ಕೃಷಿ ವಲಯದಲ್ಲಿ ಡ್ರೋನ್ ಬಳಕೆ ಹೆಚ್ಚಾಗಬೇಕು: ಕೇಂದ್ರ
ನವದೆಹಲಿ ಜುಲೈ 17: ಕೃಷಿ ವಲಯದಲ್ಲಿ ಬೆಳೆ ಇಳುವರಿ, ಕೃಷಿಯಲ್ಲಿ ದಕ್ಷತೆ ಹಾಗೂ ಬೆಳೆ ಬೆಳವಣಿಗೆ ಹೆಚ್ಚಿಸಲು ರೈತರು ಹೆಚೆಚ್ಚು ಡ್ರೋನ್ ಗಳನ್ನು ಬಳಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ತಿಳಿಸಿದೆ.
ಕೃಷಿಯಲ್ಲಿ ಬೆಳೆಗಳ ಮೇಲೆ ಗೊಬ್ಬರ, ಔಷಧ, ರಸಾಯನಿಕ ಸಿಂಪಡಣೆ, ಕಾಲಕಾಲಕ್ಕೆ ಬೆಳೆಗಳ ಮೇಲ್ವೀಚಾರಣೆ ಸೇರಿದಂತೆ ಇಳುವರಿ ಹೆಚ್ಚಿಸಿ ಅಧಿಕ ಆದಾಯ ಗಳಿಸಲು ಡ್ರೋನ್ ಗಳನ್ನು ಬಳಸಲಾಗುತ್ತಿದೆ. ಈ ಬಳಕೆ ದೇಶದಲ್ಲಿ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಡ್ರೋನ್ ಬಳಕೆ ನೀತಿ ಪ್ರಕಟಿಸಿತು. ನಂತರ ಅದೇ ನೀತಿಯಡಿ ಡ್ರೋನ್ ಬಳಕೆಗೆ ಅನುದಾನ ನೀಡುವ ಬಗ್ಗೆ ಘೋಷಿಸಿತು. ಈ ಮೂಲಕ ಡ್ರೋನ್ ಬಳಸುವ ರೈತರಿಗೆ 'ರೈತ ಉತ್ಪಾದಕರ ಸಂಸ್ಥೆಗಳಿಂದ ಖರೀದಿಯ ಶೇ. 75ಅನುದಾನಕ್ಕೆ ವ್ಯವಸ್ಥೆ ಕಲ್ಪಿಸಿತು.
21ನೇ ಶತಮಾನದಲ್ಲಿ ಡ್ರೋನ್ ಬಳಕೆ ಕೃಷಿ ಯಲ್ಲಿ ಮೈಲುಗಲ್ಲಾಗಲಿದೆ. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಕೃಷಿ ಡ್ರೋನ್ ಬಳಕೆಗೆ ಈಗಾಗಲೇ ಚಾಲನೆ ನೀಡಿದೆ. ಮುಂದಿನ ದಿನಗಳಲ್ಲಿ ಡ್ರೋನ್ ಅಭಿವೃದ್ಧಿಯು ಹೆಚ್ಚಾಗಲಿದೆ.
ಕೀಟನಾಶಕ, ರಸಗೊಬ್ಬರ ಸಿಂಪಡಣೆ ಟ್ರಾಲಿ ಪಂಪ್, ಸ್ಪ್ರೇಯರ್ ಗಳನ್ನು ಹೆಚ್ಚು ಬಳಸಬೇಕು. ಈ ಸಂಬಂಧ ಸರ್ಕಾರ ನೀಡಿರುವ ಎಸ್‌ಒಪಿ (ಸ್ಟಾಂಡರ್ಡ ಆಪರೇಟಿಂಗ್ ಪ್ರೊಸಿಡ್ಯುರ್) ಅನುಸರಿಸಬೇಕಿದೆ. ರೈತರ ಹೆಚ್ಚೆಚ್ಚು ಡ್ರೋನ್ ಬಳಕೆ ಮುಂದಾಗಿದ್ದೆ ಆದಲ್ಲಿ 2028ರವೇಳೆಗೆ ಶೇ.25ರಷ್ಟು ಡ್ರೋನ್ ಗಳ ಮಾರುಕಟ್ಟೆಯಲ್ಲಿ ವಾರ್ಷಿಕ ಬೆಳವಣಿಗೆ ದರ ಏರಿಕೆ ಸಾಧ್ಯವಾಗುತ್ತದೆ ಎಂದು ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಬ್ಲೂವೀವ್ ಕನ್ಸಲ್ಟಿಂಗ್ ಸಂಸ್ಥೆ ತಿಳಿಸಿದೆ.

