ಎಐ ಹೊಸ ಫೀಚರ್‌: Ask Perplexity ಯಿಂದ ಎಕ್ಸ್‌ನಲ್ಲಿ ಸಿಗಲಿದೆ ವಿಡಿಯೋ ಮಾಡುವ ಆಯ್ಕೆ!

ಎಐ ಬಳಕೆಯಲ್ಲಿ ಹೊಸ ಹಾಗೂ ಮಹತ್ವದ ಬದಲಾವಣೆ ಆಗಿದೆ. ಇನ್ನು Perplexity AI ನಿಂದ ಭರ್ಜರಿ ಅಪ್ಡೇಟ್ ಸಹ ಬಂದಿದೆ. ಎಐ ತಂತ್ರಜ್ಞಾನ ಹೆಚ್ಚು ಬಳಕೆ ಮಾಡುವುದಕ್ಕೆ ಪ್ರಾರಂಭಿಸಿದ ನಂತರದಲ್ಲಿ ಹೊಸ ಹೊಸ ಅಪ್ಡೇಟ್ಸ್‌ಗಳು ಬರುತ್ತಿವೆ. ಎಐನಿಂದ ಉದ್ಯೋಗ ಸೃಷ್ಟಿ ಕಡಿಮೆ ಆಗಲಿದೆ ಅಥವಾ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ಚರ್ಚೆಗಳ ನಡುವೆಯೇ Perplexity AI ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು ಜಗತ್ತಿನಲ್ಲಿ ಪ್ರತಿದಿನವೂ ಹೊಸ ಅಪ್ಡೇಟ್ಸ್‌ಗಳು ಬರುತ್ತಿದ್ದು ಇದರೊಂದಿಗೆ Perplexity AI ಸಹ ವಿಡಿಯೋ ಕ್ರಿಯೇಟಿಂಗ್ ಮತ್ತು ಸರ್ಚಿಂಗ್‌ಗೆ ಸಂಬಂಧಿಸಿದಂತೆ ಅಪ್ಡೇಟ್ಸ್‌ ನೀಡಲು ಪ್ರಾರಂಭಿಸಿದೆ.

ಎಐ ತಂತ್ರಜ್ಞಾನದ Appಗಳಲ್ಲಿ ಒಂದಾಗಿರುವ Perplexity ಹೊಸದೊಂದು ಅಪ್ಡೇಟ್ಸ್‌ ನೀಡಿದೆ. ಇದರ ಹೊಸ ಫೀಚರ್ ಬಿಡುಗಡೆಯಾಗಿದ್ದು ಜನ ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈಗಾಗಲೇ Grok ಫೀಚರ್ ಇದೆ. ಈ ಫೀಚರ್ ಎಕ್ಸ್‌ನದ್ದೇ ಆಗಿದೆ. ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ನೀವು Grokನ ಬಳಸಿ ಸಲಹೆಗಳನ್ನು ಹಾಗೂ ಸಜೆಸ್ಟ್‌ ಉತ್ತರ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಜನ Grok ನಿಂದ ಫ್ಯಾಕ್ಟ್‌ ಚೆಕ್ ಸಹ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಹೆಚ್ಚು ಮಾಹಿತಿ Grok ನಿಂದಲೇ ಸಿಗುತ್ತಿದೆ. ಇದೇ ರೀತಿ ಇದೀಗ ಮತ್ತೊಂದು ಎಐ ಚಾಟ್‌ಬಾಕ್ಸ್‌ ಆಯ್ಕೆ ಪರಿಚಯಿಸಲಾಗಿದೆ.

