ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!
ಬೆಂಗಳೂರು, ಏ. 2 : ದಕ್ಷಿಣ ಕರ್ನಾಟಕದ ಈ ಬಯಲುಸೀಮೆಯ ಭೂಮಿ ಫಲವತ್ತಾಗಿದ್ದರೂ ಕೃಷಿ ಚಟುವಟಿಕೆಗೆ, ಕುಡಿಯಲು ನೀರು ಕೇಳಿಕೇಳಿ ಈ ಭಾಗದ ಜನರ ಬಾಯಿಯ ಪಸೆ ಬತ್ತಿಹೋಗಿದೆ. ಶಾಶ್ವತ ನೀರಾವರಿಗಾಗಿ ರಾಜಕಾರಣಿಗಳಿಂದ ರಾಜಕಾರಣಿಗಳಿಗೆ ಮನವಿ ಪತ್ರ ಹಿಡಿದು ಅಲೆದಾಡಿದರೂ ಬೆವರು ಬಸಿದುಹೋಗಿದೆಯೇ ಹೊರತು, ಗರಿಗರಿ ಶುಭ್ರವಸ್ತ್ರಧಾರಿಗಳು ಇತ್ತ ತಿರುಗಿನೋಡುತ್ತಿಲ್ಲ.
ಇದು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಮಂಡ್ಯದ ಒಂದು ಭಾಗದ ಜನರ ದಶಕದ ಅಳಲು. ಅಂತರ್ಜಲ ಬತ್ತಿಹೋಗಿದ್ದರಿಂದ ಒಂದೂವರೆ ಸಾವಿರ ಅಡಿ ಭೂಮಿಯನ್ನು ಬಗೆದರೂ ಹಿಡಿನೀರು ಬೊಗಸೆ ತುಂಬುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆ ನಿಂತುಹೋಗಿದೆ. ಭೀಕರ ಬರ ಪರಿಸ್ಥಿತಿ ತಲೆದೋರಿದೆ. ಗ್ರಾಮಸ್ಥರು ಹೊಟ್ಟೆಹೊರೆಯಲು ನಗರದ ದಾರಿ ಹಿಡಿಯುತ್ತಿದ್ದಾರೆ.
ಉಳ್ಳವರು ಬೋರ್ವೆಲ್ ಕೊರೆಸಿದರೂ ಸಿಕ್ಕ ನೀರಿನಲ್ಲಿ ಫ್ಲೋರೈಡ್ ಅತ್ಯಧಿಕ ಪ್ರಮಾಣದಲ್ಲಿ ಇರುವುದರಿಂದ ಕುಡಿಯಲು ಅಯೋಗ್ಯ. ಸಿಕ್ಕ ನೀರು ಕೂಡ ಕೆಲವೇ ದಿನಗಳಲ್ಲಿ ಬರಿದಾಗಿ ಜನರು ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡ ರೈತರು ವಿಧಿಯಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಐದೂ ಜಿಲ್ಲೆಗಳ ಜನಪ್ರತಿನಿಧಿಗಳೇ ಉತ್ತರ ಹೇಳಬೇಕು. [ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ]

ಎಲ್ಲಿ ವೀರಪ್ಪ ಮೊಯ್ಲಿ? : ಶಾಶ್ವತವಾಗಿ ನೀರಿನ ಸೌಲಭ್ಯ ಒದಗಿಸುವುದಾಗಿ ಹೇಳಿ ಚಿಕ್ಕಬಳ್ಳಾಪುರ ಜನರಿಂದ ಆಯ್ಕೆಯಾಗಿ ಸಂಸತ್ತು ಸೇರಿರುವ ಡಾ. ವೀರಪ್ಪ ಮೊಯ್ಲಿ ಅವರು, ಬೇಸಿಗೆ ಅಡಿಯಿಟ್ಟಿದ್ದರೂ ಇತ್ತ ತಲೆಹಾಕಿಲ್ಲ ಎಂದು ಈ ಹೋರಾಟದ ಮುಂದಾಳತ್ವ ವಹಿಸಿರುವ ಸುಧಾಕರ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರಾಜ್ಯ ಸರಕಾರವನ್ನು ಸೆಳೆಯುವ ಉದ್ದೇಶದಿಂದ ಅಲ್ಲಿನ ರೈತರ ಮಕ್ಕಳು, ಇಂಜಿನಿಯರುಗಳು ಶಾಶ್ವತ ನೀರಾವರಿ ಹೋರಾಟ ಸಮಿತಿಯನ್ನು ಕಟ್ಟಿಕೊಂಡು ವಿಧಾನಸೌಧದ ಕದ ಬಡಿಯುತ್ತಿದ್ದಾರೆ. ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಚ್ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ನಡೆಸಿ ನೀರಿಗಾಗಿ ಕೂಗೆಬಿಸಿತ್ತು. ಯುವಶಕ್ತಿ ಟ್ರಸ್ಟ್ ಕೂಡ ಈ ಹೋರಾಟದಲ್ಲಿ ಪಾಲ್ಗೊಂಡಿತ್ತು.
