Puducherry Polls 2026: ಪುದುಚೇರಿಯಲ್ಲೂ ವಿಜಯ್ ಹವಾ - ರಾಜ್ಯಸ್ಥಾನದ ವಿಷಯವೇ ಪ್ರಮುಖ ಚರ್ಚೆ

Puducherry Polls 2026: 2026ನೇ ಸಾಲಿನಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳಂ ವಿಧಾನಸಭೆ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭೆ ಚುನಾವಣೆಯೂ ನಡೆದಿದೆ. ಪುದುಚೇರಿಯು ಕೇಂದ್ರಾಡಳಿತ ಪ್ರದೇಶವಾಗಿದ್ದು, ಈ ರಾಜ್ಯದ ವಿಧಾನಸಭೆಯು 30 ಸ್ಥಾನಗಳನ್ನು ಹೊಂದಿದೆ. ಈ ಬಾರಿ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ನಟ - ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಹ ಸ್ಪರ್ಧೆ ಮಾಡಿದೆ. ಹೀಗಾಗಿ, ಈ ರಾಜ್ಯದ ವಿಧಾನಸಭೆ ಚುನಾವಣೆಯು ಸಹ ಮಹತ್ವ ಪಡೆದುಕೊಂಡಿದೆ.

ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ (AINRC) ಅಧಿಕಾರದಲ್ಲಿದೆ. ಎ.ಐ.ಎನ್.ಆರ್.ಸಿ.ಯೊಂದಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಬಾರಿ ಪುದುಚೇರಿಯಲ್ಲಿ ಆಡಳಿತಾರೂಢ ಎ.ಐ.ಎನ್.ಆರ್.ಸಿ ಮತ್ತು ಬಿಜೆಪಿ ಎಐಎಡಿಎಂಕೆ ಒಕ್ಕೂಟವು ಮೈತ್ರಿಕೂಟ ರಚಿಸಿಕೊಂಡಿವೆ. ಎಐಎನ್ಆರ್‌ಸಿ 16 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಇನ್ನುಳಿದ 14 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.

Puducherry Polls 2026

ಪುದುಚೇರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಎನ್‌ಡಿಎ ಎರಡನೇ ಬಾರಿಗೆ ಅಧಿಕಾರಕ್ಕೇರು ನಿರೀಕ್ಷೆಯಲ್ಲಿದೆ. ಆದಾಗ್ಯೂ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಲವು ಸ್ಥಾನಗಳಲ್ಲಿ ಬಹುಕೋನ ಸ್ಪರ್ಧೆ ಎದುರಾಗಿತ್ತು. ತಮಿಳುನಾಡಿನ ವಿಧಾನಸಭೆ ಚುನಾವಣೆಯ ಜೊತೆ ಜೊತೆಗೆ ಪುದುಚೇರಿಯ ವಿಧಾನಸಭೆ ಚುನಾವಣೆಯಲ್ಲೂ ತಮಿಳಗ ವೆಟ್ರಿ ಕಳಗಂ ಸ್ಪರ್ಧೆ ಮಾಡಿರುವುದು ಹಾಗೂ ವಿಜಯ್ ಹವಾ ಇಲ್ಲೂ ಇರುವುದು ಈ ಬಾರಿ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯ ಏರ್ಪಟ್ಟಿದೆ. ಟಿವಿಕೆ ಪ್ರವೇಶದಿಂದ ಹಲವು ಪಕ್ಷಗಳಿಗೆ ಮತ ವಿಭಜನೆಯ ಆತಂಕ ಶುರುವಾಗಿದೆ.

ಪುದುಚೇರಿಯಲ್ಲಿ ಆಡಳಿತಾರೂಢ ಎನ್‌ಡಿಎಯ - ಎಐಎನ್‌ಆರ್‌ಸಿ (ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್), ಬಿಜೆಪಿ, ಎಐಎಡಿಎಂಕೆ ಮತ್ತು ಎಲ್‌ಜೆಕೆ (ಲಚ್ಚಿಯಾ ಜನನಾಯಕ ಕಚ್ಚಿ). ವಿರೋಧ ಪಕ್ಷದ ಇಂಡಿಯಾ ಬಣದಲ್ಲಿ ಕಾಂಗ್ರೆಸ್, ಡಿಎಂಕೆ ಮತ್ತು ವಿಸಿಕೆ ಸೇರಿವೆ. ಇದರೊಂದಿಗೆ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆಯು ಇಬ್ಬರು ಹಾಲಿ ಶಾಸಕರನ್ನು ಕಣಕ್ಕಿಳಿಸಿದೆ. ಸಾಯಿ ಜೆ ಸರವಣನ್ ಕುಮಾರ್ ಎಐಎನ್‌ಆರ್‌ಸಿ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಪಕ್ಷವು ಇತರ ನಾಲ್ಕು ಕ್ಷೇತ್ರಗಳಲ್ಲಿ ಮಾಜಿ ಶಾಸಕರನ್ನು ಸಹ ಕಣಕ್ಕಿಳಿಸಿದೆ.

Puducherry Polls 2026: ಪುದುಚೇರಿ ವಿಧಾನಸಭೆ ಚುನಾವಣೆ

ಈ ಬಾರಿಯ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಪುದುಚೇರಿಗೆ ರಾಜ್ಯ ಸ್ಥಾನವನ್ನು ನೀಡಬೇಕು ಎನ್ನುವ ವಿಚಾರವು ಪ್ರಧಾನವಾಗಿತ್ತು. ಮುಖ್ಯಮಂತ್ರಿ ಎನ್ ರಂಗಸಾಮಿ ಅವರ ರಾಜ್ಯ ಸ್ಥಾನಮಾನದ ಭರವಸೆಯ ಬೇಡಿಕೆಯನ್ನು ತಿರಸ್ಕರಿಸಿದ್ದರು. ಚುನಾವಣಾ ಪ್ರಚಾರವು ಜನಪ್ರಿಯ ಭರವಸೆಗಳಿಂದ ಕೂಡಿದೆ. ಬಿಜೆಪಿ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು, ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ಸಹಾಯಧನ ಹೆಚ್ಚಳವನ್ನು ಭರವಸೆ ನೀಡಿದೆ. ನವಜಾತ ಹೆಣ್ಣು ಶಿಶುಗಳಿಗೆ ಸರ್ಕಾರಿ ಠೇವಣಿಯನ್ನು 1 ಲಕ್ಷ ರೂ.ಗೆ ದ್ವಿಗುಣಗೊಳಿಸುವುದಾಗಿ ರಂಗಸಾಮಿ ಘೋಷಿಸಿದ್ದಾರೆ.

ರಾಜ್ಯ ಸ್ಥಾನಮಾನದ ಜೊತೆಗೆ, ಕಾಂಗ್ರೆಸ್ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 2,500 ರೂ., ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು 4 ಲಕ್ಷ ರೂ.ಗಳ ಆರೋಗ್ಯ ವಿಮಾ ರಕ್ಷಣೆಯನ್ನು ಭರವಸೆ ನೀಡಿತ್ತು. ಇನ್ನು ವಿಜಯ್ ಅವರ ಟಿವಿಕೆ ಪಕ್ಷವು 25,000 ಮಾತೃತ್ವ ಸಹಾಯ, ಉಚಿತ ಎಲ್‌ಪಿಜಿ ಮತ್ತು ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+