ಕುಟುಂಬದ ತಂಟೆಗೆ ಬಾರದಿದ್ದರೆ ತುಂಬಾ ಒಳ್ಳೆಯದು, ಅಭಿಮಾನಿಗೆ ಎಸ್‌ಆರ್‌ಎಚ್ ಸ್ಟಾರ್ ಹೆನ್ರಿಚ್ ಕ್ಲಾಸೆನ್ ಖಡಕ್ ವಾರ್ನ್‌

Heinrich Klaasen: ಐಪಿಎಲ್ 2026ರ ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ಮೈದಾನದಲ್ಲಿ ಬೌಲರ್‌ಗಳನ್ನು ಬೆಂಡೆತ್ತುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ಇದೀಗ ಮೈದಾನದ ಹೊರಗಿನ ಒಂದು ಘಟನೆಯಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬರಿಗೆ ಎಚ್ಚರಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸುವ ಮೂಲಕ ಎದರಾಳಿ ಬೌಲರ್‌ಗಳ ಬವರಿಳಿಸುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ಇದೀಗ ಮೈದಾನದ ಹೊರಗೆ ಅಭಿಮಾನಿಗಳ ಅತೀರೇಕದ ವರ್ತನೆಗೆ ಆಕ್ರೋಶಗೊಂಡಿದ್ದಾರೆ. ತಮ್ಮ ಕುಟುಂಬದ ಖಾಸಗಿತನಕ್ಕೆ ಅಡ್ಡಿಪಡಿಸಿದ ಅಭಿಮಾನಿಯೊಬ್ಬರಿಗೆ ಸಾರ್ವಜನಿಕವಾಗಿಯೇ ಖಡಕ್ ವಾರ್ನಿಂಗ್ ನೀಡುವ ಮೂಲಕ ಕ್ಲಾಸೆನ್ ಸುದ್ದಿಯಲ್ಲಿದ್ದಾರೆ.

Heinrich Klaasen Warns Fan Over Privacy Breach Sunrisers Hyderabad Star s Video Goes Guge Viral

ರೊಚ್ಚಿಗೆದ್ದ ಹೆನ್ರಿಚ್ ಕ್ಲಾಸೆನ್

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಎಸ್‌ಆರ್‌ಎಚ್ ತಂಡವು ಹೋಟೆಲ್‌ನಿಂದ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು ಪುಟ್ಟ ಮಗುವಿನೊಂದಿಗೆ ನಡೆದು ಬರುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಸಮೀಪಕ್ಕೆ ಬಂದು ಕ್ಯಾಮೆರಾ ಹಿಡಿದು ಸತತವಾಗಿ ವಿಡಿಯೋ ಮಾಡಿದ್ದಾರೆ. ಇದನ್ನ ಕಂಡ ಕ್ಲಾಸೆನ್ ಮೊದಲಿಗೆ ತಾಳ್ಮೆಯಿಂದ "ವಿಡಿಯೋ ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ. ಆದರೆ ಮತ್ತೆ ಫ್ಯಾನ್ ಎಂಬ ನೆಪವೊಡ್ಡಿ ಕ್ಯಾಮೆರಾವನ್ನು ಕ್ಲಾಸೆನ್ ಕುಟುಂಬದ ಕಡೆ ತಿರುಗಿಸಿದ್ದಾನೆ. ಇದರಿಂದ ತಾಳ್ಮೆ ಕಳದುಕೊಂಡ ಕ್ಲಾಸೆನ್ ಆಕ್ರೋಶ ಹೊರಹಾಕಿದ್ದಾರೆ.

ಅಭಿಮಾನಿಗೆ ಕ್ಲಾಸೆನ್ ಖಡಕ್ ಎಚ್ಚರಿಕೆ

"ನಾನು ಈಗಾಗಲೇ ನಿನಗೆ ಬೇಡ ಎಂದು ಹೇಳಿದ್ದೇನೆ. ಈಗ ನಾನು ಅಲ್ಲಿಂದ ವಾಪಸ್ ಬರುವಷ್ಟರಲ್ಲಿ ನೀನು ಮತ್ತೆ ವಿಡಿಯೋ ಅಥವಾ ಫೋಟೋ ತೆಗೆದರೆ, ನಿಜವಾಗಿಯೂ ನಿನ್ನನ್ನು ಹೊಡೆಯುತ್ತೇನೆ," ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಅಲ್ಲಿಂದ ದೂರ ಸರಿಸಿದ್ದಾರೆ.

