ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಗೋಧಿ ಬಿತ್ತನೆ ಅಧಿಕ: ಅನುಕೂಲಕರ ವಾತಾವರಣ ಇದ್ದಲ್ಲಿ ಉತ್ತಮ ಇಳುವರಿ ನಿರೀಕ್ಷೆ

|
Google Oneindia Kannada News

ಬೆಂಗಳೂರು ನವೆಂಬರ್ 30: ಭಾರತವು ಪ್ರಸಕ್ತ 2023ರಲ್ಲಿ ಗೋಧಿ ಉತ್ಪಾದನೆ ಉತ್ತಮವಾಗಿದ್ದು, ನಿರೀಕ್ಷೆಗು ಮೀರಿದ ಫಸಲು ಬರಲಿದೆ. ಉತ್ತಮ ಮಳೆಯಿಂದಾಗಿ ಬಹುಕಾಲ ತೇವ ಭರಿತ ಮಣ್ಣಿನ ಪ್ರಭಾದಿಂದ ಅಧಿಕ ಇಳುವರಿ ಸಾಧ್ಯತೆ ಇದೆ ಎನ್ನಲಾಗಿದೆ.

ಗೋಧಿ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಎನಿಸಿಕೊಂಡಿರುವ ಭಾರತ ಆಹಾರ ಧಾನ್ಯದ ವಿಚಾರದಲ್ಲಿ ಈ ವರ್ಷವು ನಿಶ್ಚಿಂತವಾಗಲಿದೆ. ಇದು ಹಣ ರಫ್ತಿನ ಮೇಲಿನ ನಿರ್ಬಂಧ ನಿಷೇಧ ತೆಗೆದು ಹಾಕುವ ವಾದಕ್ಕೆ ಅಡ್ಡಿಯಾಗಲಿದೆ. ಚಿಲ್ಲರೆ ದರ ಏರಿಕೆ ಹಣದುಬ್ಬರದ ಆತಂಕ ದೂರಗೊಳಿಸಲಿದೆ.

ಪ್ರಸಕ್ತ ವರ್ಷ ಗೋಧಿ ಬಿತ್ತನೆಯಲ್ಲಿ ಶೇ. 11ರಷ್ಟು ಪ್ರಗತಿ ಕಂಡ ಭಾರತಪ್ರಸಕ್ತ ವರ್ಷ ಗೋಧಿ ಬಿತ್ತನೆಯಲ್ಲಿ ಶೇ. 11ರಷ್ಟು ಪ್ರಗತಿ ಕಂಡ ಭಾರತ

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಭಾರತದ ಉತ್ತರದ ರಾಜ್ಯಗಳಲ್ಲಿ ಗೋಧಿ ಉತ್ಪಾದನೆಯು ಸಾಂಪ್ರದಾಯಿಕ ಧಾನ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಇತ್ತೀಚೆಗೆ ಗೋಧಿ ದರ ಏರುಗತಿಯಲ್ಲಿ ಸಾಗಿತ್ತು.ಗುಜರಾತ್ ಮತ್ತು ರಾಜಸ್ತಾನದಂತಹ ರಾಜ್ಯಗಳಲ್ಲಿ ಗೋಧಿ ದರ ಅಧಿಕ ವಾಗಿದೆ ಎಂದು ಓಲಂ ಆಗ್ರೋ ಇಂಡಿಯಾದ ಉಪಾಧ್ಯಕ್ಷ ನಿತಿನ್ ಗುಪ್ತಾ ಹೇಳಿದರು.

ಗೋಧಿ ಬೆಲೆ ಶೇ.33ರಷ್ಟು ಏರಿಕೆ

ಗೋಧಿ ಬೆಲೆ ಶೇ.33ರಷ್ಟು ಏರಿಕೆ

ಪ್ರಸಕ್ತ 2022ರ ವರ್ಷದ ಇದುವರೆಗೆ ದೇಶೀಯ ಗೋಧಿ ಬೆಲೆ ಶೇ. 33ರಷ್ಟು ಜಿಗಿದಿದೆ. ಪ್ರತಿ ಟನ್‌ಗೆ ದಾಖಲೆಯ 29,000 ರೂ.($355.19)ಗೆ ಏರಿಕೆ ಕಂಡಿದೆ. ಇದು ಸರ್ಕಾರ ನಿಗದಿಪಡಿಸಿದ 21,250 ರೂ. ಅತ್ಯಧಿಕ ಏರಿಕೆ ಆಗಿದೆ. ಗೋಧಿ ರಫ್ತು ಮೇಲಿನ ನಿಷೇಧದ ಹೊರತಾಗಿಯೂ ಗೋಧಿ ದರ ಏರಿಕೆ ಆಗಿರುವುದು ಚಿಲ್ಲರೆ ವ್ಯಾಪಾರಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಗೋಧಿ ಆಹಾರ ಧಾನ್ಯದ ವಿಶ್ವದ ಎರಡನೇ ಅತಿ ದೊಡ್ಡ ಗ್ರಾಹಕ ಭಾರತವಾಗಿದೆ.

