• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM Kisan Yojana: ದುರುಪಯೋಗ ತಡೆಯಲು ನಿಯಮ ಕಠಿಣಗೊಳಿಸಲು ಕೇಂದ್ರ ನಿರ್ಧಾರ

|
Google Oneindia Kannada News

ಬೆಂಗಳೂರು, ನವೆಂಬರ್ 13: ಭವಿಷ್ಯದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್)ಯ ದುರುಪಯೋಗ ಆಗದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಯೋಜನೆಯನ್ನು ನಿಯಂತ್ರಿಸುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿದೆ.

ಈಗಾಗಲೆ ರೈತರಿಗೆ ಪಿಎಂ ಕಿಸಾನ್ ಯೋಜನೆಯ 12ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಈ ಕಂತು ಬಿಡುಗಡೆಯಾಗುವ ಮುನ್ನ ಸಾಕಷ್ಟು ನಕಲಿ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯುವ ಪ್ರಕರಣಗಳು ಪತ್ತೆಯಾಗಿದ್ದವು. ಈ ಕಾರಣದಿಂದಲೇ ಜನವರಿ ತಿಂಗಳಲ್ಲಿ ಲಭ್ಯವಾಗಲಿರುವ 13ನೇ ಕಂತು ಪಡೆಯಲು ಫಲಾನುಭವಿಗಳು ಒಂದಷ್ಟು ಕಠಿಣ ನಿಯಮ ಪಾಲಿಸಬೇಕಿದೆ. ಫಲಾನುಭವಿ ಪ್ರತಿ ರೈತರು ಕಾನೂನಿನ ಪ್ರಕಾರ ಮೊದಲು ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಬೇಕು.

 ಸಾವಯವ ಕೃಷಿ ಮಹತ್ವ ಸಾರಿದ ಕಿಸಾನ್ ಸ್ವರಾಜ್ ಸಮ್ಮೇಳನ ಸಾವಯವ ಕೃಷಿ ಮಹತ್ವ ಸಾರಿದ ಕಿಸಾನ್ ಸ್ವರಾಜ್ ಸಮ್ಮೇಳನ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತು ಬರಲು ಸಾಕಷ್ಟು ಸಮಯವಿದೆ.

ಆದರೆ ದೆಹಲಿ ಎನ್‌ಸಿಆರ್ ಸೇರಿದಂತೆ ದೇಶಾದ್ಯಂತ ರೈತರು ಈಗಾಗಲೇ ಅದನ್ನು ನಿರೀಕ್ಷಿಸುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಫಲಾನುಭವಿ ರೈತರ ಖಾತೆಗೆ 2,000 ರೂಗಳನ್ನು 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ.

ವಾಸ್ತವವಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಪಿಎಂ ಕಿಸಾನ್ ಅವರ 13ನೇ ಕಂತಿಗೆ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಯನ್ನು ಮಾಡಿದೆ. ನಿಯಮಗಳನ್ನು ಕಠಿಣಗೊಳಿಸಿದೆ. ಯೋಜನೆ ಲಾಭ ಕೇವಲ ಅರ್ಹರಿಗೆ ಮಾತ್ರ ಸಿಗುವಂತೆ ಮಾಡಲಾಗುತ್ತಿದೆ.

ಭೂ ದಾಖಲೆ ಪರಿಶೀಲನೆ ಕಡ್ಡಾಯ

ಭೂ ದಾಖಲೆ ಪರಿಶೀಲನೆ ಕಡ್ಡಾಯ

ಈ ಹಿಂದೆ ಅನೇಕ ಅಕ್ರಮಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪ್ರತಿ ಫಲಾನುಭವಿ ರೈತರು ಕಾನೂನಿನ ಪ್ರಕಾರ ಮೊದಲು ತಮ್ಮ ಜಮೀನು ದಾಖಲೆಗಳನ್ನು ಪರಿಶೀಲಿಸಬೇಕು. ಈ ಪ್ರಕ್ರಿಯೆಯನ್ನು ಮಾಡದಿದ್ದರೆ, ಫಲಾನುಭವಿ ರೈತರಿಗೆ 2,000 ರೂ ಮೌಲ್ಯದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತನ್ನು ನಿರಾಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪಡಿತರ ಚೀಟಿ ಪ್ರತಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ

