2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ


ಬೆಂಗಳೂರು, ಡಿಸೆಂಬರ್ 27; ಕರ್ನಾಟಕದಲ್ಲಿ ಮಂಜೂರಾದ ಒಟ್ಟು ಸರ್ಕಾರಿ ಹುದ್ದೆಗಳು ಎಷ್ಟು?, ಈಗ ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಸರ್ಕಾರ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದೆ. ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ, ಕಾಲ-ಕಾಲಕ್ಕೆ ಸರ್ಕಾರ ಇಲಾಖೆಗಳ ಪ್ರಸ್ತಾವನೆಗಳ ಅನ್ವಯ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದೆ.

Advertisement

ಬೆಳಗಾವಿಯಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಿತು. ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀಕಂಠೇಗೌಡ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪ್ರಶ್ನಿಸಿದ್ದರು. ರಾಜ್ಯದಲ್ಲಿ ಒಟ್ಟು ಮಂಜೂರಾದ ಸರ್ಕಾರಿ ಹುದ್ದೆಗಳೆಷ್ಟು? (ಇಲಾಖಾವಾರು ಮಾಹಿತಿ ನೀಡುವುದು).

Advertisement

ಪಂಚಾಯತ್ ರಾಜ್ ಇಲಾಖೆ ನೇಮಕಾತಿ; ಬೆಂಗಳೂರಲ್ಲಿ ಕೆಲಸ

ಈ ಪೈಕಿ ಭರ್ತಿಯಾದ ಹುದ್ದೆಗಳು ಎಷ್ಟು?, ಖಾಲಿ ಇರುವ ಹುದ್ದೆಗಳು ಎಷ್ಟು? (ಇಲಾಖಾವಾರು ಮಾಹಿತಿ ನೀಡುವುದು). ಹುದ್ದೆಗಳು ಖಾಲಿ ಇರುವುದರಿಂದ ನೌಕರರ ಮೇಲೆ ಒತ್ತಡ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?. ಖಾಲಿ ಇರುವ ಹುದ್ದೆಗಳನ್ನು ಯಾವ ಕಾಲಮಿತಿಯೊಳಗೆ ಭರ್ತಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದರು.

ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

ಕೋವಿಡ್ ಪರಿಸ್ಥಿತಿ ಕಾರಣ ಕಳೆದ ಎರಡು ವರ್ಷಗಳಿಂದ ವಿವಿಧ ಇಲಾಖೆಗಳ ನೇಮಕಾತಿ ಸ್ಥಗಿತಗೊಂಡಿತ್ತು. ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲಾ ಇಲಾಖೆಗಳ ನೇಮಕಾತಿಗೆ ಸರ್ಕಾರವೇ ತಡೆ ನೀಡಿತ್ತು. ಈಗ ಅತಿ ಅಗತ್ಯ ಇಲಾಖೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆಯನ್ನು ನೀಡಿದೆ. ವಿವಿಧ ಇಲಾಖೆಗಳ ನೇಮಕಾತಿಗಳು 2022ರಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ.

ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರದ ಉತ್ತರ

ಸರ್ಕಾರ ಇದಕ್ಕೆ ಉತ್ತರ ನೀಡಿದ್ದು, ರಾಜ್ಯದಲ್ಲಿ ಒಟ್ಟು ಮಂಜೂರಾದ ಹುದ್ದೆಗಳು 7,68,975 ಎಂದು ಮಾಹಿತಿ ನೀಡಿದೆ. 5,16,073 ಹುದ್ದೆಗಳು ಭರ್ತಿಯಾಗಿವೆ. 2,52,902 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಹೇಳಿದೆ.

ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರ ಮಾಹಿತಿ ನೀಡಿದ್ದು ಆರ್ಥಿಕ ಮಿತವ್ಯಯ ಜಾರಿಯಲ್ಲಿದ್ದರೂ ಸಹ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಪ್ರಕರಣವಾರು ಪರಿಶೀಲಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳ ಭರ್ತಿಗೆ ಸಹಮತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಇಲಾಖೆ, ಖಾಲಿ ಇರುವ ಹುದ್ದೆಗಳ ವಿವರ

ಕೃಷಿ 10,151. ತೋಟಗಾರಿಕೆ 6,196. ರೇಷ್ಮೆ 4,560. ಪಶುಸಂಗೋಪನೆ 18,553. ಮೀನುಗಾರಿಕೆ 1,401. ಆರ್ಥಿಕ 18,891. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 10,958. ಇ-ಆಡಳಿತ 70. ಒಳಾಡಳಿತ 1,26,996.

ಸಾರಿಗೆ 2,806. ಮೂಲಭೂತ ಸೌಕರ್ಯ 621. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ 27,363. ಅರಣ್ಯ 14,176. ಪರಿಸರ ಮತ್ತು ಜೀವಿಶಾಸ್ತ್ರ 12. ಸಹಕಾರ 7,196. ಪರಿಶಿಷ್ಟ ಜಾತಿಗಳ ಕಲ್ಯಾಣ 15,191. ಪರಿಶಿಷ್ಟ ಪಂಗಡಗಳ ಕಲ್ಯಾಣ 2,758 ಹುದ್ದೆಗಳು ಖಾಲಿ ಇವೆ.

ವಿವಿಧ ಇಲಾಖೆಗಳು

ಹಿಂದುಳಿದ ವರ್ಗಗಳ ಕಲ್ಯಾಣ 15,300. ಅಲ್ಪ ಸಂಖ್ಯಾತರ ಕಲ್ಯಾಣ 5,619. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ6,865. ವಾರ್ತೆ 566. ಪ್ರವಾಸೋದ್ಯಮ 525. ಯುವಜನ ಸೇವೆಗಳು 314. ಆಹಾರ ಮತ್ತು ನಾಗರಿಕ ಸರಬರಾಜು 2,478. ಕಂದಾಯ 32,220. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ 90 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಹೇಳಿದೆ.

ಹಲವಾರು ಇಲಾಖೆಗಳು

ಉನ್ನತ ಶಿಕ್ಷಣ 24,797. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ 2,81,087. ಕೈಮಗ್ಗ ಮತ್ತು ಜವಳಿ 82. ಭಾರಿ ಮತ್ತು ಮಧ್ಯಮ ಕೈಗಾರಿಕೆ 168. ಸಣ್ಣ ಕೈಗಾರಿಕೆ 1,001. ಗಣಿ 1,247. ನಗರಾಭಿವೃದ್ಧಿ 1,290. ಲೋಕೋಪಯೋಗಿ 6,782.

ಬಾರಿ ನೀರಾವರಿ 1,215. ಸಣ್ಣ ನೀರಾವರಿ 2,647. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ 74,602. ಕಾರ್ಮಿಕ 4,352. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 6,838 ಹುದ್ದೆಗಳು ಖಾಲಿ ಇವೆ.

English Summary

Karnataka government said that in various departments 2,52,902 post vacant. Recruitment process will be conducted after the proposal come from the department.