ಬೇಸಿಗೆಯ ಕಾವು: ಮಾವು ಬೆಳೆ ಸಂರಕ್ಷಣಾ ಕ್ರಮಗಳು
ಬೆಂಗಳೂರು, ಫೆಬ್ರವರಿ 27; ಬೇಸಿಗೆಯ ಕಾವು ಹೆಚ್ಚಾಗುತ್ತಿದೆ. ಮಾವು ಬೆಳೆಯುವ ರೈತರು ಹಲವು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಮಿತಿಯು ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
2023-24 ನೇ ಸಾಲಿನ ಮಾವು ಹಂಗಾಮಿನಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಸಸ್ಯ ಸಂರಕ್ಷಣೆ, ಹೂ ಮತ್ತು ಕಾಯಿ ಉಳಿಸಿಕೊಳ್ಳುವುದು, ರೋಗ ಬಾಧೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ.

ರೈತರಿಗೆ ಸಲಹೆಗಳು
* ಜಿಗಿ ಹುಳು, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ ಮತ್ತು ಇತರೆ ರಸ ಹೀರುವ ಕೀಟಗಳ ರೋಗ ಭಾದೆಗೆ ಥೈಯೋಮೆಥೋಕ್ಸಾಮ್ ( 25 ಡಬ್ಲೂ ಜಿ (0.25 ಗ್ರಾಂ, ಲೀ) , ಇಮಿಡಾಕ್ಲೋಪ್ರಡ್ 17.8% ಎಸ್‍ಎಲ್ (0.3 ಮಿ.ಲೀ, ಲೀ), ಲಾಂಬ್ಡಾಸೈಹ್ಯಾಲೋಥ್ರಿನ್ (5ಇಸಿ ಮಿ.ಲೀ/ಲೀ), ಬುಪ್ರೊಫೆಜಿನ್ 25 ಇಸಿ.(2.0 ಮಿ.ಲೀ, ಲೀ) ರೋಗ ನಾಶಕಗಳನ್ನು ಸಿಂಪಡಿಸಬೇಕು.
* ಹಣ್ಣಿನ ನೋಣ ರೋಗಕ್ಕೆ ಲಾಂಬ್ಡಾಸೈಹ್ಯಾಲೋಥ್ರಿನ್ 5ಇಸಿ ( 0.6 ಮಿ.ಲೀ, ಲೀ), ಇಂಡಾಕ್ಸಕಾರ್ಬ 14.8ಎಸ್‍ಸಿ (1.0 ಮಿ.ಲೀ, ಲೀ), ಡೆಲ್ಟಾಮೆಥ್ರಿನ್ 2.8ಇಸಿ (1.0 ಮಿ.ಲೀ, ಲೀ) ಜೊತೆ ಮೇಲೆ ತಿಳಿಸಿರುವ ರಾಸಾಯನಿಕಗಳ ಜೊತೆಗೆ 5 ಗ್ರಾಂ ಬೆಲ್ಲವನ್ನು 5 ಗ್ರಾಂ, ಲೀ ಪ್ರತಿ ಲೀಟರ್‌ಗೆ ಸೇರಿಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ರೋಗ ನಾಶಕವನ್ನು ಸಿಂಪಡಿಸಬೇಕು.
* ಬೂದು ರೋಗಕ್ಕೆ ಹೆಕ್ಸಕೊನಜೋಲ್ 5ಇಸಿ (10 ಮಿ.ಲೀ, ಲೀ), ಡೈಫೆಂಕೊನಜಾಲ್ 25ಇಸಿ (0.5 ಮಿ.ಲೀ, ಲೀ), ಟೆಬುಕೊನಜೋಲ್ (0.5 ಮಿ.ಲೀ, ಲೀ) ರೋಗ ನಾಶಕವನ್ನು ಸಿಂಪಡಿಸಬೇಕು.
* ಹೂ ತೆನೆ ಒಣಗುವ ರೋಗಕ್ಕೆ ಕಾರ್ಬನ್‍ಡೈಜಿಂ 12% ಜೊತೆ ಮ್ಯಾಂಕೋಜಬ್ 63% (2.0 ಗ್ರಾಂ, ಲೀ)ಗೆ ರೋಗ ನಾಶಕವನ್ನು ಸಿಂಪಡಿಸುವ ದ್ರವಣಕ್ಕೆ ಸೋಪು ದ್ರವಣವನ್ನು (0.5 ಮಿ.ಲೀ, ಲೀ) ಮತ್ತು ಅರ್ಧ ಹೋಳು ನಿಂಬೆರಸ ಬೆರಸಿ ಸಿಂಪಡಿಸಿದರೆ ಅದು ಪರಿಣಾಮಕಾರಿಯಾಗಿ ಅಂಟಿಕೊಳ್ಳುತ್ತದೆ ಎಂದು ಮಾಹಿತಿ ನೀಡಲಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ತೋಟಗಾರಿಕೆ ತರಬೇತಿಗಾಗಿ ಅರ್ಜಿ ಹಾಕಿ: ಧಾರವಾಡ ಜಿಲ್ಲೆಯ ರೈತ ಮಕ್ಕಳಿಗಾಗಿ 2024-25ನೇ ಸಾಲಿಗೆ, 10 ತಿಂಗಳ ಅವಧಿಯ (ಮೇ 2, 2024 ರಿಂದ ಮೇ 28, 2025 ರವರೆಗೆ) ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕಾ ತರಬೇತಿಯನ್ನು ಆಯೋಜಿಸಲಾಗಿದೆ.
ಮಹಿಳಾ-05 ಹಾಗೂ ಪುರುಷ-10 ಒಟ್ಟು- 15 ಅಭ್ಯರ್ಥಿಗಳಿಂದ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತಿ ಧಾರವಾಡ ಕಛೇರಿಯಲ್ಲಿ ಸಲ್ಲಿಸಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30 ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (ಐಪಿಓ) ಅಥವಾ ಬ್ಯಾಂಕ್ ಡಿಮ್ಯಾಂಡ್ ಡ್ರಾಪ್ಟ್‍ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಧಾರವಾಡ ಅವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಅರ್ಜಿ ಶುಲ್ಕದ ಬಾಬತ್ತು ಲಗತ್ತಿಸಬೇಕು.
ಅರ್ಜಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಸ್ಟೇಷನ್ ರಸ್ತೆ, ಧಾರವಾಡ ಅವರ ಕಛೇರಿಯಲ್ಲಿ, https://horticulturedir.karnataka.gov.in ವೆಬ್‌ಸೈಟ್‌ನಲ್ಲಿ ಮಾರ್ಚ 1 ರಿಂದ 30, 2024 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿ ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಏಪ್ರಿಲ್ 1, 2024 ರ ಸಂಜೆ 5:30 ಗಂಟೆಯೊಳಗಾಗಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಧಾರವಾಡ ಕಛೇರಿ ಅಥವಾ ದೂರವಾಣಿ 0836-2957801 ಸಂಪರ್ಕಿಸಬಹುದು.












Click it and Unblock the Notifications