ಪಡಿತರ ಚೀಟಿ ಪ್ರತಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ

ಕೇಂದ್ರವು ಅಧಿಕೃತ ವೆಬ್‌ಸೈಟ್‌ನಲ್ಲಿ ರೈತರ ಕಾರ್ನರ್ ಅನ್ನು ಪ್ರಾರಂಭಿಸಿದೆ. ಅಲ್ಲಿ ರೈತರು ಸ್ವತಃ ತಾವೇ ನೋಂದಾವಣೆ ಮಾಡಿಕೊಳ್ಳಬಹುದು. ಅವರ ಖಾತೆಯ ಸ್ಥಿತಿಯನ್ನು ಪರಿಶೀಲಿಸಬಹುದು. ಪಡಿತರ ಚೀಟಿಯ ನಕಲನ್ನು ಸಲ್ಲಿಸದಿದ್ದಲ್ಲಿ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಗುವುದಿಲ್ಲ.

ಜನವರಿಯಲ್ಲಿ ಬರಲಿರುವ 13ನೇ ಕಂತು ಸರಿಯಾದ ಸಮಯಕ್ಕೆ ಜಮೆ ಆಗಬೇಕಾದರೆ ನೀವು ಪಿಡಿಎಫ್ ರೂಪದಲ್ಲಿ ನಿಮ್ಮ ಪಡಿತರ ಚೀಟಿಯ ಸಾಫ್ಟ್ ಕಾಪಿಯನ್ನು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.inಗೆ ಅಪ್‌ಲೋಡ್ ಮಾಡಬೇಕು.

2023ರ ಜನವರಿಯಲ್ಲಿ 13ನೇ ಕಂತು

2023ರ ಜನವರಿಯಲ್ಲಿ 13ನೇ ಕಂತು

ಫಲಾನುಭವಿ ರೈತರು ಜನವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 13ನೇ ಕಂತು 2,000 ರೂ.ಸ್ವೀಕರಿಸಲು ತಮ್ಮ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು. ಯೋಜನೆ ಆರಂಭವಾದ ಬಳಿಕ 2021 ರಲ್ಲಿ ಜನವರಿಯಲ್ಲಿಯೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣವನ್ನು ಫಲಾನುಭವಿ ಖಾತೆಗಳಿಗೆ ಹಾಕಲಾಗಿತ್ತು. ನಿಯಮದಂತೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ರೂ. 2,000 ಅನ್ನು ಹಣ 2023ರ ಜನವರಿಯಲ್ಲಿ ರೈತರ ಖಾತೆಗಳಿಗೆ ಜಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಿಎಂಕಿಸಾನ್ ವೆಬ್‌ಸೈಟ್‌ ಮೂಲಕ ನೋಂದಣಿ

ಪಿಎಂಕಿಸಾನ್ ವೆಬ್‌ಸೈಟ್‌ ಮೂಲಕ ನೋಂದಣಿ

ಅರ್ಹ ರೈತರ ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯಲು https://pmkisan.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ಅಲ್ಲಿರುವ 'ಹೊಸ ರೈತ ನೋಂದಣಿ' ಯನ್ನು ಆಯ್ಕೆ ಮಾಡಿ. ಕಾರ್ಯವಿಧಾನದ ಮುಂದಿನ ಹಂತದಲ್ಲಿ ಸಂಬಂಧಪಟ್ಟ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಹೆಚ್ಚುವರಿಯಾಗಿ, ಕ್ಯಾಪ್ಚಾ ಕೋಡ್ ಅನ್ನು ಹಾಕಬೇಕು. ಬಳಿಕ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ಇದೇ ರೀತಿ ಹಂತ ಹಂತವಾಗಿ ಮುಂದಿನ ಕ್ರಮಗಳನ್ನು ಅನುಸರಿಸಿ ಮೊದಲು ನೋಂದಣಿ ಆಗಬೇಕು.

English summary
Union Government decision to tighten rules of PM Kisan Samman Nidhi Yojana to prevent misuse
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X