ಈ ಕುರಿತು ಒನ್ಇಂಡಿಯಾ ಜೊತೆ ಅಳಲು ಹಂಚಿಕೊಂಡ ಸುಧಾಕರ್ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೊರೆ ಹೋಗುವುದೊಂದೇ ದಾರಿ. ನೀರಾವರಿ ತಜ್ಞ ಜಿಎಸ್ ಪರಮಶಿವಯ್ಯ ಅವರ ವರದಿಯಂತೆ ಪಶ್ಚಿಮ ಘಟ್ಟದ ನದಿಯನ್ನು ಬಯಲುಸೀಮೆಗೆ ಹರಿಸಿ ಶಾಶ್ವತ ನೀರಿನ ಪರಿಹಾರವನ್ನು ಒದಗಿಸುವುದೊಂದೇ ಉಳಿದಿರುವ ಮಾರ್ಗ. ನಮ್ಮ ಕೂಗು ಪ್ರಧಾನಿಗೆ ಕೇಳುವುದೆ ಎಂದು ನೋವಿನಿಂದ ನುಡಿದರು. [ಎತ್ತಿನಹೊಳೆ ಯೋಜನೆಗೆ 1,500 ಕೋಟಿ ಅನುದಾನ]

ಪರಮಶಿವಯ್ಯ ವರದಿ : ಅರಬ್ಬಿ ಸಮುದ್ರವನ್ನು ಸೇರುತ್ತಿರುವ ನೀರಿನ ಶೇ.10ರಷ್ಟು ನೀರನ್ನು ಸೂಕ್ತವಾಗಿ ಬಳಸಿಕೊಂಡರೆ 26 ಲಕ್ಷ ಹೆಕ್ಟೇರಿನಷ್ಟು ಕೃಷಿ ಭೂಮಿಗೆ ನೀರು ಒದಗಿಸಬಹುದು. ಯಾವುದೇ ಅಣೆಕಟ್ಟು ಕಟ್ಟದೆ ಪರಿಸರ ಹಾಳಾಗದಂತೆ ಇದನ್ನು ಮಾಡಬಹುದು. ಇದರಿಂದ 11 ಉಪನದಿಗಳನ್ನು, 8,300 ಕೆರೆಗಳನ್ನು, 9 ಲಕ್ಷ ಬಾವಿ ಮತ್ತು ಬೋರ್ವೆಲ್ಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ. ಇದು ರಾಜ್ಯಕ್ಕೆ 26 ಸಾವಿರ ಕೋಟಿ ಆದಾಯವನ್ನು ಕೂಡ ತಂದುಕೊಡುತ್ತದೆ. ಆದರೆ, ಈ ವರದಿ ಇನ್ನೂ ಕಾಗದ ರೂಪದಲ್ಲೇ ಇದೆ. ಅನುಷ್ಠಾನಗೊಳಿಸಲು ಯಾವ ಸರಕಾರವೂ ಪ್ರಯತ್ನಿಸುತ್ತಿಲ್ಲ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಸುತ್ತಲಿನ ನಗರಗಳಿಗೆ ಸಂದಾಯವಾಗುತ್ತಿದೆ. ತರಕಾರಿಗಳನ್ನು ಕೂಡ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ನೀರೇ ಇಲ್ಲದಿದ್ದರೆ ಇವನ್ನು ಉತ್ಪಾದಿಸುವುದಾದರೂ ಹೇಗೆ? ನೀರನ್ನು ಒದಗಿಸಿದರೆ ಈ ಪ್ರದೇಶ ಮತ್ತಷ್ಟು ಸುಭಿಕ್ಷ, ಸಂಪದ್ಭರಿತವಾಗುತ್ತದೆ ಎಂಬುದು ಸುಧಾಕರ್ ಅವರ ಖಡಾಖಂಡಿತ ಅಭಿಪ್ರಾಯ.
ನಾಗರಿಕತೆ ನಿರ್ನಾಮ : ಯಾವುದೇ ನದಿಯ ಆಸರೆಯಿಲ್ಲದಿದ್ದರೂ ಕೆರೆ, ಬಾವಿಗಳ ಸಹಾಯದಿಂದ ಇಷ್ಟು ವರ್ಷಗಳ ಕಾಲ ಹೇಗೋ ಜೀವನ ಸಾಗುತ್ತಿತ್ತು. ಆದರೆ ಈಗ, ಕೆರೆ ಕುಂಟೆ, ಬಾವಿಗಳೆಲ್ಲ ಬತ್ತಿಹೋಗಿವೆ, ಅಂತರ್ಜಲ ಕುಸಿದಿದೆ, ಮಳೆಯಂತೂ ಇಲ್ಲವೇ ಇಲ್ಲ. ಇದು ಹೀಗೇ ಮುಂದುವರಿದರೆ, ಒಂದಾನೊಂದು ಕಾಲದಲ್ಲಿ ಜಲಸಂಪತ್ತಿನಿಂದಾಗಿ ಗಂಗರ ರಾಜಧಾನಿಯಾಗಿದ್ದ ಬಯಲುಸೀಮೆಯ ನಾಗರಿಕತೆ ಕೆಲವೇ ವರ್ಷಗಳಲ್ಲಿ ನಿರ್ನಾಮವಾಗಲಿದೆ ಎಂಬುದು ಇಲ್ಲಿಯ ಜನರ ಆತಂಕದ ನುಡಿ.
ಶಾಶ್ವತ ನೀರಿಗಾಗಿ ಆನ್ ಲೈನ್ ಅರ್ಜಿ
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications