ನದಿ ಜೋಡಣೆ ಮಾಡುವುದು ಅಷ್ಟು ಸುಲಭವಲ್ಲ : ದೇವೇಗೌಡ

ಚಳ್ಳಕೆರೆ, ಸೆ. 05: ನದಿ ಜೋಡಣೆ ಬಗ್ಗೆ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ನದಿ ಜೋಡಣೆ ಕಾರ್ಯ ಅಷ್ಟು ಸುಲಭದ ಕೆಲಸವಲ್ಲ. ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಎಲ್ಲಾ ರಾಜ್ಯಗಳು ನದಿ ಜೋಡಣೆಗೆ ಒಮ್ಮತ ಮೂಡಿದರೆ ಮಾತ್ರ ಈ ಯೋಜನೆ ಸಾಧ್ಯವಾಗಲಿದೆ. ಚಳ್ಳಕೆರೆಯ ಪರಶುರಾಮಪುರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಮುತ್ತುರಾಜ್ ಅವರು ಆಯೋಜಿಸಿದ್ದ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು 72ಕ್ಕೂ ಅಧಿಕ ಹೊಸ ದಂಪತಿಗಳಿಗೆ ಶುಭ ಹಾರೈಸಿದ ನಂತರ ದೇವೇಗೌಡರು ಮಾತನಾಡಿದರು.

River linking project is not easy in India: HD Deve Gowda

ಇಸ್ರೇಲ್ ಮಾದರಿ ಕೃಷಿ ಮೂಲಕ ರೈತರ ವರಮಾನ ಹೆಚ್ಚಳ ಸಾಧ್ಯವಿದೆ. ಆದರೆ, ಅಲ್ಲಿನ ತಂತ್ರಜ್ಞಾನ ಇಲ್ಲಿ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಕುಮಾರಸ್ವಾಮಿ ಅವರು ಪ್ರವಾಸ ಕೈಗೊಂಡಿದ್ದರು.

ಈಗಾಗಲೇ ರಾಜ್ಯದ ತೋಟಗಾರಿಕೆ ಬೆಳೆ ನಷ್ಟ, ರೈತರ ಸಂಕಷ್ಟದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಆದರೆ, ಇಲ್ಲಿ ತನಕ ಯಾವುದೇ ಉತ್ತರ ಸಿಕ್ಕಿಲ್ಲ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ನಾನು ಕುಮಾರ ಪಥದಲ್ಲಿ ಸಾಗುತ್ತಿದ್ದೇನೆ. ಇದು ಏಳಿಗೆಯ ದಾರಿ. ಇದಕ್ಕೆ ಜನರ ಬೆಂಬಲ ಬೇಕು. ಮುಂದಿನ ಚುನಾವಣೆಯಲ್ಲಿ ಜೆ ಡಿಎಸ್ ಮಹತ್ವದ ಪಾತ್ರವಹಿಸಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+