ಶಿವಮೊಗ್ಗದಲ್ಲಿ ಫೆ.1ರಿಂದ ಮೂರು ದಿನಗಳ ವೈನ್ ಮೇಳ

ಶಿವಮೊಗ್ಗ, ಜನವರಿ 31 : ಶಿವಮೊಗ್ಗ ನಗರದಲ್ಲಿ ಫೆ.1ರಿಂದ ಮೂರು ದಿನಗಳ ಕಾಲ ವೈನ್ ಮೇಳ ನಡೆಯಲಿದೆ. ಮೇಳದ ಹಿನ್ನಲೆಯಲ್ಲಿ ವೈನ್ ಮಾರಾಟದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲಾಗಿದೆ.

ತೋಟಗಾರಿಕಾ ಇಲಾಖೆ ಮತ್ತು ಕರ್ನಾಟಕ ದ್ರಾಕ್ಷಾರಸ ಮಂಡಳಿ ಸಹಯೋಗದಿಂದ ಫೆ.1 ರಿಂದ 3ರ ತನಕ ನಗರದ ಹಳೇ ಜೈಲು ಆವರಣದಲ್ಲಿ ಅಂತರಾಷ್ಟ್ರೀಯ ವೈನ್ ಮೇಳ ನಡೆಯಲಿದೆ.

ಸುಮಾರು 10 ವೈನರಿಗಳು, 150 ಬ್ರಾಂಡ್‌ನ ವೈನ್‌ಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಮೇಳದ ಹಿನ್ನಲೆಯಲ್ಲಿ ವೈನ್ ಮಾರಾಟದ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗಿದೆ.

Three-day wine festival in Shivamogga from February 1

ಯುರೋಪ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೆರಿಕದ ವೈನ್‌ಗಳು ಮೇಳದಲ್ಲಿ ಇರಲಿವೆ. ವಿವಿಧ ದೇಶಗಳ ವೈನ್ ಸವಿಯುವ ಜೊತೆ ಅವುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.

ಶತಾಬ್ದಿ ರೈಲಿಗೆ ಚಾಲನೆ : ಶಿವಮೊಗ್ಗ-ಬೆಂಗಳೂರು ನಡುವಿನ ಶತಾಬ್ದಿ ರೈಲಿಗೆ ಫೆ.3ರಂದು ಚಾಲನೆ ಸಿಗಲಿದೆ. ವಾರದಲ್ಲಿ ನಾಲ್ಕು ದಿನ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ಶಿವಮೊಗ್ಗದಿಂದ ಬೆಂಗಳೂರಿನ ಯಶವಂತಪುರ ನಿಲ್ದಾಣದ ತನಕ ರೈಲು ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+