AI ಒಂದು ಪೀಳಿಗೆಯಲ್ಲಿ ಒಮ್ಮೆ ಮಾತ್ರ ನಡೆಯುವ ಬದಲಾವಣೆ: ಅಮೆಜಾನ್ ಸಂಸ್ಥಾಪಕ
ಕೃತಕ ಬುದ್ಧಿಮತ್ತೆ (ಎಐ) ಜಗತ್ತನ್ನು ಬದಲಾಯಿಸುತ್ತಿದೆ ಎಂಬ ಚರ್ಚೆಗಳು ಜೋರಾಗಿವೆ. ಅಮೆರಿಕ ಮತ್ತು ಚೀನಾದಂತಹ ದೊಡ್ಡ ರಾಷ್ಟ್ರಗಳು ಎಐ ಸಂಚಲನ ಸೃಷ್ಟಿಸುತ್ತಿದೆ. ಕೆಲವು ಸಣ್ಣ ದೇಶಗಳು ಸ್ಮಾರ್ಟ್ ನೀತಿಗಳು, ಬಲವಾದ ಶಿಕ್ಷಣ ಬಳಸಿಕೊಂಡು ಮುನ್ನುಗ್ಗುತ್ತಿವೆ. ಈ ಐದು ಸಣ್ಣ ರಾಷ್ಟ್ರಗಳು ಕೃತಕ ಬುದ್ಧಿಮತ್ತೆಯಲ್ಲಿ ದೊಡ್ಡ ಅಲೆಗಳನ್ನು ಸೃಷ್ಟಿಸುತ್ತಿವೆ ಎನ್ನಲಾಗಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ AI ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಎಐ ಬೆಳವಣಿಗೆಯನ್ನು "ಕೈಗಾರಿಕಾ ಗುಳ್ಳೆ" ಎಂದು ಬಣ್ಣಿಸಿರುವ ಅವರು, ಈ ತಂತ್ರಜ್ಞಾನವು ನಿಜವಾಗಿದ್ದು ಅದು ಮೂಲಭೂತವಾಗಿ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ. AI ಪ್ರತಿಯೊಂದು ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಬೆಜೋಸ್ ಹೇಳಿದ್ದಾರೆ. ಇದು ಒಂದು ಪೀಳಿಗೆಯಲ್ಲಿ ಒಮ್ಮೆ ಮಾತ್ರ ನಡೆಯುವ ಬದಲಾವಣೆ ಎಂದೂ ಕರೆದಿದ್ದಾರೆ.

ಒಳ್ಳೆಯ ವಿಚಾರಗಳು ಮತ್ತು ಕೆಟ್ಟ ವಿಚಾರಗಳು, ಈ ಉತ್ಸಾಹದ ಮಧ್ಯದಲ್ಲಿ ಹೂಡಿಕೆದಾರರು ಒಳ್ಳೆಯ ವಿಚಾರಗಳು ಮತ್ತು ಕೆಟ್ಟ ವಿಚಾರಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಕಷ್ಟಕರವಾಗಿದೆ. ಅದು ಬಹುಶಃ ಇಂದು ಕೂಡ ನಡೆಯುತ್ತಿದೆ ಎಂದು ಬೆಜೋಸ್ ಅಭಿಪ್ರಾಯಪಟ್ಟಿದ್ದಾರೆ.
ಕೈಗಾರಿಕಾ ಮೂಲದ ಗುಳ್ಳೆಗಳು ಅಷ್ಟೊಂದು ಕೆಟ್ಟದ್ದಲ್ಲ, ಅದು ಒಳ್ಳೆಯದೂ ಆಗಿರಬಹುದು. ಸಮಾಜ ಆ ಆವಿಷ್ಕಾರಗಳಿಂದ ಪ್ರಯೋಜನ ಪಡೆಯುತ್ತವೆ. ಇಲ್ಲಿಯೂ ಅದೇ ಆಗಲಿದೆ. ಇದು ನಿಜ, ಎಐನಿಂದ ಸಮಾಜಕ್ಕೆ ಆಗುವ ಪ್ರಯೋಜನಗಳು ಅಗಾಧ. ಆದರೆ ಅದರರ್ಥ ನಡೆಯುತ್ತಿರುವ ಯಾವುದೂ ನಿಜವಲ್ಲ ಎಂದಲ್ಲ. ಎಐ ನಿಜ ಮತ್ತು ಅದು ಪ್ರತಿಯೊಂದು ಉದ್ಯಮವನ್ನೂ ಬದಲಾಯಿಸಲಿದೆ ಎಂದು ಬೆಜೋಸ್ ಹೇಳಿದ್ದಾರೆ.
ಅದೇ ಸಮಯದಲ್ಲಿ ಇತರ ತಜ್ಞರು ಎಐ ಬಗ್ಗೆ ಶಾಕಿಂಗ್ ಎಚ್ಚರಿಕೆಗಳನ್ನು ನೀಡಿದ್ದಾರೆ. ಆಂಥ್ರೊಪಿಕ್‌ನ ಸಿಇಒ ಡೇರಿಯೊ ಅಮೋಡೆ ಅವರು ಮುಂದಿನ ಐದು ವರ್ಷಗಳಲ್ಲಿ ಎಐನಿಂದ ಮೊದಲಿಗೆ ಶೇ 50ರಷ್ಟು ಉದ್ಯೋಗಗಳನ್ನು ತೆಗೆದುಹಾಕಬಹುದು ಎಂದು ಸೂಚಿಸಿದ್ದಾರೆ. ಸರ್ಕಾರಗಳು ಮುಂಬರುವ ಉದ್ಯೋಗ ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆ ಮಾಡುತ್ತಿವೆ ಎಂದು ಎಚ್ಚರಿಸಿದ್ದಾರೆ. ಗೂಗಲ್‌ನ ಮಾಜಿ ಹಿರಿಯ ಅಧಿಕಾರಿ ತ್ವರಿತ ಎಐ ಪ್ರಗತಿಗಳಿಂದಾಗಿ ಸಾಫ್ಟ್‌ವೇರ್‌ನಿಂದ ಕಾರ್ಯನಿರ್ವಾಹಕ ಪಾತ್ರಗಳವರೆಗಿನ ಕ್ಷೇತ್ರಗಳಲ್ಲಿ ಉದ್ಯೋಗದಿಂದ ವಜಾ ಮಾಡುವ ಪ್ರಕ್ರಿಯೆ 2027ರ ಹೊತ್ತಿಗೆ ಪ್ರಾರಂಭವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಈ ತಂತ್ರಜ್ಞಾನದಿಂದ ಮುಂಬರುವ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿರುವುದು ನಮ್ಮ ಕರ್ತವ್ಯ ಮತ್ತು ಬಾಧ್ಯತೆಯಾಗಿದೆ. ಇದು ಜನರ ಗಮನದಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ಈ ರೀತಿ ಆಗುತ್ತದೆ ಎಂದು ಅವರಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಇದು ಹುಚ್ಚನಂತೆ ತೋರುತ್ತದೆ, ಜನರು ಅದನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications