• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಜನರು ದೂರವಾಣಿ ಕರೆ ಮಾಡಿ ಅಳುತ್ತಿದ್ದಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ'

|

ಬೆಂಗಳೂರು, ಏ. 05: ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ರೋಗ ಹರಡುವುದನ್ನು ತಡೆಯಲು ಲಾಕ್‌ಡೌನ್ ಮಾಡದೇ ಬೇರೆ ದಾರಿಯಿಲ್ಲ. ಆದರೆ ಲಾಕ್‌ಡೌನ್್ನಿಂದ ಲಕ್ಷಾಂತರ ಜನರು ಜೀವನ್ಮರಣದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ದಿನಗೂಲಿ ಕೆಲಸಗಾರರು ಸೇರಿದಂತೆ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಸರಿಯೊ ತಪ್ಪೊ, ಮೀಟರ್‌ ಬಡ್ಡಿ ಸಾಲವನ್ನಾದ್ರೂ ಪಡೆದು ಸಾವಿರಾರು ಜನರು ಜೀವನ ಮಾಡುತ್ತಿದ್ದರು. ಈಗ ಅವರ ಸ್ಥಿತಿಯೂ ವೈಸರ್‌ಗಿಂತ ಹಸಿವಿನಿಂದಲೇ ಸಾಯುವ ಸ್ಥಿತಿ ಬರುವಂತಾಗಿದೆ.

ಕೊರೊನಾ ಕಾರ್ಮೋಡ: ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

ನಗರ ಪ್ರದೇಶದಲ್ಲಿರುವವರಿಗೆ ತರಕಾರಿ ಸಿಗುತ್ತಿಲ್ಲ, ರೈತರು ಬೆಳೆದಿರುವ ತರಕಾರಿ, ಹಣ್ಣುಗಳು ಸಾಗಣೆ ಮಾಡಲು ಆಗದೇ ನಾಶ ಮಾಡುತ್ತಿದ್ದಾರೆ. ಈ ಎಲ್ಲವನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಅರಾಜಕತೆ ವಾತಾವರಣ ಉಂಟಾಗಿದೆ ಎಂದು ಸಿದ್ದರಾಮಯ್ಯ ಅವರು ಸರಣಿ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.

ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸರಣಿ ಪತ್ರ

ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸರಣಿ ಪತ್ರ

ದೇಶದಲ್ಲಿ ಲಾಕ್‌ಡೌನ್ ಜಾರಿಗೆ ತಂದು 10 ದಿನಗಳಾಗಿವೆ. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೊಷಣೆ ಮಾಡಿದೆ. ಆದರೆ ದಿನದ ದುಡಿಮೆಯನ್ನು ಆಧರಿಸಿ ಬದುಕುತ್ತಿದ್ದ ಅಸಂಘಟಿತ ವಲಯದ ಕಾರ್ಮಿಕರು ಆಹಾರಕ್ಕೂ ಪರದಾಡುವಂತಾಗಿದೆ. ರೈತ, ಕೂಲಿ ಕಾರ್ಮಿಕರು ಇಲ್ಲದ ಆರ್ಥಿಕತೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅವರೆಲ್ಲರ ಸಹಾಯಕ್ಕೆ ಸರ್ಕಾರ ಹೋಗಬೇಕಿದೆ.

ಮನೆ ಕೆಲಸದವರು, ಮಡಿವಾಳರು, ಸವಿತಾ ಸಮಾಜದವರು, ನೇಕಾರರು, ಗಾರ್ಮೆಂಟ್ಸ್ ಕೆಲಸಗಾರರು, ಕಟ್ಟಡ ಕಾರ್ಮಿಕರು, ಟ್ಯಾಕ್ಸಿ, ಟ್ರಕ್ಕುಗಳ ಚಾಲಕರು, ಹಮಾಲರು, ಸಿನಿಮಾ ರಂಗದ ಹಾಗೂ ಕಿರುತೆರೆ ಕ್ಷೇತ್ರದ ಕಾರ್ಮಿಕರು, ಮೀನುಗಾರರು ಹಲವರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರೆಲ್ಲ ದೂರವಾಣಿ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡು ಅಳುತ್ತಿದ್ದಾರೆ. ಇವರಿಗೆಲ್ಲ ತಕ್ಷಣ ವಿಶೇಷ ಪ್ಯಾಕೇಜ್ ಘೊಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಲಾಕ್‌ಡೌನ್ ಅವಧಿಯ ಸಂಬಳವನ್ನು ಕೊಡುವಂತೆ ಮನವೊಲಿಕೆ ಮಾಡಿ

