ಮಂಡೆ ಬಿಸಿ ತಂಪು ಮಾಡಲು ಒಂದಿಷ್ಟು ಜೋಕ್ಸ್

ಸುಬ್ಬು ತನ್ನ ಆಪ್ತಮಿತ್ರ ಡಿಬ್ಬಿಯೊಡನೆ ಹರಟುತ್ತಿದ್ದ.

ಸುಬ್ಬು : ನನ್ನ ಚಿಕ್ಕಪ್ಪ ಇಪ್ಪತ್ತೈದು ವರ್ಷಗಳ ಕಾಲ ಅಮೆರಿಕದಲ್ಲಿ ಜೀವಿಸಿದ ನಂತರ ಭಾರತಕ್ಕೆ ಬಂದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು, ಭಾರತದ ನೆಲ ಸ್ಪರ್ಶಿಸುತ್ತಿದ್ದಂತೆ ಸಾಷ್ಟಾಂಗ ಮಲಗಿಬಿಟ್ಟು ಭೂಮಿಯನ್ನು ಚುಂಬಿಸಿದರು.

ಡಿಬ್ಬಿ : ಇನ್ನೇನೋ ಮತ್ತೆ, ಅದು ಅವರಿಗೆ ತಮ್ಮ ಭೂತಾಯಿಯ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ.

ಸುಬ್ಬು : ಅದು ಹಾಗಲ್ಲ ಮಗನೆ, ವಿಮಾನದಿಂದ ಇಳಿಯುತ್ತಿದ್ದಂತೆ ಬಾಳೆ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟರು!

***
ಸುಬ್ಬು ಮತ್ತು ಡಿಬ್ಬಿ ಬಿಎಂಟಿಸಿ ಬಸ್ ಹತ್ತಿದ್ದರು. ಸುಬ್ಬು ತನಗಾದ ಅವಮಾನವನ್ನು ಹೇಳಿಕೊಳ್ಳುತ್ತಿದ್ದ.

ಸುಬ್ಬು : ಆ ಕಂಡಕ್ಟರ್‌ಗೆ ಎಷ್ಟು ಧಿಮಾಕು ನೋಡೋ. ನಾನೇನು ಟಿಕೆಟ್ಟೇ ತಗೊಂಡಿಲ್ಲ ಎನ್ನುವ ಹಾಗೆ ಗುರಾಯಿಸುತ್ತಿದ್ದ.

ಡಿಬ್ಬಿ : ಅದಕ್ಕೆ ನೀನೇನು ಮಾಡಿದಿ?

ಸುಬ್ಬು : ಮಾಡೋದೇನು, ನನ್ನ ಬಳಿಯೂ ಟಿಕೆಟ್ ಇರುವವರ ಹಾಗೆ ಅವನನ್ನು ಗುರಾಯಿಸಿದೆ!

***
ಮರ್ಡರ್ ಕೇಸಲ್ಲಿ ಸುಬ್ಬು ಮತ್ತು ಡಿಬ್ಬಿ ಜೈಲು ಸೇರಿದ್ದರು. ಸಂಜೆ ರಾಗಿ ಬೀಸಿದ ಮೇಲೆ ಇಬ್ಬರು ಜೈಲುವಾಸಿಗಳು ಲೋಕಾಭಿರಾಮವಾಗಿ ಸಂಭಾಷಿಸುತ್ತಿದ್ದರು.

ಸುಬ್ಬು : ಏಯ್, ನಿನ್ನ ಹೆಂಡತಿಯ ಹುಟ್ಟುಹಬ್ಬದಂದು ಆಕೆಗೆ ವಿಷ್ ಮಾಡಿ, ಆಕೆಯೊಂದಿಗೆ ಕೆಲ ದಿನವಾದರೂ ಸಂತೋಷವಾಗಿರಬೇಕೆಂದು ಜೈಲಿನಿಂದ ತಪ್ಪಿಸಿಕೊಂಡಿದ್ದು ನೀನೇ ಅಲ್ವಾ?

ಡಿಬ್ಬಿ : ಹೌದು ಅದು ನಾನೇ.

ಸುಬ್ಬು : ಹಾಗಿದ್ರೆ ಇಷ್ಟು ಬೇಗನೆ ಹ್ಯಾಗೆ ಮತ್ತೆ ಜೈಲು ಸೇರಿಕೊಂಡೆ?

ಡಿಬ್ಬಿ : ನಾನು ನನ್ನ ಹೆಂಡತಿಗೆ ವಿಷ್ ಮಾಡಿ ಉಡುಗೊರೆ ನೀಡಿದ ಮರುಗಳಿಗೆಯೆ ನನ್ನನ್ನು ಪೊಲೀಸರಿಗೆ ಒಪ್ಪಿಸಿ ಹೆಂಡತಿ ಬಹುಮಾನ ಗಿಟ್ಟಿಸಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+