ಶೇ.5ರಷ್ಟು ಉತ್ಪಾದನೆ ಹೆಚ್ಚು
ದೇಶದಲ್ಲಿ ಬಹುತೇಕರು ಕೃಷಿ ಆದಾಯ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಣ್ಣ ಹಿಡುವಳಿಗಾರರು ಹೆಚ್ಚಿದ್ದಾರೆ. ಅವರೆಲ್ಲರು ಡ್ರೋನ್ ಸೇರಿದಂತೆ ಕೃಷಿ ಸುಧಾರಿತ ತಂತ್ರಜ್ಞಾನ ಬಳಸಿದರೆ ಕೃಷಿ ಉತ್ಪಾದನೆ ಶೇ.5ರಷ್ಟು ಹೆಚ್ಚಾಗಿ ರೈತರ ಆದಾಯವು ದ್ವಿಗುಣಗೊಳ್ಳುತ್ತದೆ.
ಡ್ರೋನ್ ಗಳಿಂದ ವ್ಯವಸ್ಥಿತ ಕೃಷಿ ಸಾಧ್ಯವಾಗುತ್ತದೆ, ಸಮಯ ಉಳಿತಾಯವಾಗುತ್ತದೆ. ಕೀಟನಾಶಕ, ರಸಗೊಬ್ಬಳ ಸಿಂಪಡಣೆಗೆ ವ್ಯಕ್ತಿಗತವಾಗಿ ತೆಗೆದುಕೊಳ್ಳುವ ಸಮಯಕ್ಕಿಂತಲೂ ಕಡಿಮೆ ಸಮಯ ಹಾಗೂ ಕಡಿಮೆ ಖರ್ಚಿನಲ್ಲಿ ಔಷಧ ಸಿಂಪಡಣೆ ಮಾಡಬಹುದು. 200 ಲೀಟರ್ ಸಹಿತ ಕೀಟನಾಶಕ ಸಿಂಪಡಣೆ ಯನ್ನು ಡ್ರೋನ್ ಮೂಲಕ ಕೇವಲ 10ಲೀಟರ್ ನೀರಿನೊಂದಿಗೆ ಸಿಂಪಡಿಸಬಹುದಾಗಿದೆ.

ಆಹಾರ ಕೊರತೆ ನೀಗಿಸಲು ಡ್ರೋನ್ ಸಹಕಾರಿ
ಇಂಟರ್ ನೆಟ್ ಆಧಾರಿತ ತಾಂತ್ರಿಕ ಡ್ರೋನ್ ಗಳಿಗಾಗಿ ಭಾರತ ಚೀನಾ ಮೇಲೂ ಅವಲಂಬಿತವಾಗಿದೆ. ಜನಸಂಖ್ಯೆ ಹೆಚ್ಚುತ್ತಿದ್ದು, ಅದರ ಮಧ್ಯೆ ಸಾವಾಲಾದ ಆಹಾರ ಕೊರತೆ ನೀಗಿಸಲು, ಉತ್ಪಾದನೆಯನ್ನು ಹೆಚ್ಚಿಸಲು ಡ್ರೋನ್ ಸಹಕಾರಿಯಾಗಿದೆ. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದು ಅಗ್ಯವಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಡ್ರೋನ್ ಕೃಷಿಗೆ ಉತ್ತೇಜನ
ರೈತರು ಡ್ರೋನ್ ಬಳಕೆಗೆ ಆದ್ಯ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಡ್ರೋನ್ ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರ ಫಾರ್ಮ್ ಮಷಿನರಿ ತರಬೇತಿ ಮತ್ತು ಪರೀಕ್ಷಾ ಕೇಂದ್ರ ಸಂಸ್ಥೆಗಳು, ಐಸಿಎಆರ್ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಗೆ ಶೇ.100ರಷ್ಟು ಸಹಾಯಧನ ನೀಡುತ್ತಿದೆ. ಹೈಟೆಕ್ ಫಾರ್ಮ್ ಸೇವೆ ಒದಗಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.

ನಿರ್ಣಾಯಕ ಪಾತ್ರ ವಹಿಸಲಿರುವ ತಂತ್ರಜ್ಞಾನ
2050ರವೇಳೆಗೆ ಜಾಗತಿಕ ಜನಸಂಖ್ಯೆ 9ಶತಕೋಟಿಯಷ್ಟು ಹೆಚ್ಚಾಗಲಿದ್ದು, ಆಹಾರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕೃಷಿ ವಲಯದತ್ತ ಮುಖ ಮಾಡುವವರ ಸಂಖ್ಯೆ ಕಡಿಮೆ ಇರುವ ಇಂದಿನ ಸಂದರ್ಭದಲ್ಲಿ ಕೃಷಿಯಲ್ಲಿ ಡ್ರೋನ್, ಕೃತಕ ಬುದ್ಧಿಮತ್ತೆ ಇನ್ನಿತರ ಕೃಷಿ ಸುಧಾರಿತ ತಂತ್ರಜ್ಞಾನಗಳು ಬಳಕೆ ನಿರ್ಣಾಯಕ ಪಾತ್ರ ವಹಿಸಲಿವೆ.












Click it and Unblock the Notifications