ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ

Recommended Video

      ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ | Oneindia kannada

      ಮೈಸೂರು, ಆಗಸ್ಟ್ 11 : ಭತ್ತದ ನಾಟಿ ಕಾರ್ಯಕ್ರಮ ಹಾಸ್ಯಸ್ಪದ ಎಂದು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

      ನಾನು ಸೀತಾಪುರಕ್ಕೆ ರಾಜಕೀಯ ಮೈಲೇಜ್‌ ಗಿಟ್ಟಿಸಿಕೊಳ್ಳಲು ಹೋಗುತ್ತಿಲ್ಲ. ಇದನ್ನ ರಾಜಕೀಯವಾಗಿ ತೆಗೆದುಕೊಂಡರೇ ನಾನೇನು ಮಾಡಲು ಆಗಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹುಟ್ಟಿದ್ದು ರೈತರ ಕುಟುಂಬದಲ್ಲಿ. ನನಗೆ ಭತ್ತದ ನಾಟಿ ಮಾಡೋದು ಹೊಸದೇನಲ್ಲ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಭತ್ತದ ಗದ್ದೆಗೆ ಇಳಿದು ನಾಟಿ ಮಾಡುತ್ತಿದ್ದೇನೆ ಇದನ್ನ ರಾಜಕೀಯವಾಗಿ ನೋಡಬೇಡಿ ಎಂದರು.

      planting paddy program is not for politicl gain: Kumaraswamy

      ನೆರೆ, ಬರ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಆದರೆ ಪರಿಹಾರ ಕ್ರಮಕ್ಕೆ ನೀತಿಸಂಹಿತೆ ಅಡ್ಡಿಯಾಗಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

      ಮೈತ್ರಿ ಸರ್ಕಾರದಿಂದ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕಿರಿಗೆ ತಿರುಗೇಟು ನೀಡಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗಿಲ್ಲವಾ..? ಅವರು ವರ್ಗಾವಣೆ ಮಾಡಿದ್ದಾಗ ದಂಧೆ ಮಾಡಿದ್ರಾ..? ಎಂದು ಪ್ರಶ್ನಿಸಿದರು.

      planting paddy program is not for politicl gain: Kumaraswamy

      ವರ್ಗಾವಣೆ ಆಡಳಿತದ ಒಂದು ಭಾಗ. ಇದರಲ್ಲಿ ದಂಧೆ ಎಲ್ಲಿಂದ ಬಂತು. ದಾಖಲೆ ಇದ್ದರೇ ಕೊಡಿ ಸುಮ್ಮನೆ ಆರೋಪ ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲೆಸೆದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+