ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನ್ಯಾಯಾಲಯ ಹೇಳಿದ್ದು ಸರಿಯಾಗಿದೆ; ನಾವು ಮಾತುಕತೆಗೆ ಸಿದ್ಧ"

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ನಿರತ ರೈತರನ್ನು ಗಡಿಯಿಂದ ತೆರವುಗೊಳಿಸುವಂತೆ ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿಗಳು ಬಂದಿವೆ.

ಈ ಅರ್ಜಿಗಳ ವಿಚಾರಣೆಯನ್ನು ಗುರುವಾರ ನ್ಯಾಯಾಲಯ ಮುಂದುವರೆಸಿದ್ದು, ರೈತರು ನಗರವನ್ನು ಹೀಗೆ ನಿರ್ಬಂಧಿಸುವಂತಿಲ್ಲ ಎಂದು ತಿಳಿಸಿದೆ. ಜೊತೆಗೆ ಕೇಂದ್ರ ಸರ್ಕಾರ ಹಾಗೂ ರೈತರು ಚರ್ಚೆ ನಡೆಸಿ ಈ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ರೈತ ಸಂಘ ಭಾರತೀಯ ಕಿಸಾನ್ ಯೂನಿಯನ್, "ಈ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿರುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ನಾವು ಮುಂದಿನ ಕ್ರಮದ ಕುರಿತು ಚರ್ಚಿಸುತ್ತೇವೆ. ಆದರೆ ನ್ಯಾಯಾಲಯ ಹೇಳಿದಂತೆ ನಾವು ನಗರವನ್ನು, ರಸ್ತೆಯನ್ನು ನಿರ್ಬಂಧಿಸಿಲ್ಲ. ಪೊಲೀಸರೇ ನಮ್ಮನ್ನು ನಿರ್ಬಂಧಿಸಿ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ" ಎಂದು ತಿಳಿಸಿದೆ.

SC Is Right Issue Should Be Resolved Soon Said BKU

"ನ್ಯಾಯಾಲಯ ಹೇಳಿದಂತೆ ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಿದೆ. ನಮ್ಮನ್ನು ಮಾತುಕತೆಗೆ ಕರೆದರೆ ನಾವು ಹೋಗುತ್ತೇವೆ. ಆದರೆ ಸರ್ಕಾರ ಕೃಷಿ ಕಾಯ್ದೆಯ ತಿದ್ದುಪಡಿ ಕುರಿತು ಮಾತನಾಡುತ್ತಿದೆ. ನಾವು ಅವುಗಳನ್ನು ರದ್ದು ಪಡಿಸಲು ಆಗ್ರಹಿಸುತ್ತಿದ್ದೇವೆ" ಎಂದು ರೈತ ಮುಖಂಡ ರಾಕೇಶ್ ತಿಕೈಟ್ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ಗಡಿಯಿಂದ ತೆರವುಗೊಳಿಸುವಂತೆ ಮನವಿ ಮಾಡಿ ನ್ಯಾಯಾಲಯಕ್ಕೆ ಬಂದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬುಧವಾರ ನೋಟಿಸ್ ನೀಡಿತ್ತು.

English summary
SC is right that issue should be resolved soon. We'll go if we're called. Govt wants amendments while we want them to take back Farm laws said Rakesh Tikait of BKU,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X