ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಾಲಮನ್ನಾ ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಜನವರಿ 7: ಸರ್ಕಾರದ ಬಳಿ ಹಣವಿಲ್ಲವಂತೆ, ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಮೆಚ್ಚುಗೆ ಗಳಿಸಲು ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರಂತೆ ಹೀಗೆ ಹಲವು ಊಹಾಪೋಹಗಳು ಅಂತೆ-ಕಂತೆ ಮಾತುಗಳು ಹರಿದಾಡುತ್ತಿವೆ.

ಆದರೆ ರೈತರ ಸಾಲಮನ್ನಾ ತಡವಾಗಲು ಕಾರಣವೇನು ಎಂಬುದರ ಮಾಹಿತಿ ನಾವು ನೀಡುತ್ತೇವೆ. ಕರ್ನಾಟಕ ರೈತರ ಕೃಷಿ ಸಾಲಮನ್ನಾ ಯೋಜನೆ ಕುರಿತಂತೆ ಹಲವು ತಿಂಗಳುಗಳಿಂದ ಹಲವಾರು ರೀತಿಯ ವ್ಯಂಗ್ಯಗಳನ್ನು ಕೇಳುತ್ತಾ ಬಂದಿದ್ದೇವೆ.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ಯೋಜನೆಯನ್ನು ಹಾಸ್ಯವೆಂಬಂತೆ ಬಿಂಬಿಸಿದ್ದರು. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನರೇಂದ್ರ ಮೋದಿಯ ಫೋಟೊದೊಂದಿಗೆ ಸಾಲಮನ್ನಾ ಯೋಜನೆಯ ಬಗ್ಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದರು.

ಜನವರಿ 2ನೇ ವಾರದಲ್ಲಿ ರೈತರ ಖಾತೆ ಸೇರಲಿದೆ ಹಣ

ಜನವರಿ 2ನೇ ವಾರದಲ್ಲಿ ರೈತರ ಖಾತೆ ಸೇರಲಿದೆ ಹಣ

ಮೋದಿಯವರ ವ್ಯಂಗ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯುತ್ತರ ನೀಡುತ್ತಾ, ಜನವರಿ 2 ನೇ ವಾರದಲ್ಲಿ ರೈತರ ಹಣ ಅವರವರ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದು ಭರವಸೆ ನೀಡಿದ್ದರು.

ಸಾಲಮನ್ನಾಕ್ಕೆ ಬ್ಯಾಂಕುಗಳು ಸಹಕರಿಸದಿದ್ದರೆ ನೇರ ರೈತರ ಖಾತೆಗೆ ಹಣ: ರೇವಣ್ಣ ಸಾಲಮನ್ನಾಕ್ಕೆ ಬ್ಯಾಂಕುಗಳು ಸಹಕರಿಸದಿದ್ದರೆ ನೇರ ರೈತರ ಖಾತೆಗೆ ಹಣ: ರೇವಣ್ಣ

ಸಾಲಮನ್ನಾದಲ್ಲಿ ಅಕ್ರಮ ನಡೆಯದಂತೆ ತಡೆ

ಸಾಲಮನ್ನಾದಲ್ಲಿ ಅಕ್ರಮ ನಡೆಯದಂತೆ ತಡೆ

ಸಾಲಮನ್ನಾದಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ತಡೆಯುವುದು, ನಿಜವಾದ ಫಲಾನುಭವಿಗಳಿಗೆ ಯೋಜನೆಯು ತಲುಪುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಹೀಗಾಗಿ ಯೋಜನೆ ತಡವಾಗುತ್ತಿದೆ ಎಂದು ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ರೈತರ ಬಳಿಕ ವಿದ್ಯಾರ್ಥಿಗಳ ಸಾಲಮನ್ನಾ: ಸುತ್ತೋಲೆ ಹೊರಡಿಸಿದ ಸರ್ಕಾರ ರೈತರ ಬಳಿಕ ವಿದ್ಯಾರ್ಥಿಗಳ ಸಾಲಮನ್ನಾ: ಸುತ್ತೋಲೆ ಹೊರಡಿಸಿದ ಸರ್ಕಾರ

