AI ತಂತ್ರಜ್ಞಾನ ಅನೇಕ ಉದ್ಯೋಗಗಳನ್ನು ಕಸಿಯುತ್ತದೆಯೇ?: AI ಗಾಡ್‌ಫಾದರ್ ಹೇಳಿದ್ದೇನು?
AT News: ವೈಟ್ ಕಾಲರ್ ಉದ್ಯೋಗಿಗಳು ಎನ್ನಿಸಿಕೊಂಡಿರುವ ''ಲೌಕಿಕ ಬೌದ್ಧಿಕ ಕಾರ್ಮಿಕರ'' ಜಾಗವನ್ನು ಕೃತಕ ಬುದ್ಧಿಮತ್ತೆ (Artificial Intelligence) ತುಂಬಲಿದೆ. ಅದೆಷ್ಟೋ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂದು ಎಐ ಗಾಡ್ ಫಾದರ್ ಎಂದು ಕರೆಯುವ, 78 ವರ್ಷದ ಜೆಫ್ರಿ ಹಿಂಟನ್ ಅವರು ಹೇಳಿದ್ದಾರೆ. ಇಂದು ಮತ್ತು ಮುಂದಿನ ಭವಿಷ್ಯದ ತಂತ್ರಜ್ಞಾನವಾಗಿರುವ ಎಐ ಪ್ರಭಾವಿತ ತಂತ್ರಜ್ಞಾನವಾಗಿದೆ ಎಂದರು.
ಸೋಮವಾರ ಪ್ರಸಾರವಾದ "ಡೈರಿ ಆಫ್ ಎ ಸಿಇಒ" ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು, AI ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 1970ರಲ್ಲಿ ಆರಂಭವಾದ ನರಮಂಡಲ ಜಾಲಗಳ ಮೇಲಿನ ಅವರ ಪ್ರವರ್ತಕ ಕೆಲಸದಿಂದಾಗಿ ಅವರನ್ನು ಎಐ ಗಾಡ್‌ಫಾದರ್ ಎನ್ನಲಾಗುತ್ತಿದೆ. ಸದ್ಯ ಅವರು ಟೊರೊಂಟೊದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿಷಯ ಬೋಧಿಸುತ್ತಿದ್ದಾರೆ. ಇಂತಹ ಕಲಿಕೆಯಿಂದಲೇ 2024 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಮೂರು ವೃತ್ತಿಗಳ ಮೇಲೆ 'ಎಐ' ಪ್ರಭಾವ
ಈ ಮನುಷ್ಯನ ಕೆಲಸವು AI ಗೆ ಬದಲಾಗಲಿದೆ. ಅನೇಕ ಉದ್ಯೋಗಗಳನ್ನು ಕಸಿಯಲಿದೆ. ಹತ್ತು ಮಂದಿ ಕೆಲಸ ಮಾಡುವುದನ್ನು ಎಐ ಮಾಡಲಿದೆ. ಹೊಸ ರೂಪದಲ್ಲಿ ಜಗತ್ತಿನಲ್ಲಿ ಎಐ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ. ಮೂಲಗಳ ಪ್ರಕಾರ, ಎಐ ತಂತ್ರಜ್ಞಾನದಿಂದ ಕೇವಲ ಎರಡು ದಶಕಗಳಲ್ಲಿ AI ಕಾರಣ ಮೂರು ವಲಯಗಳ ವೃತ್ತಿ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಎಐ ನಿಂದಾಗಿ ಪ್ಯಾರಾಲೀಗಲ್ ಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇಂದಿನ ದಿನಮಾನಗಳಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಸಿಬ್ಬಂದಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಎಲ್ಲ ವಲಯದಲ್ಲಿ ಎಐ ತನ್ನ ಕೊಡುಗೆ ನೀಡುತ್ತಿದೆ. ಬ್ಲೂ-ಕಾಲರ್ ಕೆಲಸ AI ನಿಂದ ಬದಲಾಯಿಸಲು ಅಧಿಕ ಸಮಯ ಹಿಡಿಯುತ್ತಿದೆ ಎಂದು ವಿವರಿಸಿದರು.
ಕೇವಲ ಉದ್ಯೋಗಗಳನ್ನು ತೆಗೆಯುವುದು ಮಾತ್ರವಲ್ಲದೇ AI ತಂತ್ರಜ್ಞಾನವು ಹೊಸ ಉದ್ಯೋಗಗಳನ್ನು ಸಹ ಸೃಷ್ಟಿಸುತ್ತದೆಯೇ? ಎಂಬುದನ್ನು ಪ್ರಸ್ತಾಪಿಸದಿರು. AI ಬೌದ್ಧಿಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಿದರೆ, ಉಳಿದ ಸಾಕಷ್ಟು ಕೆಲಸಗಳು ಜನರಿಗೆ ಉಳೀಯುತ್ತವೆ. ಎಐ ಅಲ್ಲದೇ ಅಥವಾ ಎಐ ಕಾಲಘಟ್ಟದಲ್ಲಿ ನೀವು ಕೆಲಸ ಮಾಡಲು ಹೆಚ್ಚಿನ ಕೌಶಲ್ಯತೆ ಹೊಂದಿರಬೇಕು ಎಂದು ಅವರು ಸಲಹೆ ನೀಡಿದರು.
ನೇಮಕಾತಿಗೆ ಇಳಿಕೆಗೆ ಎಐ ಕಾರಣ
ವಿವಿಧ ವಲಯಗಳಲ್ಲಿ ಈ ಎಐ ತಂತ್ರಜ್ಞಾನವು ಉದ್ಯೋಗ ಕಡಿತಕ್ಕೆ, ನೇಮಕಾತಿ ಕಡಿಮೆ ಮಾಡುವ ಸಾಮರ್ಥ್ಯ ಹೋದಿದೆ. ವರದಿಯೊಂದರ ಪ್ರಕಾರ, ದೊಡ್ಡ ದೊಡ್ಡ ಟೆಕ್ ಕಂಪನಿಗಳು ಈ ಹಿಂದಿನಂತೆ ಪದವೀಧರರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಮೆಟಾ ಮತ್ತು ಗೂಗಲ್‌ನಂತಹ ಕಂಪನಿಗಳಲ್ಲಿ ಹೊಸಬರ ನೇಮಕಾತಿಯಲ್ಲಿ ಶೇ.25 ರಷ್ಟು (2023 ರಿಂದ 2024ರವರೆಗೆ) ಕಡಿಮೆ ಆಗಿದೆ. 2024 ರಲ್ಲಿ ಕೇವಲ 7ರಷ್ಟಿದೆ ಎಂದು ತಿಳಿದು ಬಂದಿದೆ.












Click it and Unblock the Notifications