ಉಕ್ರೇನ್‌ನ ಮತ್ತು ರಷ್ಯಾ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಕೊರತೆ ಸೃಷ್ಟಿಯಾಯಿತು. ಹೀಗಾಗಿ ಜಾಗತಿಕಮಾರುಕಟ್ಟೆಗೆ ತಕ್ಕಮಟ್ಟಿನ ಗೋಧಿ ಪೂರೈಕೆ ಮತ್ತು ಸ್ಥಳಿಯ ಲಭ್ಯೆ ಗಮನದಲ್ಲಿಟ್ಟುಕೊಂಡು ರಫ್ತುಮೇಲೆ ನಿರ್ಬಂಧ ಹೇರಿತು. ಅಲ್ಲದೇ ಗೋಧಿ ಬೆಳೆಗೆ ಮಾರಕವಾದ ತಾಪಮಾನದ ಏರಿಕೆ, ದಿಢೀರ್ ವಾತಾವರಣ ಬದಲಾವಣೆ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಮೂಲಗಳು ತಿಳಿಸಿವೆ.

ದೇಶದಲ್ಲಿ 15.3 ಮಿ.ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ

ದೇಶದಲ್ಲಿ 15.3 ಮಿ.ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ

ಭಾರತವು ವರ್ಷಕ್ಕೆ ಒಂದು ಬಾರಿ ಗೋಧಿ ಬೆಳೆ ಬೆಳೆಯುತ್ತದೆ. ಅಕ್ಟೋಬರ್ ಮತ್ತು ನವೆಂಬರ್‌ ಗೋಧಿ ಬಿತ್ತನೆ ಆದರೆ ಮರು ವರ್ಷದ ಮಾರ್ಚ್‌ ವೇಳೆಗೆ ಧಾನ್ಯದ ಕೊಯ್ಲು ಮಾಡಲಾಗುತ್ತದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಬಿತ್ತನೆಯ ಋತುವಿನಲ್ಲಿ ಅಕ್ಟೋಬರ್ 1 ರಿಂದ ಈವರೆಗೆ ದೇಶದಲ್ಲಿ 15.3 ಮಿಲಿಯನ್ ಹೆಕ್ಟೇರ್‌ಗಳಲ್ಲಿ ರೈತರು ಗೋಧಿ ಬೆಳೆದಿದ್ದಾರೆ. ಇದು ಕಳೆದ ವರ್ಷಕ್ಕಿಂದ ಸುಮಾರು ಶೇ.11ರಷ್ಟು ಅಧಿಕ ಎಂದು ತಿಳಿದು ಬಂದಿದೆ.

ತಾಪಮಾನ ಏರಿಕೆ ಗೋಧಿ ಬೆಳೆಗೆ ಮಾರಕ

ತಾಪಮಾನ ಏರಿಕೆ ಗೋಧಿ ಬೆಳೆಗೆ ಮಾರಕ

ಪಂಜಾಬ್ ಮತ್ತು ಹರಿಯಾಣದಲ್ಲಿ ಮಾರ್ಚ್ ಅಂತ್ಯಕ್ಕೆ ಇಲ್ಲವೇ ತಾಪಮಾನ ಹೆಚ್ಚಾಗುವ ಮೊದಲ ತಿಂಗಳಾದ ಏಪ್ರೀಲ್ ನಲ್ಲಿ ಗೋಧಿ ಕೊಯ್ಲಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ಕಾರಣ ಅಧಿಕ ತಾಪಮಾನವು ಗೋಧಿ ಬೆಳೆಗೆ ಮಾರಕವಾಗಿದೆ. ಉತ್ತಮ ಇಳುವರಿ ಬರಬೇಕಾದರೆ ತೇವಾಂಶ ಭರಿತ ವಾತಾವರಣ ಇರಬೇಕಿದೆ.

ಪಂಜಾಬ್‌ನಲ್ಲಿ ರೈತರು ಈಗಾಗಲೇ ಸುಮಾರು 3.5 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಬಹುಪಾಲು (2.9ರಿಂದ 3.0 ಮಿಲಿಯನ್ ಹೆಕ್ಟೇರ್‌) ಗೋಧಿ ಬಿತ್ತನೆ ಮಾಡಿದ್ದಾರೆ ಎಂದು ರೈತರೊಬ್ಬರು ಮಾಹಿತಿ ನೀಡಿದ್ದಾರೆ.

ಕೊಯ್ಲಿಗು ಮುನ್ನ ಅನುಕೂಲಕರ ತಾಪಮಾನ

ಕೊಯ್ಲಿಗು ಮುನ್ನ ಅನುಕೂಲಕರ ತಾಪಮಾನ

ದೇಶದಲ್ಲಿ ಗೋಧಿ ಬೆಳೆದ ಭೂಪ್ರದೇಶವು ಹೆಚ್ಚಾಗಿದೆ. ಆದರೆ ತಿಂಗಳ ಆಸುಪಾಸಿನ ಬೆಳೆಗೆ ಮುಂದಿನ ವಾರಗಳಲ್ಲಿ ಕಡಿಮೆ ತಾಪಮಾನದ ಅಗತ್ಯವಿರುತ್ತದೆ. ಮುಖ್ಯವಾಗಿ ಗೋಧಿ ಬೆಳೆ ಇನ್ನೇನು ಕೈಗೆ ಬರುವ ಕೆಲವು ದಿವಸಗಳು ವಾತಾವರಣ ಅನುಕೂಲವಾಗಿರಬೇಕು. ಹೀಗಿದ್ದರೆ ಈ ವರ್ಷ ಉತ್ತಮ ಇಳುವರಿ ನಿರೀಕ್ಷಿಸಬಹುದು ಎಂದು ನವದೆಹಲಿ ಮೂಲದ ವ್ಯಾಪಾರಿ ರಾಜೇಶ್ ಪಹಾರಿಯಾ ಜೈನ್ ತಿಳಿಸಿದರು.

English summary
Wheat Sowing Very High In India Till Now Current Year likely To Good Yield,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X