ಬದಲಾದ ಆರ್ ಬಿಐ ಆದ್ಯತಾ ವಲಯ ಸಾಲದ ನೀತಿ
ಮುಂಬೈ, ಏ. 27: ಆದ್ಯತಾ ವಲಯಕ್ಕೆ ನೀಡುವ ಸಾಲಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕರಣೆ ಮಾಡಿದೆ. ಒಟ್ಟು ಸಾಲದಲ್ಲಿನ ಶೇ. 8ರಷ್ಟನ್ನು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಮೀಸಲಿಡುವಂತೆ ಎಲ್ಲ ಬ್ಯಾಂಕ್ಗಳಿಗೆ ಆರ್ ಬಿಐ ಸ್ಪಷ್ಟ ಸೂಚನೆ ನೀಡಿದೆ.
ಮಧ್ಯಮ ಗಾತ್ರದ ಉದ್ಯಮ, ಸಾಮಾಜಿಕ ಮೂಲ ಸೌಕರ್ಯ, ನವೀಕರಿಸಬಹುದಾದ ಇಂಧನಗಳನ್ನು ಸಹ ಆದ್ಯತಾ ವಲಯದೊಳಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದೆ. ಸಾಲ ನೀಡಿಕೆ ಗುರಿಯಲ್ಲೂ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ.(ಪಿಎಫ್ ಪಡೆಯುವುದು ಬಹಳ ಸುಲಭ)

ಸಣ್ಣ ಹಾಗೂ ಮಧ್ಯಮ ರೈತರಿಗೆ ನಿಗದಿಪಡಿಸಲಾಗಿರುವ ಒಟ್ಟು ಬ್ಯಾಂಕ್ಗಳ ಸಾಲದ ಶೇ. 8ರಷ್ಟನ್ನು ಹಂತಹಂತವಾಗಿ ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. 2016ರ ಮಾರ್ಚ್ ಒಳಗೆ ಶೇ. 7 ಮತ್ತು 2017ರ ಮಾರ್ಚ್ ಒಳಗೆ ಶೇ. 8ರ ಗುರಿ ಸಾಧನೆಯಾಗಬೇಕು ಎಂದು ಹೇಳಿದೆ.[ಅಂತರ್ಜಾಲದಲ್ಲಿ ಭವಿಷ್ಯ ನಿಧಿ ಮಾಹಿತಿ ಪಡೆಯುವುದು ಹೇಗೆ?]
ಪ್ರಧಾನ ಮಂತ್ರಿ ಜನ ಧನ ಯೋಜನೆಯನ್ನು ಕೂಡ ಆದ್ಯತಾ ವಲಯದ ಸಾಲವನ್ನಾಗಿ ಪರಿಗಣಿಸಲಾಗುವುದು. ಶಿಕ್ಷಣ ಕ್ಚೇತ್ರಕ್ಕೆ ಸಂಬಂಧಿಸಿ ನೀಡುತ್ತಿರುವ ಸಾಲ, ಮೂಲ ಸೌಕರ್ಯ ಅಭಿವೃದ್ಧಿಗೆ ಸಾಲದಲ್ಲಿನ ಕೆಲ ಮಾರ್ಪಾಡುಗಳಿಗೆ ಆರ್ ಬಿಐ ಹಸಿರು ನಿಶಾನೆ ತೋರಿದೆ.[ಬ್ಯಾಂಕುಗಳಿಂದ ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]
2019-20 ರ ವೇಳೆಗೆ ನಿಗದುಯಂತೆ ಗುರಿ ಸಾಧನೆಯಾದರೆ ದೇಶದ ಆರ್ಥಿಕ ಅಭಿವೃದ್ಧಿಯ ಪಥ ಬದಲಾಗಲಿದೆ. ಚಿದೇಶಿ ಬ್ಯಾಂಕ್ ಗಳಿಂದಲೂ ಇದಕ್ಕೆ ಹಣಕಾಸು ನೆರವು ಪಡೆದುಕೊಳ್ಳಲಾಗುವುದು ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications