Artificial Intelligence: ಎಐ ಯಡವಟ್ಟಿನಿಂದ ವಿದ್ಯಾರ್ಥಿ ಕೈಗೆ ಕೋಳ: ಆಗಿದ್ದೇನು? ಇಲ್ಲಿದೆ ಮಾಹಿತಿ
Artificial Intelligence: ಯಾವ ಕ್ಷೇತ್ರದಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಕೆಲಸದ ವೇಗ ಹೆಚ್ಚಳ ಹಾಗೂ ಸಮಯದ ಉಳಿತಾಯ ಹಿನ್ನೆಲೆ ಬಹುತೇಕ ಮಂದಿ ಇದರತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಎಷ್ಟು ಉಪಯೋಗ ಇದೆಯೋ ಅಷ್ಟೇ ಡೇಂಜರ್ ಎನ್ನುವುದಕ್ಕೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿರುವ ಬಾಲ್ಟಿಮೋರ್ ನಗರದ ಹೈಸ್ಕೂಲ್‍ನಲ್ಲಿ ಅಳವಡಿಕೆ ಮಾಡಲಾಗಿದ್ದ ಎಐ ತಂತ್ರಜ್ಞಾನ ಭದ್ರತಾ ವ್ಯವಸ್ಥೆಯ ದೋಷದಿಂದಾಗಿ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಕೆನ್‍ವುಡ್ ಹೈಸ್ಕೂಲ್‍ನ ವಿದ್ಯಾರ್ಥಿ ಟಕಿ ಅಲೆನ್ ಎಂಬಾತ ಶಾಲೆಯ ಆವರಣದಲ್ಲಿ ಕುಳಿತಿದ್ದ ವೇಳೆ ದಿಢೀರ್ ಪೊಲೀಸರು ಪಿಸ್ತೂಲ್ ಝಳಪಿಸುತ್ತಾ ಆತನನ್ನು ಸಮೀಪಿಸಿದ್ದು, ನೆಲದಲ್ಲಿ ಮಲಗುವಂತೆ ಸೂಚನೆ ನೀಡಿದ್ದಾರೆ. ನಂತರ ಬಳಿಕ ಆತನ ಕೈಗಳಿಗೆ ಕೋಳ ತೊಡಿಸಿದಾಗ ಅಲೆನ್ ಕಾರಣ ಕೇಳಿದ್ದಾನೆ.
ಅದಕ್ಕೆ ಪೊಲೀಸರು ಶಾಲೆಯ ಪ್ರವೇಶ ದ್ವಾರದಲ್ಲಿ ಅಳವಡಿಕೆ ಮಾಡಿರುವ ಎಐ ತಪಾಸಣಾ ವ್ಯವಸ್ಥೆಯಲ್ಲಿ ಅಲೆನ್ ಬ್ಯಾಗ್‍ನಲ್ಲಿ ಗನ್ ಪತ್ತೆ ಆಗಿದೆ ಎಂದು ಹೇಳಿದ್ದಾರೆ. ನಂತರ ಬ್ಯಾಗ್ ತಪಾಸಣೆ ನಡೆಸಿದಾಗ ಚಿಪ್ಸ್‌ನ ಪ್ಯಾಕೆಟ್ ಪತ್ತೆ ಆಗಿದ್ದು, ಎಐ ವ್ಯವಸ್ಥೆಯಲ್ಲಿನ ದೋಷವು ಚಿಪ್ಸ್ ಪ್ಯಾಕೇಟ್ ಅನ್ನು ಗನ್ ಎಂದು ಗುರುತಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಅಂತಾ ವರದಿ ಆಗಿದೆ.












Click it and Unblock the Notifications