• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಫ್ಲಾಕ್ ಮೀನುಗಾರಿಕೆ; ಹೊಸಕೋಟೆಯಲ್ಲಿ ಮಹಿಳೆಯರ ಪ್ರಯತ್ನ

|
Google Oneindia Kannada News

ಬೆಂಗಳೂರು, ನವೆಂಬರ್ 24; ಮೀನುಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಹಿಳೆಯರು ಮೀನುಗಾರಿಕೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಮೀನುಗಾರಿಕೆಯಲ್ಲಿ ಹೊಸ ತಾಂತ್ರಿಕತೆಗಳ ಅಳವಡಿಕೆ ಹಾಗೂ ಮೀನುಗಾರರ ಬದುಕಿನಲ್ಲಿ ಸಾಮಾಜಿಕ, ಆರ್ಥಿಕ ಬದಲಾವಣೆ ತರಲು ಜಾರಿಯಾಗಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ.

 ಮೀನುಗಾರಿಕೆ ಪದವಿಯಲ್ಲಿ 3 ಚಿನ್ನದ ಪದಕ ಬಾಚಿಕೊಂಡ ಚನ್ನಪಟ್ಟಣದ ಕುಶಲಾ ಮೀನುಗಾರಿಕೆ ಪದವಿಯಲ್ಲಿ 3 ಚಿನ್ನದ ಪದಕ ಬಾಚಿಕೊಂಡ ಚನ್ನಪಟ್ಟಣದ ಕುಶಲಾ

ಹೊಸಕೋಟೆ ತಾಲೂಕಿನ ಹೆಮ್ಮಂಡನಹಳ್ಳಿಯಲ್ಲಿ ಮಹಿಳಾ ಮೀನುಗಾರರೊಬ್ಬರು ತಮ್ಮ ಸ್ವಂತದ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಜೈವಿಕ ಕೊಳ ನಿರ್ಮಿಸಿಕೊಂಡು ಬಯೋಫ್ಲಾಕ್ ವಿಧಾನದಡಿ ಮೀನುಗಾರಿಕೆ ಮಾಡಲು ಮುಂದಾಗಿದ್ದಾರೆ.

ಡಿಸೇಲ್ ದರ ಏರಿಕೆ; ದಡದಲ್ಲಿ ನಿಂತ ಶೇ 70ರಷ್ಟು ಮೀನುಗಾರಿಕೆ ಬೋಟ್ಡಿಸೇಲ್ ದರ ಏರಿಕೆ; ದಡದಲ್ಲಿ ನಿಂತ ಶೇ 70ರಷ್ಟು ಮೀನುಗಾರಿಕೆ ಬೋಟ್

ಹೆಮ್ಮಂಡನಹಳ್ಳಿಯ ಭೈರಮ್ಮ ಕೃಷ್ಣಪ್ಪ ತಲಾ 10 ಗುಂಟೆಗಳ ಎರಡು ಘಟಕಗಳನ್ನು ನಿರ್ಮಿಸಿಕೊಂಡು ಮೀನು ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಸೌಭಾಗ್ಯ ಆನಂದ ಎಂಬ ಮಹಿಳಾ ಮೀನುಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದಾರೆ.

ಒಂದು ಜಿಲ್ಲೆ ಒಂದು ಉತ್ಪನ್ನ: ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆಒಂದು ಜಿಲ್ಲೆ ಒಂದು ಉತ್ಪನ್ನ: ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆ

ಆರ್ಥಿಕ ನೆರವು ನೀಡಲಾಗುತ್ತದೆ; ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿ ರೂಪುಗೊಂಡಿದೆ. ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ವಿಸ್ತಾರ, ಬಡತನ ನಿವಾರಣೆ ಈ ಯೋಜನೆಯ ಪ್ರಮುಖ ಧ್ಯೇಯವಾಗಿದೆ.

ಜಲಚರಗಳ ಪೋಷಣೆಗಾಗಿ ಹೊಸ ಕೊಳಗಳ ನಿರ್ಮಾಣ, ಅಲಂಕಾರಿಕ ಮೀನು‌ ಸಾಗಣೆ ಮತ್ತು ಮಾರಾಟ, ಬಯೋಫ್ಲಾಕ್ ಘಟಕ, ಶೈತ್ಯೀಕರಣ ಘಟಕ, ದ್ವಿಚಕ್ರ ವಾಹನಗಳ ಸೌಕರ್ಯ, ಮೀನು ಮೌಲ್ಯವರ್ಧನೆ ಘಟಕಗಳಿಗೆ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ.

