ಐಸಿಎಆರ್ ಶ್ರೇಯಾಂಕದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ 1ನೇ ಸ್ಥಾನ

ಬೆಂಗಳೂರು, ಸೆಪ್ಟಂಬರ್ 30: ತೋಟಗಾರಿಕೆ ಮತ್ತು ಕೃಷಿ ಕುರಿತ ಸಂಶೋಧನಾ ಸಂಸ್ಥೆಗಳ ಪೈಕಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್)ಗೆ ಐಸಿಎಆರ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಲಭಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಬುಧವಾರ ಬಿಡುಗಡೆ ಮಾಡಿದ 2019-20 ಮತ್ತು 2020-21 ರ ಸಂಯೋಜಿತ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್)ಗೆ ಎರಡು ಸಾಲಿನ ಅಗ್ರಸ್ಥಾನ ದಕ್ಕಿದೆ. ತೋಟಗಾರಿಕೆ, ಕೃಷಿ ಕುರಿತು ಅದರ ಸಂಶೋಧನೆ, ರೈತರ ಪರ ಉಪಕ್ರಮಗಳಿಂದ ಅಗ್ರಸ್ಥಾನಕ್ಕೇರಿದೆ. ಇದು ಬೆಂಗಳೂರಿಗೆ ಹೆಮ್ಮೆಯ ಸಂಗತಿಯಾಗಿದೆ.

ಐಐಎಚ್‌ಆರ್ ಒಟ್ಟು 93 ವಿವಿಧ ಸಂಸ್ಥೆಗಳನ್ನು ಶ್ರೇಯಾಂಕಕ್ಕಾಗಿ ಪರಿಗಣಿಸಲಾಗಿದೆ. ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಅಭಿವೃದ್ಧಿಪಡಿಸಿದ ಸಸ್ಯ ಪ್ರಭೇದಗಳು ಮತ್ತು ತಂತ್ರಜ್ಞಾನಗಳಿಂದ ದೇಶದ ಬೊಕ್ಕಸಕ್ಕೆ ವರ್ಷಕ್ಕೆ ರೂ.13,000 ಕೋಟಿ ಸಂದಾಯವಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ವಲಯದಲ್ಲಿ ರೈತರ ಆದಾಯ ದ್ವಿಗುಣಗೊಳ್ಳುವ ಸಾಕಷ್ಟು ಸಂಶೋಧನೆಗಳಲ್ಲಿ ಸಂಸ್ಥೆ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದೆ.

The top 1st for Indian Institute of Horticultural Research in ICAR ranking

ಸಂಸ್ಥೆಯ ಕಾರ್ಯಕ್ಷಮತೆ, ಸಂಸ್ಥೆಯನ್ನು ಹೊರಗಿನಿಂದ ಗುರುತಿಸುವಿಕೆ, ಅದರ ಅಧ್ಯಾಪಕರು ಸ್ವೀಕರಿಸಿದ ಪ್ರಶಸ್ತಿಗಳು, ಸಂಶೋಧನೆಗಳು ಹಾಗೂ ಅದರ ಫಲಿತಾಂಶ, ಸಂಸ್ಥೆಯು ಕೈಗೊಂಡ ಸಂಶೋಧನೆಯ ಪ್ರಭಾವ, ಸಂಸ್ಥೆಯ ದೂರದೃಷ್ಟಿ, ಭವಿಷ್ಯದ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಐಸಿಎಆರ್ ಶ್ರೇಯಾಂಕ ನೀಡುತ್ತದೆ.

54 ತೋಟಗಾರಿಕಾ ಬೆಳೆ ಮೇಲೆ ಸಂಶೋಧನೆ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು 54 ಪ್ರಮುಖ ತೋಟಗಾರಿಕಾ ಬೆಳೆಗಳ ಮೇಲೆ ಸಂಶೋಧನೆ ನಡೆಸಿದೆ ಹಾಗೂ ನಡೆಸುತ್ತಿದೆ. 1967ರಲ್ಲಿ ಆರಂಭವಾದ ಈ ಸಂಸ್ಥೆ ಕೃಷಿ-ತೋಟಗಾರಿಕೆ ಸಂಬಂಧ ಬೆಳೆಗಳಲ್ಲಿ 330 ಮಿಶ್ರತಳಿಗಳು ಹಾಗೂ ಇತರ ಪ್ರಭೇದಗಳನ್ನು ಬಿಡುಗಡೆ ಮಾಡಿದೆ ಮೈಲುಗಲ್ಲು ಸ್ಥಾಪಿಸಿದೆ.

ಅಲ್ಲದೇ ಸಂಸ್ಥೆಯು 157 ತಂತ್ರಜ್ಞಾನ ಲೋಕಾರ್ಪಣೆ ಮಾಡಿದೆ. ಇದು ದೇಶದ ತೋಟಗಾರಿಕಾ ವಲಯದಲ್ಲಿನ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಯ್ದ ಎಂಟು ಮಿಶ್ರತಳಿಗಳು, ವೈವಿಧ್ಯಗಳು ಮತ್ತು ತಂತ್ರಜ್ಞಾನಗಳಿಂದ ದೇಶಕ್ಕೆ ವಾರ್ಷಿಕವಾಗಿ ರೂ. 13,000 ಕೋಟಿ ಆದಾಯ ಬರುತ್ತಿದೆ. ಸದ್ಯ ಸಂಸ್ಥೆಯು ತೋಟಗಾರಿಕಾ ತಂತ್ರಜ್ಞಾನಗಳ ಮೂಲಕ ಉದ್ಯಮಶೀಲತೆ, ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

The top 1st for Indian Institute of Horticultural Research in ICAR ranking

ಬೀಜ ತಳಿಗಳ ಮಾರಾಟಕ್ಕೆ ಪೋರ್ಟಲ್

ದೇಶದಲ್ಲಿಯೇ ಮೊದಲ ಬಾರಿಗೆ ಐಐಎಚ್ಆರ್‌ ಸಂಸ್ಥೆ ತಾನು ಬಿಡುಗಡೆ ಮಾಡಿದ ವಿವಿಧ ತಳಿಗಳ ಬೀಜಗಳ ಮಾರಾಟಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಆರಂಭಿಸಿದೆ. ಇಂತಹ ಹತ್ತ ಹಲವು ವಿಚಾರಗಳಲ್ಲಿ ಮುಂದಿರುವ ಐಐಎಚ್‌ಆರ್‌ಗೆ ಮನ್ನಣೆ ದೊರೆತಿರುವುದು ಸಂಸ್ಥೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅತ್ಯಾಧುನಿಕ ಸಂಶೋಧನೆಯತ್ತ ಹೆಜ್ಜೆ ಇಡಲು ಈ ಗೌರವ ಪ್ರೇರೆಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಐಎಚ್‌ಆರ್‌ ನಂತರದಲ್ಲಿ 'ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲ್ ಇನ್ಸೆಕ್ಟ್ ರಿಸೋರ್ಸಸ್' ಮತ್ತು 'ನ್ಯಾಷನಲ್ ಇನ್ಸಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫಾರ್ಮ್ಯಾಟಿಕ್ಸ್' ಸಂಸ್ಥೆಗಳು ಕ್ರಮವಾಗಿ 23 ಮತ್ತು 50ನೇ ಸ್ಥಾನ ಪಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+