Advertisement

ಕೇರಳ ಸರ್ಕಾರ ಮೂಕಪ್ರೇಕ್ಷಕನಾಗಿದೆ; ಬಿಜೆಪಿ ಮುಖಂಡನ ಆಕ್ರೋಶ


ತಿರುವನಂತಪುರಂ, ಸೆಪ್ಟೆಂಬರ್ 6: ಕೇರಳದಲ್ಲಿ ಕೊರೊನಾ ಸೋಂಕು ಈ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯ ಸರ್ಕಾರ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂದು ರಾಜ್ಯ ಬಿಜೆಪಿ ಮುಖಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ದಾಖಲಾಗುತ್ತಿರುವ ಅರ್ಧದಷ್ಟು ಕೊರೊನಾ ಪ್ರಕರಣಗಳು ಕೇರಳ ರಾಜ್ಯವೊಂದರಿಂದಲೇ ಪತ್ತೆಯಾಗಿವೆ. ಹೀಗಿದ್ದರೂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮೂಕಪ್ರೇಕ್ಷಕನಾಗಿ ನೋಡುತ್ತಾ ಇದೆ. ಜನರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಕುಮ್ಮನಂ ರಾಜಶೇಖರನ್ ಆಕ್ಷೇಪಣೆ ಮಾಡಿದ್ದಾರೆ.

ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ

'ಕೊರೊನಾ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸಮಯದಲ್ಲಿ ಸರ್ಕಾರ ಸುಮ್ಮನೆ ಉಳಿದುಕೊಂಡಿದೆ. ಕೇರಳದ್ದು ಅತಿ ಕರುಣಾಜನಕ ಪರಿಸ್ಥಿತಿ. ರಾಜ್ಯ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ' ಎಂದು ದೂರಿದ್ದಾರೆ.

'ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸೂಕ್ತ ನೆರವು ದೊರೆತಿದೆ. ಕೇಂದ್ರ ಸಾಕಷ್ಟು ಹಣವನ್ನು ಕೇರಳದಲ್ಲಿ ಕೊರೊನಾ ನಿರ್ವಹಣೆಗೆ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಕೊರೊನಾದಿಂದ ಜನರನ್ನು ದೂರವುಳಿಸುವಲ್ಲಿ ಸೋತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ವಹಿಸಿದೆ' ಎಂದು ಆಕ್ರೋಶಗೊಂಡಿದ್ದಾರೆ.

Advertisement
Advertisement

'ಇದೇ ಈ ರಾಜ್ಯದ ಸಮಸ್ಯೆ. ಇತರೆ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕೊರೊನಾ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. ಆದರೆ ಕೇರಳದಲ್ಲಿ ದಿನನಿತ್ಯ ಒಂದು ಅಥವಾ ಎರಡು ಶೇಕಡ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದೆ. ಇದು ರಾಜ್ಯ ಸರ್ಕಾರದ ನಿಜವಾದ ಸೋಲು. ಸಾರ್ವಜನಿಕವಾಗಿ ಈ ಸೋಲಿಗೆ ರಾಜ್ಯ ಸರ್ಕಾರ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿದ್ದಾರೆ.

Advertisement

ಕೊರೊನಾ ಮೂರನೇ ಅಲೆ ಭೀತಿ ನಡುವೆ ಏರಿದೆ ಸೋಂಕಿನ 'ಆರ್' ದರ

ಕೇರಳದಲ್ಲಿ ಸೋಂಕಿನ ಪುನರುತ್ಪತ್ತಿ ದರ ಏರಿಕೆ; ಹಲವು ರಾಜ್ಯಗಳಲ್ಲಿ ಆಗಸ್ಟ್‌ ಕೊನೆಯ ವಾರದಲ್ಲಿ ಸೋಂಕಿನ ಪುನರುತ್ಪತ್ತಿ ದರ ಒಂದಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದ ರಾಷ್ಟ್ರೀಯ ಮಟ್ಟದ ಸರಾಸರಿಯಲ್ಲಿಯೂ ಏರಿಕೆ ದಾಖಲಾಗಿದೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಈ ದರ ಅತಿ ಹೆಚ್ಚಾಗಿದೆ. ಮಿಜೋರಾಂ ಹಾಗೂ ಜಮ್ಮು, ಕಾಶ್ಮೀರದಲ್ಲಿ ಆರ್ ದರ ಹಿಂದಿಗಿಂತ ಏರಿಕೆಯಾಗಿದೆ. ಕೇರಳದಲ್ಲಿ ಆರ್ ದರ 1.33 ಇದೆ. ದೇಶದಲ್ಲೇ ಅತಿ ಹೆಚ್ಚಿನ ಸಕ್ರಿಯ ಪ್ರಕರಣಗಳಿರುವ ರಾಜ್ಯ ಕೇರಳ ಆಗಿದೆ.

ಕೇರಳದಲ್ಲಿ ನಿಫಾ ಆತಂಕ: ಕೇರಳದಲ್ಲಿ ಕೊರೊನಾ ಜೊತೆಜೊತೆಗೆ ನಿಫಾ ಆತಂಕ ಆರಂಭವಾಗಿದೆ. ಕೇರಳದಲ್ಲಿ ನಿಪಾ ವೈರಸ್ ಸೋಂಕಿಗೆ 12 ವರ್ಷ ವಯಸ್ಸಿನ ಬಾಲಕ ಮೃತಪಟ್ಟಿರುವುದನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ದೃಢಪಡಿಸಿದ್ದಾರೆ. ಇದಾದ ಬಳಿಕ ಕೇಂದ್ರದಿಂದ ತಂಡವೊಂದು ಕೋಯಿಕ್ಕೋಡ್‌ ಕಡೆಗೆ ಧಾವಿಸಿದೆ.

ಕೋಯಿಕ್ಕಾಡ್ ಜಿಲ್ಲೆಯ ಬಾಲಕಿಗೂ ಈ ವೈರಸ್ ತಗುಲಿರುವುದು ಪತ್ತೆಯಾಗುತ್ತಿದ್ದಂತೆ ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲೂ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ವಿಶೇಷ ತಂಡ ಈ ಬಗ್ಗೆ ನಿಗಾವಹಿಸಿದ್ದು, ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಗುರುತಿಸಿ, ಚಿಕಿತ್ಸೆಗೊಳಪಡುವಂತೆ ನಿರ್ದೇಶನ ನೀಡಲಾಗಿದೆ. ಮೃತ ಬಾಲಕನ ಅಂತ್ಯಕ್ರಿಯೆಯನ್ನು ಮಾರ್ಗಸೂಚಿಯಂತೆ ಭಾನುವಾರವೇ ನೆರವೇರಿಸಲಾಗಿದೆ. 2018ರ ಮೇ 19ರಂದು ಕೇರಳದ ಇದೇ ಜಿಲ್ಲೆಯಲ್ಲಿ ಕಾಣಿಸಿಕೊಂಡ ನಿಫಾ ವೈರಸ್ 17 ಜನರನ್ನು ಬಲಿ ತೆಗೆದುಕೊಂಡಿತ್ತು. 2018ರ ಜೂನ್ 1ರಂತೆ 18 ಮಂದಿಗೆ ಮತ್ತೆ ಸೋಂಕು ದೃಢಪಟ್ಟಿತ್ತು.

English Summary

A BJP leader expressed anger at the spike in COVID-19 cases in Kerala, which has been reporting more than half of the country's daily cases for some time now
Read more...