ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ರೈತರು

ಬೆಂಗಳೂರು, ಜೂ. 23 : ಕಬ್ಬು ಬೆಳೆಗಾರರಿಗೆ ನೀಡಿರುವ ಭರವಸೆಯನ್ನು ಈಡೇರಿಸದ ಸರ್ಕಾರದ ವಿರುದ್ಧ ಸೋಮವಾರ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಘೋಷಿಸಿದ್ದು, ಮೆಜೆಸ್ಟಿಕ್, ಕೆ.ಆರ್.ಸರ್ಕಲ್ ಮುಂತಾದ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿವೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ರೈತರು ಸಿಟಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭಿಸಲಿದ್ದು, ಆನಂದರಾವ್ ವೃತ್ತ, ಕೆ.ಆರ್.ಸರ್ಕಲ್ ಮೂಲಕ ವಿಧಾನಸೌಧ ತಲುಪಲಿದ್ದಾರೆ.

Vidhana Soudha

ವಿಧಾನಸೌಧ ಮುತ್ತಿಗೆ ಬಗ್ಗೆ ಮಾಹಿತಿ ನೀಡಿರುವ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ಬಾಕಿ ಹಣವನ್ನು ಕೊಡಿಸುವಲ್ಲಿ ಸರ್ಕಾರ ವಿಫ‌ಲವಾಗಿದೆ. ಕಬ್ಬು ಬೆಳೆಗಾರರ ಸಾಲ ಮನ್ನಾ ಮಾಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ ಎಂದು ಆರೋಪಿಸಿದರು. [ಬಿಜಾಪುರದಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ]

ಒಟ್ಟು 38 ಬೇಡಿಕೆಗಳ ಈಡೇರಿಕೆಗೆ ಈ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಸಿಟಿ ರೈಲ್ವೆ ನಿಲ್ದಾಣದಿಂದ ಕೆ.ಆರ್.ವೃತ್ತದ ಮೂಲಕ ವಿಧಾನಸೌಧ ತಲುಪಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ವಿಧಾನಸೌಧದದ ಸುತ್ತಮುತ್ತ ನಿಷೇಧಾಜ್ಞೆ ಇರುವ ಕಾರಣ ರೈತರನ್ನು ಪೊಲೀಸರು ಫ್ರೀಡಂ ಪಾರ್ಕ್ ಬಳಿ ತಡೆಯುವ ಸಾಧ್ಯತೆ ಇದೆ.

ನಿಷೇಧಾಜ್ಞೆ : ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ಜೂ.23ರ ಸೋಮವಾರಿಂದ ಜು.30ರ ವರೆಗೆ ರಜಾ ದಿನ ಹೊರತುಪಡಿಸಿ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರ ವರೆಗೆ ವಿಧಾನಸೌಧದದ ಸುತ್ತಮುತ್ತ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ವಿಧಾನಸೌಧದ ಸುತ್ತಮುತ್ತಲ ಎರಡು ಕಿ.ಮೀ. ವ್ಯಾಪ್ತಿಯ ಪ್ರದೇಶ ಈ ಆದೇಶಕ್ಕೆ ಒಳಪಡಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಸಂಚಾರ ಬದಲಾವಣೆ : ರೈತರ ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಕಡೆಯಿಂದ ಆನಂದರಾವ್‌ ವೃತ್ತದ ಮೇಲ್ಸೇತುವೆ ಮೂಲಕ ನಗರದ ವಿವಿಧ ಸ್ಥಳಗಳಿಗೆ ಹೋಗುವ ವಾಹನ ಸವಾರರು ಮಲ್ಲೇಶ್ವರ ಲಿಂಕ್ ರಸ್ತೆ, ಶೇಷಾದ್ರಿಪುರ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದು ಮುಂದೆ ಸಾಗಬೇಕು.

* ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್‌ ಕಡೆಯಿಂದ ಬರುವ ವಾಹನಗಳು ಹುಣಸೇಮರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಬಿನ್ನಿಮಿಲ್‌, ಸಿರ್ಸಿ ವೃತ್ತ, ಸಿಟಿ ಮಾರುಕಟ್ಟೆ, ಪುರಭವನ ಮಾರ್ಗವಾಗಿ ಹೋಗಬೇಕು. ಹಾಗೆಯೇ ಬಸವೇಶ್ವರ ವೃತ್ತದಿಂದ ರೇಸ್‌ ಕೋರ್ಸ್‌ ರಸ್ತೆ ಮೂಲಕ ಆನಂದರಾವ್‌ ವೃತ್ತಕ್ಕೆ ಬರುವ ವಾಹನಗಳು ಅರಮನೆ ರಸ್ತೆ, ಕೆ.ಆರ್‌.ವೃತ್ತ ಮಾರ್ಗವಾಗಿ ಸಾಗಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+