SSLC Result 2026: ಕನ್ನಡಕ್ಕೆ ಭರ್ಜರಿ ಜಯ, ಗಣಿತ-ಹಿಂದಿಯಲ್ಲೂ ಮುನ್ನಡೆ, ದಾಖಲೆ ಬರೆದ ಫಲಿತಾಂಶ

SSLC Subject Wise Result 2026: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಗಣಿತ ವಿಷಯದಲ್ಲಿ ಮಕ್ಕಳು ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ. 90 ಕ್ಕಿಂತ ಹೆಚ್ಚಿರಬೇಕು. ಆದರೆ ಅದು ಇಷ್ಟು ವರ್ಷ ಆಗಲಿರಲಿಲ್ಲ. ಆದರೆ 2026ರಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ.97.24 ರಷ್ಟು ದಾಖಲಾಗಿದೆ. ಅದೇ ರೀತಿ ಗಣಿತ ಮತ್ತು ತೃತೀಯ ಭಾಷೆ ಹಿಂದಿಯಲ್ಲೂ ಮಕ್ಕಳ ದಾಖಲೆ ಬರೆದಿದ್ದಾರೆ.

ಕನ್ನಡದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದವರ ಸಂಖ್ಯೆ 7,69,926ರಷ್ಟಿದ್ದರೆ ಅದರಲ್ಲಿ ಬಹುತೇಕ ಮಂದಿ 74,860 ವಿದ್ಯಾರ್ಥಿಗಳು ತೇರ್ಗಡೆ (ಶೇ.97.24) ಆಗಿದ್ದಾರೆ. ಕಳೆದ ವರ್ಷ ಕನ್ನಡ ವಿಷಯದಲ್ಲಿ ಬರೀ ಶೇಕಡಾ 88.56ರಷ್ಟು ಸಾಧನೆ ಆಗಿತ್ತು. ಅಂದು 70,533ಮಂದಿ ಮಾತ್ರವೇ ಉತ್ತೀರ್ಣರಾಗಿದ್ದರು. ಹೀಗಾಗಿ ಫಲಿತಾಂಶ ಕಡಿಮೆ ಬಂದಿತ್ತು.

SSLC Result 2026

ಕರುನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು, ಇಲ್ಲಿ ಕನ್ನಡವೇ ಸಾರ್ವಭೌಮ ಆಗಿರಬೇಕು. ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳು ಕನ್ನಡ ಮೇಲೆ ಹೆಚ್ಚು ಒಲವು ತೋರಿದ್ದು, ಮಹತ್ವದ ಘಟ್ಟವಾದ 10ನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತ್ಯಧಿಕ ಪಲಿತಾಂಶ ಬಂದಿರುವುದು ಖುಷಿಯ ವಿಷಯವಾಗಿದೆ.

ಗೊಂದಲ ಮೂಡಿಸಿದ್ದ ಹಿಂದಿ ವಿಷಯದಲ್ಲಿ ಗರಿಷ್ಠ ಸಾಧನೆ

ಪ್ರಸಕ್ತ ಸಾಲಿನಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕ ನೀಡುವ ಬದಲು ಗ್ರೇಡ್ ನೀಡಲು ಸರ್ಕಾರ ಮುಂದಾಗಿತ್ತು. ಕೊನೆಗೆ ಹೈಕೋರ್ಟ್ ಆದೇಶದ ಬಳಿಕ ಹಿಂದೆ ಸರಿಯಿತು. ಹಿಂದಿ ವಿಷಯದಲ್ಲಿ ಶೇಕಡಾ 98.55ರಷ್ಟು ಫಲಿತಾಂಶ ದಾಖಲಾಗಿದೆ. ಈ ಮೂಲಕ ಹಿಂದಿಯಲ್ಲೂ ನಾವು ಉತ್ತೀರ್ಣರಾಗುತ್ತೇವೆ, ಸಾಧನೆ ಮಾಡುತ್ತೇವೆ ಎಂದು ತೋರಿಸಿಕೊಟ್ಟಿದ್ದಾರೆ. ಹಿಂದಿ ವಿಷಯದಲ್ಲಿ 7,69,951 ಮಂದಿ ಪರೀಕ್ಷೆ ಬರೆದವರಲ್ಲಿ 7,58,623 ಮಂದಿ (98.55%) ಉತ್ತೀರ್ಣರಾಗಿದ್ದಾರೆ.

ಗಣಿತ ವಿಷಯದಲ್ಲೂ ಸಾಧನೆ

ಗಣತವೆಂದರೆ ಮಕ್ಕಳಿಗೆ ಆಸಕ್ತಿ ಕಡಿಮೆ, ತೇರ್ಗಡೆ ಪ್ರಮಾಣ ಕಡಿಮೆ ಎನ್ನುವ ಮಾತು ಈ ವರ್ಷ ಅಕ್ಷರಶಃ ಸುಳ್ಳಾಗಿದೆ. ಕಾರಣ ಗಣಿತ ವಿಷಯದಲ್ಲಿ 2026ರಲ್ಲಿ ಶೇಕಡಾ 97.98ರಷ್ಟು ಪಲಿತಾಂಶ ಹೊರ ಬಿದ್ದಿದೆ. ಪರೀಕ್ಷೆ ಬರೆದ ಒಟ್ಟು 7,69,447 ವಿದ್ಯಾರ್ಥಿಗಳಲ್ಲಿ 7,53,882 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+