ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಿತ್ತುಳುವುದನವ ಬಿಡುವುದೇ ಇಲ್ಲ..."; ಬಿಕ್ಕಟ್ಟಿನಲ್ಲೂ ಹೆಚ್ಚಿದ ಬಿತ್ತನೆ ಪ್ರದೇಶ

|
Google Oneindia Kannada News

ಕೊರೊನಾ ಸಂಕಷ್ಟದ ನಡುವೆಯೂ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಕೃಷಿ ಕೆಲಸ ಮಾಡಿದ್ದಾರೆ. ಬಿತ್ತನೆ ಪ್ರದೇಶವೂ ಹೆಚ್ಚಳವಾಗಿದೆ. 14 ಆಗಸ್ಟ್-ನಿನ್ನೆಯವರೆಗೆ ದೇಶದಲ್ಲಿ ಒಟ್ಟಾರೆ 1015.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂದಿನ ವರ್ಷ ಈ ಸಮಯಕ್ಕೆ 935.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಲೆಕ್ಕಾಚಾರದ ಪ್ರಕಾರ ಈ ವರ್ಷದ ಮುಂಗಾರು ಬಿತ್ತನೆ ಶೇಕಡಾ 8.54 ರಷ್ಟು ಹೆಚ್ಚಳವಾಗಿದೆ.

ಪ್ರವಾಹ ನಂತರದ ಕೃಷಿ ಚಟುವಟಿಕೆ: ರೈತರಿಗೆ ಸರ್ಕಾರದ ಸಲಹೆಪ್ರವಾಹ ನಂತರದ ಕೃಷಿ ಚಟುವಟಿಕೆ: ರೈತರಿಗೆ ಸರ್ಕಾರದ ಸಲಹೆ

ಭತ್ತ: 351.86 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದೆ. ಹಿಂದಿನ ವರ್ಷ ಇದೇ ಸಮಯಕ್ಕೆ 308.51 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿತ್ತು. ಹಿಂದಿನ ವರ್ಷಕ್ಕಿಂತ 43.35 ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ.

Sowing Area Increased Inbetween Coronavirus crisis In India

ಬೇಳೆ ಕಾಳುಗಳು: 124.01 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಮಾಡಲಾಗುತ್ತಿದೆ. ಹಿಂದಿನ ವರ್ಷ121.50 ಹೆಕ್ಟೇರ್ ಬೆಳೆಯಲಾಗಿತ್ತು. ಒಟ್ಟಾರೆ ಈ ಬಾರಿ 2.51 ಲಕ್ಷ ಹೆಕ್ಟೇರ್ ಹೆಚ್ಚಿನ ಬೆಳೆ ಮಾಡಲಾಗಿದೆ.

ಧಾನ್ಯಗಳು: ಈ ವರ್ಷ 168.12 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂದಿನ ವರ್ಷ ಇದೇ ಸಮಯಕ್ಕೆ 162.28 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಒಟ್ಟಾರೆ 5.84 ಲಕ್ಷ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ.

ಎಣ್ಣೆ ಕಾಳುಗಳು: ಈ ವರ್ಷ 187.14 ಲಕ್ಷ ಹೆಕ್ಟೇರ್. ಹಿಂದಿನ ವರ್ಷ 163.57 ಹೆಕ್ಟೇರ್. ಹೆಚ್ಚುವರಿ 23.56 ಲಕ್ಷ ಹೆಕ್ಟೇರ್.

Sowing Area Increased Inbetween Coronavirus crisis In India

ಕಬ್ಬು: ಈ ವರ್ಷ 52.02 ಲಕ್ಷ ಹೆಕ್ಟೇರ್. ಹಿಂದಿನ ವರ್ಷ 51.40 ಲಕ್ಷ ಹೆಕ್ಟೇರ್. ಹೆಚ್ಚುವರಿ0.62 ಲಕ್ಷ ಹೆಕ್ಟೇರ್.

ಹತ್ತಿ: ಈ ವರ್ಷ 125.48 ಲಕ್ಷ ಹೆಕ್ಟೇರ್. ಹಿಂದಿನ ವರ್ಷ ಈ ಸಮಯಕ್ಕೆ 121.58 ಲಕ್ಷ ಹೆಕ್ಟೇರ್. ಹೆಚ್ಚುವರಿ 3.90 ಹೆಕ್ಟೇರ್.

"ಮುತ್ತಿಗೆ ಹಾಕಲಿ ಸೈನಿಕರೆಲ್ಲಾ ಬಿತ್ತುಳುವುದನವ ಬಿಡುವುದೇ ಇಲ್ಲಾ"... ಎಂಬ ಕವಿಸಾಲಿನಂತೆ ಎಂಥದೇ ಬಿಕ್ಕಟ್ಟಿನಲ್ಲೂ ರೈತ ತನ್ನ ಕಾಯಕವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾನೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಈ ಅಂಕಿ ಅಂಶಗಳು ಪ್ರಕಟವಾಗಿದೆ.

English summary
The sowing area has increased inbetween coronavirus crisis. As of 14 August, the country had 1015.58 lakh hectares sowing area,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X