ಇನ್ನೂ ಈ ಘಟನೆಯ ವಿಡಿಯೋ ಸಾಮಾಜಿಕ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕ್ಲಾಸೆನ್‌ಗೆ ಬಂಬಲ ಸೂಚಿಸಿದ್ದಾರೆ. "ಆಟಗಾರರು ಕೇವಲ ಮೈದಾನದಲ್ಲಿ ಮಾತ್ರ ಸಾರ್ವಜನಿಕ ಆಸ್ತಿ, ಅವರ ಕುಟುಂಬದೊಂದಿಗೆ ಇರುವಾಗ ಅವರಿಗೆ ಖಾಸಗಿತನದ ಅಗತ್ಯವಿರುತ್ತದೆ. ಅಭಿಮಾನದ ಹೆಸರಿನಲ್ಲಿ ಅವರ ವೈಯಕ್ತಿಕ ಬದುಕಿಗೆ ತೊಂದರೆ ಕೊಡುವುದು ಸರಿಯಲ್ಲ," ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೆನ್ರಿಚ್ ಕ್ಲಾಸೆನ್ ಮೈದಾನದಲ್ಲಿ ಎಷ್ಟು ಸ್ಫೋಟಕ ಬ್ಯಾಟರ್ ಆಗಿದ್ದಾರೆಯೋ, ವೈಯಕ್ತಿಕ ಜೀವನದ ಶಿಸ್ತಿನಲ್ಲೂ ಅಷ್ಟೇ ಕಟ್ಟುನಿಟ್ಟಾಗಿದ್ದಾರೆ. ಅಭಿಮಾನಿಗಳ ಹುಚ್ಚು ಸಾಹಸಗಳು ಕೆಲವೊಮ್ಮೆ ಆಟಗಾರರ ನೆಮ್ಮದಿಗೆ ಭಂಗ ತರುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಅಲ್ಲದೆ ಆಟಗಾರರ ಸಾಧನೆಯನ್ನು ಮೆಚ್ಚಬೇಕೇ ಹೊರತು ಅವರ ಖಾಸಗಿ ಕ್ಷಣಗಳನ್ನು ಕೆದಕಬಾರದು ಎಂಬುದಕ್ಕೆ ಈ ಘಟನೆಯೇ ಒಂದು ಪ್ರಮುಖ ಪಾಠವಾಗಿದೆ.

ಚರ್ಚೆ ಹುಟ್ಟುಹಾಕಿದ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಆಟಗಾರರ ಖಾಸಗಿತನ, ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾಗಳ ಅತಿಯಾದ ಬಳಕೆ ಮತ್ತು ಅಭಿಮಾನಿಗಳ ಉತ್ಸಾಹ ಹಾಗೂ ಅವರ ವೈಯಕ್ತಿಕ ಜೀವನದ ಹಸ್ತಕ್ಷೇಪದ ನಡುವಿನ ಅಂತರದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಮತ್ತೊಂದೆಡೆ ಕ್ಲಾಸನ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಸೀಸನ್‌ನಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡುವುದನ್ನು ಮುಂದುವರಿಸಿದ್ದಾರೆ. ಅವರು 9 ಇನ್ನಿಂಗ್ಸ್‌ಗಳಲ್ಲಿ 59.14 ಸರಾಸರಿಯಲ್ಲಿ 414 ರನ್ ಗಳಿಸಿದ್ದಾರೆ.

ಅವರ ಸ್ಟ್ರೈಕ್ ರೇಟ್ ಬಗ್ಗೆ ಕೆಲವರು ಟೀಕೆಗಳನ್ನು ಮಾಡುತ್ತಿದ್ದರು. ಆದರೂ ಕ್ಲಾಸನ್ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಂಡವು ಅಂಕಪಟ್ಟಿಯಲ್ಲಿ ಮೇಲೆರಲು ಶ್ರಮಿಸುತ್ತಿದ್ದಾರೆ. ಅವರು ಪ್ರಸ್ತುತ 157.41 ಸ್ಟ್ರೈಕ್ ರೇಟ್ ಹೊಂದಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತಮ್ಮ ಸಹ ಆಟಗಾರ ಅಭಿಷೇಕ್ ಶರ್ಮಾ ನಂತರದ ಎರಡನೇ ಸ್ಥಾನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+