ರೈತರು ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು

ರೈತರು ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು

ಸಾಲಮನ್ನಾದಲ್ಲಿ ಅಕ್ರಮ ನಡೆಯದಂತೆ ತಡೆಯಲಾಗುತ್ತಿರುವುದರಿಂದ ಯೋಜನೆ ಅನುಷ್ಠಾನ ನಿಧಾನವಾಗುತ್ತಿದೆ. ಈ ಯೋಜನೆ ಫಲಾನುಭವಿಗಳಾಗಬೇಕಿದ್ದರೆ, ರೈತರು ತಮ್ಮ ಹೆಸರು, ವಿಳಾಸ, ಎಷ್ಟು ಸಾಲ ಪಡೆದಿದ್ದರು, ಬ್ಯಾಂಕ್ ಖಾತೆ, ಊರಿನ ಹೆಸರು, ಜಮೀನಿನ ಮಾಹಿತಿಯನ್ನು ನೀಡಬೇಕು. ಇದೆಲ್ಲವನ್ನು ಭರ್ತಿ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ.

ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು

ಸಾಲಮನ್ನಾ ಯೋಜನೆಗೆ ಬ್ಯಾಂಕ್‌ಗಳ ಒಪ್ಪಿಗೆ ಇರಲಿಲ್ಲ

ಸಾಲಮನ್ನಾ ಯೋಜನೆಗೆ ಬ್ಯಾಂಕ್‌ಗಳ ಒಪ್ಪಿಗೆ ಇರಲಿಲ್ಲ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರೈತರ ಕೃಷಿ ಸಾಲಮನ್ನಾ ಯೋಜನೆ ಘೋಷಿಸಿದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳಿಂದ ವಿರೋಧ ವ್ಯಕ್ತವಾಗಿತ್ತು. ಕುಮಾರಸ್ವಾಮಿ ಕಟ್ಟುನಿಟ್ಟಾಗಿ ಹೇಳಿದ ಬಳಿಕ ರೈತರ ಸಾಲ ಕುರಿತ ಮಾಹಿತಿಯನ್ನು ಸರ್ಕಾರಕ್ಕೆ ನೀಡಿತ್ತು.

ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ನಡೆದಿತ್ತು ಅಕ್ರಮ

ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ನಡೆದಿತ್ತು ಅಕ್ರಮ

ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲಮನ್ನಾ ಘೋಷಣೆ ಮಾಡಿದಾಗ ಕೋ-ಆಪರೇಟಿವ್ ಸೊಸೈಟಿಗಳು, ಸಂಘ ಸಂಸ್ಥೆಗಳು ಸಾಲಮನ್ನಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿದ್ದವು. ಆ ರೀತಿಯಾಗದಂತೆ ತಡೆಯಲು ನಿಜವಾದ ರೈತರಿಗೆ ಯೋಜನೆ ತಲುಪಿಸಲು ಸರ್ಕಾರ ಕಷ್ಟ ಪಡುತ್ತಿದೆ.

ಹಳ್ಳಿಗಳ ಕೋ-ಆಪರೇಟಿವ್ ಸೊಸೈಟಿಗಳು ಲಾಭ ಪಡೆದುಕೊಂಡು ಅನಕ್ಷರಸ್ಥರನ್ನು ಕತ್ತಲೆಗೆ ತಳ್ಳಿದ್ದರು. ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಅದೇ ರೈತರಿಗೆ 2-3 ಪರ್ಸೆಂಟ್‌ನಂತೆ ಸಾಲ ನೀಡಿದ್ದರು.ಇದೆಲ್ಲಕ್ಕೂ ಕಡಿವಾಣ ಹಾಕಲು ಸರ್ಕಾರ ಹೊಸ ಸಿಸ್ಟಂ ಜಾರಿಗೆ ತಂದಿದೆ.

ಕರ್ನಾಟಕ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ?

ಕರ್ನಾಟಕ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ?

-ಮೊದಲು ಕೋ-ಆಪರೇಟಿವ್ ಸೊಸೈಟಿಗಳು ಕ್ರಾಪ್ ಲೋನ್ ವೇವರ್ ಸಾಫ್ಟ್‌ವೇರ್‌ ಫಾರ್ಮ್ ಭರ್ತಿ ಮಾಡಬೇಕು
-ಆಧಾರ್ ನಂಬರ್ ಪರಿಶೀಲನೆ
-ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿ ಮರು ಪರಿಶೀಲನೆ
-ಭೂಮಿ ಡಾಟಾ ಬೇಸ್‌ನಲ್ಲಿ ಜಮೀನು ಪರಿಶೀಲನೆ
-ಕಂದಾಯ ಇಲಾಖೆಯಿಂದ ಕೋ-ಆಪರೇಟಿವ ಸೊಸೈಟಿಗೆ ರೈತರ ಹೆಸರು ರವಾನೆ
-ಕರ್ನಾಟಕ ಸರ್ಕಾರವು ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡುತ್ತದೆ.
-ಬಳಿಕ ಬ್ಯಾಂಕ್‌ಗಳಿಂದ ಎಲ್ಲಾ ಕೋ-ಆಪರೇಟಿವ ಸೊಸೈಟಿಗಳಿಗೆ ಹಣ ವರ್ಗಾವಣೆಯಾಗುತ್ತದೆ
-ರೈತರು ಯಾವುದಾದರೊಂದು ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿಕೊಳ್ಳಬೇಕು

