ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

|
Google Oneindia Kannada News

ಮಡಿಕೇರಿ, ಜುಲೈ 10; ನೈಋತ್ಯ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ಅದರಲ್ಲೂ ಕರ್ನಾಟಕದ ಕೊಡಗು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಕಾಫಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರವಾಗಿ ಮುಂಗಾರು ಮಳೆ ಸುರಿಯುತ್ತಿದೆ. ಮುಂಗಾರು ಮಳೆಯ ಅವಧಿಯಲ್ಲಿ ಬರುವ ರೋಗ, ಅವುಗಳ ಹತೋಟಿ ಮತ್ತು ಬೆಳೆ ರಕ್ಷಣೆ ಬಗ್ಗೆ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.

ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ, ರೆಡ್ ಅಲರ್ಟ್

ಈ ಅವಧಿಯಲ್ಲಿ ಸುರಿಯುವ ಮಳೆ ಕಾಫಿ ಬೆಳೆಗೆ ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು ಕೊಳೆ ರೋಗಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ರೋಗ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

148 ಕೋಟಿ ರೂ ಸಾಲ: ನೆಟ್ಟಿಗರು ಆಡಿಕೊಳ್ಳುವಂತೆ ಮಾಡಿದ ಕಾಫಿ ತೋಟ ಹರಾಜು ಪ್ರಕಟಣೆ 148 ಕೋಟಿ ರೂ ಸಾಲ: ನೆಟ್ಟಿಗರು ಆಡಿಕೊಳ್ಳುವಂತೆ ಮಾಡಿದ ಕಾಫಿ ತೋಟ ಹರಾಜು ಪ್ರಕಟಣೆ

Tips For Farmers To Protect Coffee Crop In Monsoon Rain

ಕೊಳೆ ರೋಗ ಹರಡುವಿಕೆ; ಬಿಸಿಲು ಇಲ್ಲದ ಬಿಡುವಿಲ್ಲದ ಮಳೆ, ತಂಪಾದ ತಾಪಮಾನ, ಹೆಚ್ಚಿನ ಆದ್ರತೆ (ವಾತಾವರಣದ ತೇವಾಂಶ), ಮೋಡ ಕವಿದ ವಾತಾವರಣ ಮತ್ತು ಅಸಮರ್ಪಕ ಚರಂಡಿ, ನಿರಂತರ ಭಾರೀ ಮಳೆಯಿಂದಾಗಿ ತೋಟಗಳಲ್ಲಿ ನೀರು ನಿಂತಿರುವುದು ಅಥವಾ ವೆಟ್ ಫೀಟ್ ಸ್ಥಿತಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಎರಡರಲ್ಲೂ, ಕೊಳೆ ರೋಗ ಉಂಟಾಗಿ, ಉಲ್ಬಣಗೊಂಡು ಹರಡಲು ಸಹಾಯ ಮಾಡುತ್ತವೆ.

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕಾಫಿ ಬೆಳೆಗಾರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರ

ಈ ರೋಗಗಳು ಕಣಿವೆ ಪ್ರದೇಶದ ತೋಟಗಳು ಹಾಗೂ ಸಿಲ್ವರ್ ಹೆಚ್ಚಿರುವ ತೋಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ, ಸರಿಯಾದ ಸಮಯದಲ್ಲಿ ಈ ರೋಗಗಳನ್ನು ನಿಯಂತ್ರಿಸದಿದ್ದಲ್ಲಿ, ಶೇ 10-20 ರಷ್ಟು ಫಸಲು ನಷ್ಟ ಉಂಟಾಗಬಹುದು.

ಆದ್ದರಿಂದ ಫಸಲು ನಷ್ಟವನ್ನು ಕಡಿಮೆ ಮಾಡಲು ಬೆಳೆಗಾರರು ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಸಲಹೆ ನೀಡಲಾಗಿದೆ. ರೋಗವು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಕೊಳೆ ರೋಗ ಪೀಡಿತ ಎಲೆಗಳು ಹಾಗೂ ಕಾಯಿಗಳನ್ನು ತೆಗೆದುಹಾಕಿ ನಾಶಮಾಡಬೇಕು.

