IPL 2026: ಬಲಿಷ್ಠ ಎಸ್ಆರ್‌ಎಚ್‌ ತಂಡವನ್ನು ಕೇವಲ 165 ರನ್‌ಗಳಿಗೆ ಕಟ್ಟಿಹಾಕಿದ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್‌

KKR Vs SRH IPL 2026: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ (ಮೇ 3) ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಈ ವೇಳೆ ಟ್ರಾವಿಕ್‌ ಹೆಡ್‌ ಆಕರ್ಷಕ ಅರ್ಧಶತಕದ ನೆರವಿನಿಂದ ಎಸ್‌ಆರ್‌ಎಚ್‌ 165 ರನ್‌ ಪೇರಿಸಿತು.

ಟಾಸ್‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಮಾರಕ ಬೌಲಿಂಗ್ ದಾಳಿ ನಡೆಸಿ ಎಸ್‌ಆರ್‌ಎಚ್‌ ತಂಡವನ್ನು 19 ಓವರ್‌ಗಳಲ್ಲಿ ಆಲ್‌ಔಟ್‌ ಮಾಡಿ 165 ರನ್‌ಗಳಿಗೆ ಕಟ್ಟಿಹಾಕಿದರು.

KKR vs SRH IPL 2026 Travis Head Fifty Powers SRH to 165 Sunil Narine Creates 200-Wicket Record

ಅರ್ಧಶತಕ ಸಿಡಿಸಿದ ಟ್ರಾವಿಸ್ ಹೆಡ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಕೇವಲ 28 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 61 ರನ್‌ಗಳನ್ನು ಕಲೆಹಾಕಿದರು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್‌ಗಳ ಮಾರಕ ಬೌಲಿಂಗ್‌ ದಾಳಿಯಿಂದ ಹೈದರಾಬಾದ್ ತಂಡವನ್ನು ಕೇವಲ 165 ರನ್‌ಗಳಿಗೆ ನಿಯಂತ್ರಿಸಿದರು.

ಉಳಿದಂತೆ ಎಸ್‌ಆರ್‌ಎಚ್‌ ಪರ ಇಶಾನ್ ಕಿಶನ್ 42(29), ಅಭಿಷೇಕ್ ಶರ್ಮಾ 15(10), ಹೆನ್ರಿಚ್ ಕ್ಲಾಸೆನ್ 11(8), ನಾಯಕ ಪ್ಯಾಟ್‌ ಕಮಿನ್ಸ್‌ 10(8) ರನ್‌ ಗಳಿಸಿದ್ದು ಬಿಟ್ಟರೆ, ಮತ್ಯಾರು ಕೂಡ ಒಂದಂಕಿ ದಾಡದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕೆಕೆಆರ್ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸಿ ಮೈಲುಗೈ ಸಾಧಿಸಿದ್ದನ್ನ.

ಕೆಕೆಆರ್ ಬೌಲರ್‌ಗಳಿಂದ ಮಾರಕ ಬೌಲಿಂಗ್ ದಾಳಿ

ಕೆಕೆಆರ್ ತಂಡದ ಮಿಸ್ಟರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ನಾಲ್ಕು ಓವರ್‌ ಬೌಲಿಂಗ್ ಮಾಡಿ 36 ರನ್‌ ಕೊಟ್ಟು 3 ವಿಕೆಟ್‌ ಕಿತ್ತರು. ಇನ್ನೂ ಸುನಿಲ್ ನರೈನ್ (2/31) ತಮ್ಮ ಸ್ಪಿನ್ ಮೋಡಿ ಮೂಲಕ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಕಾರ್ತಿಕ್ ತ್ಯಾಗಿ 2 ವಿಕೆಟ್‌ ಕಬಳಿಸಿದರೆ, ವೈಭವ್ ಅರೋರಾ, ಕ್ಯಾಮೆರಾನ್ ಗ್ರೀನ್ ಹಾಗೂ ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.

ತಮ್ಮ ನಾಲ್ಕನೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದರು. ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಯುಜ್ವೇಂದ್ರ ಚಹಾಲ್ ಮತ್ತು ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದ ಮೊದಲ ಇಬ್ಬರು ಬೌಲರ್‌ಗಳಾಗಿದ್ದಾರೆ. ಈ ಮೂಲಕ ಸುನಿಲ್ ನರೈನ್ ಅವರು ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+