ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನವಾಗಿ ಅಭಿಮಾನ ಮೆರೆದ ದೇವೇಗೌಡರ ಅಭಿಮಾನಿ ರೈತ

|
Google Oneindia Kannada News

ರಾಯಚೂರು, ಜನವರಿ 13: ದೇವೇಗೌಡ ಅವರ ಅಭಿಮಾನಿ ರೈತನೊಬ್ಬ ಭಿನ್ನವಾಗಿ ತನ್ನ ಅಭಿಮಾನವನ್ನು ತೋರ್ಪಡಿಸಿದ್ದಾನೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಾಣದಾಳ ಗ್ರಾಮದ ರೈತನೊಬ್ಬ ತನ್ನ ಹೊಲದಲ್ಲಿ ದೇವೇಗೌಡರ ಪ್ರತಿಮೆ ನಿರ್ಮಿಸಿದ್ದಾನೆ.

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ

ಗ್ರಾಮದ ಪ್ರಭಾಕರ ರೆಡ್ಡಿ ಎಂಬ ಯುವ ರೈತ ದೇವೇಗೌಡರ ಪ್ರತಿಮೆ ನಿರ್ಮಿಸಿದ್ದಾರೆ. ದೇವದುರ್ಗ ಭಾಗಕ್ಕೆ ನೀರಾವರಿ ಸೌಕರ್ಯ ಕಲ್ಪಿಸಿಕೊಟ್ಟ ದೇವೇಗೌಡರಿಗೆ ಈ ರೀತಿ ಆತ ಅಭಿನಂದನೆ ಸಲ್ಲಿಸಿದ್ದಾರೆ.

Raichuru Farmer Built Statue Of Deve Gowda

ಈ ಪ್ರತಿಮೆ ನಿರ್ಮಿಸಲು ಪ್ರಭಾಕರ ರೆಡ್ಡಿ ಅವರು 4.80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ. ನೀರು ನೀಡಿ ಈ ಭಾಗದ ರೈತರ ಜೀವನ ಉಳಿಸಿದಕ್ಕಾಗಿ ದೇವೇಗೌಡರ ಋಣ ತಿರಿಸಲು ಪ್ರತಿಮೆ ನಿರ್ಮಿಸಿರುವುದಾಗಿ ಪ್ರಭಾಕರ ರೆಡ್ಡಿ ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆ ಕುರಿತು ಮೌನ ಮುರಿದ ದೇವೇಗೌಡ ರಾಜ್ಯಸಭೆ ಚುನಾವಣೆ ಕುರಿತು ಮೌನ ಮುರಿದ ದೇವೇಗೌಡ

ಪ್ರತಿಮೆ ನಿರ್ಮಾಣ ಮಾಡಿ ಬಹಳಾ ದಿನವೇ ಆಗಿದೆ. ಪ್ರತಿಮೆಯ ಅನಾವರಣವನ್ನು ಕುಮಾರಸ್ವಾಮಿ ಅಥವಾ ಸ್ವತಃ ದೇವೇಗೌಡ ಅವರೇ ಮಾಡಬೇಕು ಎಂಬುದು ಪ್ರಭಾಕರ ರೆಡ್ಡಿ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಜನವರಿ 1 ನೇ ತಾರೀಖಿನಂದು ತಾನೇ ಸ್ವತಃ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.

ಪ್ರತಿಮೆಯ ಮೇಲೆ 'ಭಾರತ ರತ್ನ, ಕರ್ನಾಟಕ ಕಣ್ಮಣಿ, ದೇನದುರ್ಗ ತಾಲ್ಲೂಕಿನ ದೊರೆ ಮಾಜಿ ಪ್ರಧಾನಿಗಳು ಎಚ್‌.ಡಿ.ದೇವೇಗೌಡ' ಎಂದು ಬರೆಸಿದ್ದಾರೆ.

English summary
Raichuru's Devedurga taluk farmer Prabhakar Reddy build JDS leader Deve Gowda's statue in his agriculture field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X