ಲಾಕ್‌ಡೌನ್ ಅವಧಿಯ ಸಂಬಳವನ್ನು ಕೊಡುವಂತೆ ಮನವೊಲಿಕೆ ಮಾಡಿ

ಜೊತೆಗೆ ಸಂಬಂಧಿಸಿದ ಕಾರ್ಮಿಕರ ಮಾಲೀಕರುಗಳು ಲಾಕ್‌ಡೌನ್ ಅವಧಿಯ ಸಂಬಳವನ್ನು ಕಾರ್ಮಿಕರಿಗೆ ಕೊಡುವಂತೆ ಸರ್ಕಾರ ಅವರ ಮನವೊಲಿಸಬೇಕು. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಪ್ರಾಯೋಗಿಕವಾಗಿ ನಡೆದುಕೊಳ್ಳಬೇಕು. ಮನವೀಯ ನೆಲೆಯಲ್ಲಿ ಕಾರ್ಮಿಕರ ಬವಣೆಗಳನ್ನು ಪರಿಹರಿಸಬೇಕೆಂದು ಸಿದ್ದರಾಮಯ್ಯ ಅವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವರೇ ಇಲ್ನೋಡಿ: ಕೊರೊನಾ ನೆಪದಲ್ಲಿ ರೈತರಿಗೆ ಆಗುತ್ತಿದೆ ಮಹಾ ಮೋಸ.!

ಲಾಕ್‌ಡೌನ್ ನೆಪದಲ್ಲಿ ಭೀಕರ ಸಮಸ್ಯೆ ಎದುರಿಸುತ್ತಿರುವ ರೈತರು

ಲಾಕ್‌ಡೌನ್ ನೆಪದಲ್ಲಿ ಭೀಕರ ಸಮಸ್ಯೆ ಎದುರಿಸುತ್ತಿರುವ ರೈತರು

ರಾಜ್ಯದಲ್ಲಿ ಕೊರೊನ ವೈರಸ್ ನೆಪದಲ್ಲಿ ಕೃಷಿ, ತೋಟಗಾರಿಗೆ, ರೇಷ್ಮೆ ಮುಂತಾದ ರೈತಾಪಿ ಜನರು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಬರ ಹಾಗೂ ಪ್ರವಾಹದಿಂದ ನಲುಗಿರುವ ಕೃಷಿಕ ಸಮುದಾಯ ಈಗ ಕಷ್ಟಪಟ್ಟು ಬೆಳೆದಿರುವ ಬೆಳೆಗಳನ್ನು ಮಾರಕಟ್ಟೆಗೆ ಸಾಗಿಸಲಾರದೆ ತಮ್ಮ ಹೊಲದಲ್ಲಿಯೆ ನಾಶ ಮಾಡುತ್ತಿದ್ದಾರೆ. ಹೂವು, ತರಕಾರಿ, ಹಣ್ಣುಗಳನ್ನು ಬೆಳೆದಿರುವ ರೈತರ ಕಷ್ಟ ಹೇಳತೀರದು. ಈ ಬಗ್ಗೆ ಕೋಲಾರದ ರೈತರೊಬ್ಬರು ದೂರವಾಣಿ ಕರೆ ಮಾಡಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಅರಾಜಕತೆ ವಾತಾವರಣ ಉಂಟಾಗಿದೆ