Tips For Farmers To Protect Coffee Crop In Monsoon Rain

ತೋಟಗಳಲ್ಲಿ ಉತ್ತಮವಾಗಿ ಗಾಳಿಯಾಡಲು, ನೆತ್ತಿ ಬಿಡಿಸುವುದು, ಕಾಫಿ ಗಿಡಗಳ ಮೇಲೆ ಬಿದ್ದಿರುವ ನೆರಳು ಮರಗಳ ಎಲೆಗಳನ್ನು ತೆಗೆದು ಹಾಕಿ ಕಂಬ ಚಿಗುರುಗಳನ್ನು ತೆಗೆದು ಹಾಕುವುದು.

ತಕ್ಷಣವೇ ನೀರಿನ ನಿಲ್ಲುವಿಕೆ ಅಂದರೆ ವೆಟ್ ಫೀಟ್ ತಡೆಗಟ್ಟಲು ಮತ್ತು ಮಳೆಗಾಲದಲ್ಲಿ ನೀರಿನ ಬಸಿಯುವಿಕೆ ಮತ್ತು ಆವಿಯಾಗುವಿಕೆಯನ್ನು ಹೆಚ್ಚಿಸಲು, ಕಾಫಿ ಗಿಡಗಳ ಬುಡದಲ್ಲಿ ಇರುವ ದರಗು ಮತ್ತು ಬಿದ್ದಿರುವ ಹಸಿರೆಲೆಗಳನ್ನು ತೆಗೆದು 4 ಗಿಡಗಳ ಮಧ್ಯ ಭಾಗಕ್ಕೆ ರಾಶಿ ಮಾಡಬೇಕು. ನೀರು ನಿಲ್ಲದಂತೆ ಚರಂಡಿಗಳನ್ನು ಮಾಡುವುದು.

1 ಲೀಟರ್ ನೀರಿಗೆ 1 ಮೀ. ಲಿ. ಪಾಲಿಕ್ಯೂರ್ 25.9 ಇಸಿ (ಟೆಬುಕೊನಝೋಲ್ 25.6 ಎಸ್. ಸಿ.), 200 ಮೀ. ಲಿ ಅಂಟು ದ್ರಾವಣ ಬೆರೆಸಿ ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು ಕೊಳೆ ರೋಗಗಳು ಕಂಡ ಸ್ಥಳಗಳಲ್ಲಿ, ಸಿಂಪರಣೆ ಮಾಡುವುದು.

ಅಥವಾ 200 ಲೀಟರ್ ನೀರಿಗೆ 200 ಮೀ. ಲಿ. ಬಾವಿಸ್ಟಿನ್ ಬೆರೆಸಿ, ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು ಕೊಳೆ ರೋಗಗಳು ಕಂಡ ಸ್ಥಳಗಳಲ್ಲಿ ಸಿಂಪರಣೆ ಮಾಡುವುದು. ಆರೋಗ್ಯಕರ ಕಾಯಿ ಬೆಳವಣಿಗೆಗೆ ಮತ್ತು ಬಲಿಯದ ಕಾಯಿಗಳ ಉದುರುವಿಕೆಯನ್ನು ತಡೆಯಬೇಕು.

ಇದಕ್ಕಾಗಿ ಮಳೆಯ ಬಿಡುವಿನ ಸಮಯದಲ್ಲಿ, ಅಂದರೆ ಎಕರೆಗೆ ಒಂದು ಚೀಲ ಯೂರಿಯಾ ರಸಗೊಬ್ಬರವನ್ನು ಕಾಫಿ ಗಿಡಗಳ ಸುತ್ತ ಒಂದು ಅಡಿ ದೂರದಲ್ಲಿ ಹಾಕಬೇಕು.

Recommended Video

CSK ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಜಡೇಜಾ | OneIndia Kannada

English summary
Kodagu and Chikkamagaluru district witnessed for heavy rain. Here are the tips to protect Coffee crop in the time of rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X