AI s new feature Ask Perplexity will now offer the option to make videos on X

Perplexity ಬಳಕೆದಾರರಿಗೆ ಸೋಷಿಯಲ್ ಮೀಡಿಯಾ ಎಕ್ಸ್‌ ಎಐ ವಿಡಿಯೋ ಜನರೇಷನ್‌ಗೆ ಅವಕಾಶ ನೀಡಲಾಗಿದೆ. ಇದೊಂದು ಅವಿಷ್ಕಾರವಾಗಿದೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಳಕೆದಾರರು ಎಐ ವಿಡಿಯೋ ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. Ask Perplexity ಎನ್ನುವ ಆಯ್ಕೆಯ ಮೂಲಕ ನೀವು ಎಐ ವಿಡಿಯೋಗಳನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. AI ವೀಡಿಯೊ ಜನರೇಷನ್ ವೈಶಿಷ್ಟ್ಯವನ್ನು ಹೊರತಂದಿದೆ. ಸುದ್ದಿಯ ನಂತರ ಇದೀಗ ಬಳಕೆದಾರರು Ask Perplexity ಎಂದು ಟ್ಯಾಗ್ ಮಾಡುವ ಮೂಲಕ ಅವರಿಷ್ಟದ ವೀಡಿಯೊಗಳಿಗೆ ಪ್ರಾಂಪ್ಟ್‌ಗಳನ್ನು ಟ್ವೀಟ್ ಮಾಡುವುದಕ್ಕೆ ಶುರು ಮಾಡಿದರು. ಇದಾದ ಕೇವಲ 8 ಸೆಕೆಂಡುಗಳ ಅವಧಿಯಲ್ಲಿ ವಿಡಿಯೋಗಾಗಿ ಜನ ಸಿಕ್ಕಾಪಟ್ಟೆ ಕೇಳುವುದಕ್ಕೆ ಶುರು ಮಾಡಿದರು.

AI ರಚಿಸಿದ ಈ ವಿಡಿಯೋ ಕ್ಲಿಪ್‌ಗಳು ಧ್ವನಿ ಮತ್ತು ಸಂಭಾಷಣೆಯನ್ನು ಸಹ ಹೊಂದಿದ್ದವು. Perplexity ಬಳಕೆ ಮಾಡುವ ಮೂಲಕ ಜನ ರಾಜಕಾರಣಿಗಳ ಜೀವನದ ಬಗ್ಗೆ ಹಾಗೂ ಪ್ರಸಿದ್ಧ ವ್ಯಕ್ತಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ರಚಿಸುವುದಕ್ಕೆ ಅಥವಾ ಕ್ರಿಯೇಟ್ ಮಾಡುವುದಕ್ಕೆ ಮುಂದಾದರು. ಆದರೆ, ಸ್ವಲ್ಪ ಸಮಯದ ನಂತರ Ask Perplexity ಈ ಸಂಬಂಧ ಪೋಸ್ಟ್‌ವೊಂದನ್ನು ಮಾಡಿದ್ದು. ನಾನು ನಿಮ್ಮ ವೀಡಿಯೊ ವಿನಂತಿ DMಗಳನ್ನು ಓದಿದ್ದೇವೆ. ನಿಮ್ಮಲ್ಲಿ ಕೆಲವರಿಗೆ ಸಹಾಯ ಬೇಕು.

ರಿಕ್ವೆಸ್ಟ್‌ಗಳು ಹೆಚ್ಚಾಗುತ್ತಿದ್ದಂತೆ ಬಳಕೆದಾರರು ಅಂತಿಮವಾಗಿ ವಿಳಂಬದ ಬಗ್ಗೆ ಕಂಪ್ಲೇಟ್ ಮಾಡುವುದಕ್ಕೆ ಶುರು ಮಾಡಿಕೊಂಡರು. ಹೀಗಾಗಿ ವೀಡಿಯೊ ಕ್ರಿಯೇಟ್ ಮಾಡುವುದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು Perplexity ಬಾಟ್ ಪ್ರತಿಕ್ರಿಯಿಸಿದೆ. ಇನ್ನು ಈ ಹೊಸ ಆಯ್ಕೆಯು ಇನ್ನೂ WhatsApp ನಲ್ಲಿ ಲಭ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+