ತಮಿಳುನಾಡು ಚುನಾವಣಾ ಫಲಿತಾಂಶ: ಭಾರೀ ಕುತೂಹಲಕ್ಕೆ ಕಾರಣವಾದ ತ್ರಿಶಾ ತಿರುಮಲ ಭೇಟಿ
ಖ್ಯಾತ ನಟಿ ತ್ರಿಶಾ ಕೃಷ್ಣನ್ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಇವರು ತಿರುಮಲಕ್ಕೆ ಭೇಟಿ ನೀಡಿದರು. ಈ ವೇಳೆ ತ್ರಿಶಾ ಅವರು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸೋಮವಾರ ತಿರುಪತಿಯ ಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ.
ತ್ರಿಶಾ ಸೋಮವಾರ ಮುಂಜಾನೆ ತಿರುಮಲ ಸನ್ನಿಧಿಯಲ್ಲಿನ ಫೋಟೋಗಳು ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ತ್ರಿಶಾ ಸರಳವಾದ ಬಿಳಿ ಬಣ್ಣದ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ದೇವಸ್ಥಾನದ ಆವರಣದಲ್ಲಿ ಅವರು ನಡೆದು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇವರ ದರ್ಶನಕ್ಕಾಗಿ ಸಾಲಾಗಿ ನಿಂತಿದ್ದ ಅಭಿಮಾನಿಗಳು ನಟಿಯನ್ನು ಕಂಡು ಫುಲ್ ಖುಷ್ ಆದರು. ಇದೇ ವೇಳೆ ಅಭಿಮಾನಿಗಳು ತ್ರಿಶಾ ಅವರಿಗೆ ಶುಭ ಕೋರಿದರು.

ದೇವರ ದರ್ಶನಕ್ಕೆ ಬರುವ ಮುನ್ನ ತ್ರಿಶಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತಿರುಪತಿ ಎಂದು ಬರೆದು ಫೋಟೋ ಹಂಚಿಕೊಂಡಿದ್ದರು. ಈ ಭೇಟಿಯು ಹೆಚ್ಚು ಚರ್ಚೆಗೆ ಒಳಗಾಗಲು ಮುಖ್ಯ ಕಾರಣವೆಂದರೆ, ಇಂದು ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅದೃಷ್ಟ ಪರೀಕ್ಷೆ ನಡೆಸುತ್ತಿದೆ. ಈ ಪಕ್ಷವನ್ನು ದಳಪತಿ ವಿಜಯ್ ಮುನ್ನಡೆಸುತ್ತಿದ್ದು, ತ್ರಿಶಾ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ.
ಇದಕ್ಕೂ ಮೊದಲು ವಿಜಯ್ ಚೆನ್ನೈನಲ್ಲಿ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ತ್ರಿಶಾ ಸಹ ಇದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರ ವಿಡಿಯೋಗಳು ಸಹ ಸಖತ್ ಸದ್ದು ಮಾಡಿದ್ದವು. ನಟ ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರ ವಿಚ್ಛೇದನದ ಸುದ್ದಿ ಹಬ್ಬಿದ ಕೆಲ ದಿನಗಳ ಬಳಿಕ ವಿಜಯ್, ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು.
ತಮಿಳುನಾಡಿನ ಚುನಾವಣೆಯ ಫಲಿತಾಂಶದ ದಿನದಂದೇ ತ್ರಿಶಾ ತಿರುಮಲಕ್ಕೆ ಭೇಟಿ ನೀಡಿದ್ದು ಹೆಚ್ಚು ಚರ್ಚೆ ಹುಟ್ಟು ಹಾಕಿದೆ. ಟಿವಿಕೆ ತಮಿಳುನಾಡು ಚುನಾವಣೆಯಲ್ಲಿ ಸರಳ ಬಹುಮತದತ್ತ ಸಾಗಿದ್ದು ಈ ಹಿನ್ನೆಲೆ ತ್ರಿಶಾ ದೇವರ ಮೊರೆ ಹೋಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.












Click it and Unblock the Notifications