದಿದೆ.

ಹೌದು, ಎಐನಿಂದ ಕೆಲಸ ಕಳೆದುಕೊಳ್ಳುವ ಆಧುನಿಕ ಪರ್ವ ಈಗಾಗಲೇ ಶುರುವಾಗಿದೆ. ಪ್ರತಿ ಕ್ಷೇತ್ರದಲ್ಲೂ ಎಐ ಬಳಕೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ಪ್ರವೃತ್ತಿಯೂ ಬಿರುಸಿನ ವೇಗದಲ್ಲಿ ಸಾಗಿದೆ. ಬಿಲಿಯನೇರ್ ಮತ್ತು ಸಾಹಸೋದ್ಯಮ ಬಂಡವಾಳಶಾಹಿಯಾಗಿರುವ ವಿನೋದ್ ಖೋಸ್ಲಾ ಐದು ವರ್ಷಗಳಲ್ಲಿ ಭಾರತದ ಐಟಿ ಮತ್ತು ಬಿಪಿಒ ಕೆಲಸಗಳನು ಈ ಎಐ ಬದಲಾಯಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂಬರುವ AI ರೂಪಾಂತರಗಳು ಜಾಗತಿಕವಾಗಿ ಎಐ ಅಪ್‌ಡೇಟ್‌ ಮುನ್ನಡೆಸಲು ದೇಶಕ್ಕೆ ಒಂದು ದೊಡ್ಡ ಅವಕಾಶ ಎಂದೂ ಕರೆದಿದ್ದಾರೆ.

Artificial Intelligence To Replace IT And BPO Jobs In India Within 5 Years

ಭಾರತಕ್ಕೆ ಅನುಕೂಲವೂ ಇದೆ

ಐಟಿ ಉದ್ಯೋಗದ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿರುವ ವಿನೋದ್ ಖೋಸ್ಲಾ, ಈ ಬಾರಿ ಅವರು ಮುಂದಿನ 5 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಜಾಗತಿಕವಾಗಿ ಐಟಿ ಮತ್ತು ಬಿಪಿಒ ವಲಯದಲ್ಲಿನ ಎಲ್ಲ ಸಾಂಪ್ರದಾಯಿಕ ಪಾತ್ರಗಳನ್ನು ಬದಲಾಯಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ತಂತ್ರಜ್ಞಾನವು ಖಂಡಿತವಾಗಿಯೂ ಐಟಿ ಉದ್ಯಮವನ್ನ ಅಸ್ತವ್ಯಸ್ತಗೊಳಿಸಿದರೂ ಈ ರೂಪಾಂತರವು ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ಟ್ಅಪ್ ಪಾಲಿಸಿ ಫೋರಂನ ಮೀಟ್ ದಿ ಒಜಿಎಸ್ ಕಾರ್ಯಕ್ರಮದಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಎಐ ತಂತ್ರಜ್ಞಾನವು ಐಟಿ ಮತ್ತು ಬಿಪಿಒ ಉದ್ಯಮವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ಸಿಲಿಕಾನ್ ವ್ಯಾಲಿ ಅನುಭವಿಗಳು, ಭಾರತೀಯ ಸ್ಟಾರ್ಟ್ಅಪ್ ಸಂಸ್ಥಾಪಕರ ನಿಯೋಗಕ್ಕೆ ತಿಳಿಸಿದ್ದಾರೆ. ಜಗತ್ತಿನ ಪ್ರತಿಯೊಂದು ಕಂಪನಿಯು ಅರ್ಧದಷ್ಟು ಜನರೊಂದಿಗೆ ಕಾರ್ಯನಿರ್ವಹಿಸಬಹುದು. ಆದರೆ ಅದನ್ನು ಹೇಗೆ ಮಾಡಬಹುದು ಎಂದು ಅವರಿಗೆ ತಿಳಿದಿಲ್ಲ. ಪ್ರೊಡಕ್ಷನ್‌ ಶೇ 5ರಿಂದ ಶೇ 500ಕ್ಕೆ ಸುಧಾರಿಸುತ್ತದೆ ಎನ್ನುವುದಾದರೆ ಶೇ 80ರಷ್ಟು ಜನರು ಕೆಲಸಕ್ಕೆ ಬದಲಾಯಿಸಲ್ಪಡುತ್ತಾರೆ. ಒಟ್ಟಾರೆ ಉದ್ಯೋಗಗಳ ಮೇಲೆ ಎಐ ದಾಳಿ ನಡೆಸಲಿದೆ ಎಂದಿದ್ದಾರೆ.

ಇದು ಲಕ್ಷಾಂತರ ಉದ್ಯೋಗಿಗಳಿಗೆ ಎಚ್ಚರಿಕೆಯಾಗಿದೆ. ಆದರೂ ಭಾರತದ ಐಟಿ ಪ್ರತಿಭೆಗಳು ಮುಂಬರುವ ಈ ಸಮಸ್ಯೆಯನ್ನು ಅವಕಾಶವನ್ನಾಗಿ ಪರಿವರ್ತಿಸುವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತವು ಎಐನ ರೂಪಾಂತರ ಸೇವೆಗಳಿಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲು ಅವಕಾಶವನ್ನು ಸಹ ನೀಡುತ್ತದೆ. ಪ್ರತಿಭೆಗಳ ಆಗರವಾಗಿರುವ ಭಾರತವು ಬಲವಾದ ಉದ್ಯಮಶೀಲ ಸಂಸ್ಕೃತಿ ಹಾಗೂ ಸನ್ನದ್ಧತೆಯನ್ನು ಹೊಂದಿದೆ. ಈ ಬದಲಾವಣೆಯನ್ನ ಲಾಭ ಮಾಡಿಕೊಳ್ಳಲು ಇತರರಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+