ಕೃಷಿ ಸಾಲಮನ್ನಾ ಹೈಲೈಟ್ಸ್

ಕೃಷಿ ಸಾಲಮನ್ನಾ ಹೈಲೈಟ್ಸ್

-2018ರಲ್ಲಿ ಮಂಡಿಸಲಾಗಿದ್ದ ಕರ್ನಾಟಕ ಬಜೆಟ್‌ನಲ್ಲಿ ರೈತರ ಕೃಷಿ ಸಾಲಮನ್ನಾ ಯೋಜನೆ ಮಂಡಿಸಲಾಗಿತ್ತು.
-ಒಟ್ಟು 40 ಲಕ್ಕೂ ಹೆಚ್ಚು ಪಲಾನುಭವಿಗಳು
-20.3 ಲಕ್ಷಕ್ಕಿಂತ ಹೆಚ್ಚು ರೈತರು ಕೋ-ಆಪರೇಟಿವ ಸೊಸೈಟಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು, 23 ಲಕ್ಷಕ್ಕಿಂತ ಹೆಚ್ಚು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ.
-ಸೊಸೈಟಿ, ಕೋ-ಆಪರೇಟಿವ್ ಸೊಟೈಟಿ, ಬ್ಯಾಂಕ್‌ಗಳಲ್ಲಿ 1 ಲಕ್ಷ ಸಾಲ ಪಡೆದವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ ಹಾಗೆಯೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2 ಲಕ್ಷ ಪಡೆದವರು ಫಲಾನುಭವಿಗಳಾಗುತ್ತಾರೆ.
-2018ರ ಡಿಸೆಂಬರ್ 8ರಂದು ದೊಡ್ಡಬಳ್ಳಾಪುರದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಯಿತು.
- ಸರ್ಕಾರ ಒಟ್ಟು 44 ಲಕ್ಷ ರೈತರು ಹಾಗೂ 40,೦೦೦ ಕೋಟಿ ರೂ ಸಾಲ ಮನ್ನಾ ಮಾಡಲಿದೆ

ರೈತರ ಸಾಲಮನ್ನಾ ತಡವಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ರೈತರ ಸಾಲಮನ್ನಾ ತಡವಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರದ ಬಳಿ ಹಣವಿಲ್ಲವಂತೆ, ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಮೆಚ್ಚುಗೆ ಗಳಿಸಲು ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರಂತೆ ಹೀಗೆ ಹಲವು ಊಹಾಪೋಹಗಳು ಅಂತೆ-ಕಂತೆ ಮಾತುಗಳು ಹರಿದಾಡುತ್ತಿವೆ.

ಆದರೆ ರೈತರ ಸಾಲಮನ್ನಾ ತಡವಾಗಲು ಕಾರಣವೇನು ಎಂಬುದರ ಮಾಹಿತಿ ನಾವು ನೀಡುತ್ತೇವೆ. ಕರ್ನಾಟಕ ರೈತರ ಕೃಷಿ ಸಾಲಮನ್ನಾ ಯೋಜನೆ ಕುರಿತಂತೆ ಹಲವು ತಿಂಗಳುಗಳಿಂದ ಹಲವಾರು ರೀತಿಯ ವ್ಯಂಗ್ಯಗಳನ್ನು ಕೇಳುತ್ತಾ ಬಂದಿದ್ದೇವೆ.

English summary
The scheme was announced by the coalition government soon after it assumed power in May, with the promise to waive loans of up to Rs 2 lakh for about 43 lakh farmers. The entire exercise is expected to cost the exchequer Rs 44,000 crore. But it has been massively delayed, finally being launched only in the first week of December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X