ರೈತರ ಪ್ರತಿಭಟನೆ; 250 ಖಾತೆ ನಿರ್ಬಂಧಿಸಿದ ಟ್ವಿಟ್ಟರ್

ನವದೆಹಲಿ, ಫೆಬ್ರುವರಿ 01: ದೆಹಲಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದ ಕಾರಣ ನೀಡಿ 250ಕ್ಕೂ ಹೆಚ್ಚು ಖಾತೆಗಳನ್ನು ಟ್ವಿಟ್ಟರ್ ಸೋಮವಾರ ನಿರ್ಬಂಧಿಸಿದೆ.

"ಮೋದಿ ಪ್ಲಾನಿಂಗ್ ಫಾರ್ಮರ್ ಜೆನಸೆಡ್" ಎಂದು ಹ್ಯಾಷ್ ಟ್ಯಾಗ್ ಸೃಷ್ಟಿಸಿ ಪ್ರಚೋದನಕಾರಿ ಪೋಸ್ಟ್‌ ಗಳನ್ನು ಮಾಡಲಾಗುತ್ತಿತ್ತು. ನಕಲಿ, ಬೆದರಿಕೆ ಹಾಗೂ ಪ್ರಚೋದನಾಕಾರಿ ಟ್ವೀಟ್ ಎಂದು ಪರಿಗಣಿಸಿ ಈ ಖಾತೆಗಳನ್ನು ಬ್ಲಾಕ್ ಮಾಡಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೃಹ ಸಚಿವಾಲಯ ಹಾಗೂ ಕಾನೂನು ಜಾರಿ ಸಂಸ್ಥೆಗಳ ಮನವಿ ಮೇರೆಗೆ ಈ ಕ್ರಮ ಕೈಗೊಂಡಿದ್ದಾಗಿ ತಿಳಿದುಬಂದಿದೆ.

ಕ್ಯಾರಾವಾನ್ ನಿಯತಕಾಲಿಕೆ ಒಳಗೊಂಡಂತೆ ಹಲವರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಗಲಭೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ನಿನ್ನೆ ಕ್ಯಾರಾವಾನ್ ನಿಯತಕಾಲಿಕೆ ಸಂಪಾದಕನನ್ನು ಬಂಧಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಸಿಪಿಎಂ ಮುಖಂಡ ಮೊಹಮದ್ ಸಾಲಿಂ, ಕಿಸಾನ್ ಏಕ್ತಾ ಮೋರ್ಚಾಗೆ ಸೇರಿದವರ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಖಾತೆ ನಿರ್ಬಂಧಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿವೆ.

Twitter Blocks 250 Accounts Over Provocative Posts On Farmers Protest

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಗಲಭೆ ನಡೆದ ನಂತರ ಪ್ರಚೋದನಕಾರಿ ಹೇಳಿಕೆಗಳನ್ನೊಳಗೊಂಡ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+