ರಾಜ್ಯದಲ್ಲಿ ಅರಾಜಕತೆ ವಾತಾವರಣ ಉಂಟಾಗಿದೆ

ನಗರ, ಪಟ್ಟಣ ಪ್ರದೇಶಗಳು ಜನರು ಹಣ್ಣು ತರಕಾರಿಗಳು ಸರಿಯಾಗಿ ಸಿಗದೇ ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಪೂರೈಕೆ ಮಾಡದೇ ಇರುವುದರಿಂದ ಎಪಿಎಂಸಿ ಹಾಗೂ ಸಂತೆಗಳಲ್ಲಿ ಜನರು ಗುಂಪುಗೂಡುತ್ತಿದ್ದಾರೆ. ರೈತ ಹಾಗೂ ಗ್ರಾಹಕ ಇಬ್ಬರಿಗೂ ಒಂದೇ ಸಲಕ್ಕೆ ಸಂಕಷ್ಟ ಬಂದಿರುವುದರಿಂದ ಅರಾಜಕತೆ ವಾತಾರವಣ ಉಂಟಾಗಿದೆ. ರೈತರು ಲಂಚ ಕೊಡದೇ ಇದ್ದರೆ ಅವರು ಕಷ್ಟಪಟ್ಟು ಬೆಳೆದಿರುವ ಬೆಳಗಳನ್ನು ಮಾರುಕಟ್ಟೆಗೆ ಸಾಗಿಸಲು ಪೊಲೀಸರು, ಆರ್‌ಟಿಓಗಳು ಬಿಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಲಂಚಬಾಕುತನವನ್ನು ನೋಡಿದ್ರೆ ಸರ್ಕಾರ ಇದೆಯೊ ಇಲ್ಲವೊ ಎಂಬ ಅನುಮಾನ ಜನರಲ್ಲಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಕೊರೊನಾ ಪರಿಹಾರ ನಿಧಿಗೆ ತಲಾ 1 ಲಕ್ಷ ದೇಣಿಗೆಗೆ ಸಿದ್ದರಾಮಯ್ಯ ಮನವಿ

ಈ ತಿಂಗಳು ಅಪಾರ ಪ್ರಮಾಣದ ಮಾವು ಮಾರುಕಟ್ಟೆಗೆ ಬರಲಿದೆ

ಈ ತಿಂಗಳು ಅಪಾರ ಪ್ರಮಾಣದ ಮಾವು ಮಾರುಕಟ್ಟೆಗೆ ಬರಲಿದೆ

ಜೊತೆಗೆ ಈ ತಿಂಗಳು ಅಪರ ಪ್ರಮಾಣದ ಮಾವು ಮಾರುಕಟ್ಟೆಗೆ ಬರಲಿದೆ. ವಿಮಾನ, ರೈಲುಗಳಿಲ್ಲದೆ ಬೆಳೆದ ಬೆಳೆಯನ್ನು ಹೊರ ರಾಜ್ಯಗಳಿಗೆ, ದೇಶಗಳಿಗೆ ಸಾಗಿಸುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬೆಲೆ ಕುಸಿತ ಉಂಟಾಗಲಿದೆ. ಹಾಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಮ್ಮ ಆಂತರಿಕ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಸಧ್ಯ ದೇಶವೇ ಒಂದು ಉಪಖಂಡವಾದ್ದರಿಂದ ರಾಜ್ಯದ ರೈತರಿಗೆ ಬೇರೆ ರಾಜ್ಯ ಮಾರುಕಟ್ಟೆಯಾಗಿದೆ. ಬೇರೆ ರಾಜ್ಯಗಳ ಸರ್ಕಾರದೊಂದಿಗೆ ಮಾತನಾಡಿ ಹಣ್ಣು, ತರಕಾರಿ ಹಾಗೂ ಹೂವುಗಳ ಮುಕ್ತ ಸಾಗಣೆಯು ರಾಜ್ಯಗಳ ಮಧ್ಯೆ ಆಗುವಂತೆ ನೋಡಿಕೊಳ್ಳಬೇಕು.

ಅರೆ ಮಲೆನಾಡು, ಮಲೆನಾಡು ಕೆಲವು ಕಡೆ ಬಯಲು ಸೀಮೆಯಲ್ಲಿಯೂ ಮುಂಗಾರಿಗೆ ಮೊದಲೇ ಬಿತ್ತನೆ ಮಾಡುತ್ತಾರೆ. ಆದರೆ ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ರೈತರಿಗೆ ಸೂಕ್ತ ಬೀಜ, ಗೊಬ್ಬರ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ಕೊರೊನಾ ವೈರಸ್‌ಗಿಂದ ಭೀಕರವಾಗುವ ಮೊದಲೇ ಸರ್ಕಾರ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.

English summary
Siddaramaiah letter to Yeddyurappa that the problem of farmers is increasing and causing anarchy in the state. Millions of unorganized labor lives have been in distress since the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X