Woman Used Biofloc Fish Farming Technique At Hoskote

ಬಯೋಫ್ಲೋಕ್ ಎಂದರೇನು?; ಬಯೋಫ್ಲೋಕ್ ಅನ್ನು ಸರಳವಾಗಿ ಹೇಳುವದಾದರೆ ಪ್ರಯೋಜನಾಕಾರಿ ಸೂಕ್ಷಜೀವಿಗಳ ಒಟ್ಟುಗೂಡು ಅಥವಾ ಜೈವಿಕ ಹೆಪ್ಪುಗಟ್ಟುವಿಕೆ ಎನ್ನಬಹುದು. ಅನ್ಯಪೌಷ್ಟಿಕತೆಯನ್ನವಲಂಬಿಸಿದ ಸೂಕ್ಷ್ಮ ಜೀವಿಗಳ ಗುಂಪು ಇದಾಗಿದ್ದು ಸಾಮಾನ್ಯವಾಗಿ ಇಂಗಾಲ ಮತ್ತು ಸಾರಜನಕ ಪ್ರಮಾಣವನ್ನು ನಿರ್ವಹಿಸುವ ಮೂಲಕ ಪರಿಸರದಲ್ಲಿ ಇದರ ಬೆಳವಣಿಗೆಯನ್ನು
ನಿರ್ವಹಿಸಬಹುದಾಗಿದೆ.

ಬಯೊಫ್ಲೋಕ್ ವಿಧಾನವನ್ನು ತ್ಯಾಜ್ಯ ನೀರಿನ ಸಂಸ್ಕರಣೆಗಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಜಲಕೃಷಿಯಲ್ಲಿ ಇದು ಒಂದು ವಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಯೋಫ್ಲೋಕ್ ಕೃಷಿಯು ಒಂದು ತೀವ್ರವಾದ ಜಲಕೃಷಿ ವ್ಯವಸ್ಥೆಯಾಗಿದೆ. ಇದು ಜಲಚರ ಜೀವಿಗಳು ಹೊರಹಾಕುವ ತ್ಯಾಜ್ಯವನ್ನು ಬಳಸಿಕೊಂಡು ಬಯೋಫ್ಲೋಕ್ ಬೆಳೆಯುವಂತೆ ಮಾಡಿ ಅದನ್ನು ಮೀನು/ ಸೀಗಡಿಗಳು ಆಹಾರವಾಗಿ ಬಳಕೆಯಾಗುವಂತೆ ಮಾಡುವ ತಂತ್ರವಾಗಿದೆ.

ಈ ಬಯೋಫ್ಲಾಕ್ ಪ್ರೋಟೀನ್ (ಒಣ ದ್ರವ್ಯದ ಆಧಾರದ ಮೇಲೆ ಶೇ. 50 ರಿಂದ 65) ವಿಟಮಿನ್‌ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆಯಲ್ಲದೇ ಪ್ರೋಬಯಾಟಿಕ್ ಪರಿಣಾಮವನ್ನು ಹೊಂದಿದೆ.

ಸಾಮಾನ್ಯವಾಗಿ, ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಒಂದು ಕೆಜಿ ಮೀನು ಬೆಳೆಸಲು ಸುಮಾರು 1.5 ಕೆಜಿಯಿಂದ 2 ಕೆಜಿಯವರೆಗೆ ಕೃತಕ ಆಹಾರದ ಅವಶ್ಯಕತೆಯಿರುತ್ತದೆ. ಆದರೆ, ಬಯೋಫ್ಲೋಕ್ ತಂತ್ರಜ್ಞಾನದಲ್ಲಿ, ಕೃತಕ ಆಹಾರದ ಬಳಕೆ ಶೇಕಡ 30 ರವರೆಗೆ ಕಡಿಮೆಯಾಗುತ್ತದೆ.

ಸಾಂಪ್ರದಾಯಿಕ ಜಲಕೃಷಿಯಲ್ಲಿ, ನೀರಿನ ವಿನಿಮ ಅಗತ್ಯವಿರುತ್ತದೆ. ಇದರ ಪರಿಣಾಮವಾಗಿ ನೀರು ವ್ಯರ್ಥವಾಗುತ್ತದೆ ಮತ್ತು ದೊಡ್ಡ ಪ್ರಮಾಣದ ವೆಚ್ಚ ಭರಿಸುವ ಸಂಭವವಿರುತ್ತದೆ. ಬಯೋಫ್ಲೋಕ್ ತಂತಜ್ಞಾನ ಅಳವಡಿಕೆಯಿಂದ ನೀರನ್ನು ವಿನಿಮಯ ಮಾಡುವ ಅಗತ್ಯವಿಲ್ಲ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಯೋಫ್ಲೋಕ್ ಜೈವಿಕ ಕೊಳ ನಿರ್ಮಿಸಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಯೋಜನಾ ವೆಚ್ಚದ ಅನುಪಾತಕ್ಕೆ ಅನುಗುಣವಾಗಿ ಆರ್ಥಿಕ ನೆರವು ಸಹ ನೀಡಲಾಗುತ್ತಿದೆ.

ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದ ಮೀನುಗಾರರಿಗೆ ಶೇ 60 ಮತ್ತು ಸಾಮಾನ್ಯ ವರ್ಗದವರಿಗೆ ಶೇ 40 ರಷ್ಟು ಸಹಾಯಧನ ನೀಡಲಾಗುವುದು ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಈ ಯೋಜನೆಯ ಪ್ರಯೋಜನ ಪಡೆಯಬೇಕು.

ಆಸಕ್ತರು ಹೆಚ್ಚಿನ ವಿವರಗಳಿಗೆ 080-29787456, 9341347440 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Under pradhan mantri matsya sampada yojana women take fish farming in Hoskote. Woman used biofloc fish farming techniques.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X