ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.16 ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 15: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾರದ ವಿಳಂಬ ನೀತಿ ಖಂಡಿಸಿ ಡಿ.16 ರಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಕ್ಕಾಗಿ ಕಾಯ್ದೆ ಜಾರಿಗೆ ತರಲಾಗಿದೆ ಎನ್ನುತ್ತಾರೆ. ಆದರೆ ರೈತರ ಹೋರಾಟ ತೀವ್ರವಾಗುತ್ತಿದ್ದಂತೆ ತಿದ್ದುಪಡಿ ಮಾಡಲು ಮುಂದಾಗುತ್ತಾರೆ ಎಂದು ಕಿಡಿಕಾರಿದರು.

ದೆಹಲಿ ಗಡಿಯಲ್ಲಿ 60,000 ರೈತರು; ಪರಿಸ್ಥಿತಿ ಕೈಮೀರುವ ಸೂಚನೆ ಕೊಟ್ಟ ಪೊಲೀಸರುದೆಹಲಿ ಗಡಿಯಲ್ಲಿ 60,000 ರೈತರು; ಪರಿಸ್ಥಿತಿ ಕೈಮೀರುವ ಸೂಚನೆ ಕೊಟ್ಟ ಪೊಲೀಸರು

ಕಾಯ್ದೆಯಲ್ಲಿ ಲೋಪ ದೋಷವಿದೆ ಎಂಬುದನ್ನು ಈ ದ್ವಂದ್ವ ನೀತಿಯಿಂದ ತಿಳಿಯಬೇಕು, ಕಲ್ಲಿದ್ದಲು, ವಿಮಾನಯಾನ, ರೈಲ್ವೆ, ಟೆಲಿಕಾಂ ಇಲಾಖೆಗಳನ್ನು ಖಾಸಗಿ ವ್ಯವಸ್ಥೆಗೆ ಮಾರಲಾಗಿದೆ. ಈಗ ದೇಶದ ರೈತರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದು, ಅದಕ್ಕಾಗಿಯೇ ದೇಶದ ರೈತರು ಜಾಗೃತರಾಗಿ ಬೀದಿಗಿಳಿದಿದ್ದಾರೆ. ವಿರೋಧ ಪಕ್ಷಗಳು ರೈತ ಹೋರಾಟವನ್ನು ಬೆಂಬಲಿಸಿದರೆ ಆಡಳಿತ ಪಕ್ಷಕ್ಕೆ ಆಗುವ ನಷ್ಟವೇನು ಎಂದು ಪ್ರಶ್ನಿಸಿದರು.?

Protest At Mourya Circle In Bengaluru From Dec 16 In Support To Delhi Farmers Protest

ರಾಜ್ಯದ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಯಿತು. ಈ ಹೋರಾಟದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸರ್ಕಾರಗಳ ವೈಫಲ್ಯದಿಂದ ನಾವು ಚಳುವಳಿ ದಾರಿ ಹಿಡಿಯಬೇಕಾಗಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Recommended Video

ಬೆಂಗಳೂರು: ಚಿಂತಕರ ಚಾವಡಿ ಪರಿಷತ್ ನಲ್ಲಿ ಗಲಾಟೆ-ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ | Oneindia Kannada

ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ, ರಾಜಣ್ಣ, ಅಂಕಪ್ಪ, ಪರಶಿವಮೂರ್ತಿ ಮಹಿಳಾ ಸಂಚಾಲಕಿ ರಾಣಿ, ಬರಡನಪುರ ನಾಗರಾಜ್, ಆಡ್ಯ ರವಿ, ಪ್ರಸಾದ್ ನಾಯಕ್ ಮಂಜುನಾಥ್, ಕೆ.ಜಿ.ಎಸ್ ಗುರುಸ್ವಾಮಿ, ರಾಮೇಗೌಡ, ಕೃಷ್ಣೆಗೌಡ, ರಾಜು ಹೆಗ್ಗೂರ್ ರಂಗರಾಜ್, ಮುಂತಾದವರು ಇದ್ದರು.

English summary
It has been decided to hold a Satyagraha in front of the statue of Mahatma Gandhi near the Maurya Circle in Bengaluru from Dec.16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X