ರಾಹುಲ್ ಪ್ರಧಾನಿಯಾದರೆ ದೇಶಾದ್ಯಂತ ಸಾಲಮನ್ನಾ: ಓದುಗರು ಏನಂತಾರೆ?
Recommended Video

ಬೆಂಗಳೂರು, ನವೆಂಬರ್ 23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಪ್ರಧಾನಮಂತ್ರಿಯಾದರೆ ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಓದುಗರು ಏನು ಹೇಳಿದ್ದಾರೆ ಎಂದು ನೋಡೋಣ.
ರಾಹುಲ್ ಪ್ರಧಾನಿಯಾದರೆ ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡುತ್ತಾರೆ ಎನ್ನುವ ಮಾತು ಜನರನ್ನು ಕೆರಳಿಸಿದೆ,ದೇಶದ ಎಲ್ಲಾ ರೈತರ ಸಾಲಮನ್ನಾ ಎಂದರೆ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಎಲ್ಲರೂ ಸಾಲಮಾಡುವ ಪರಿಸ್ಥಿತಿ ಬರುವುದೇ ಎಂದು ಪ್ರಶ್ನಿಸಿದರೆ ಇನ್ನು ಕೆಲವರು ದೇಶದಲ್ಲಿ ಸಾಲ ಇನ್ನೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದಿದ್ದಾರೆ.
ಇನ್ನು ಕೆಲವರು ಸಿದ್ದರಾಮಯ್ಯ ಅವರಿಗೆ ಇರುವ ಬುದ್ಧಿಯಲ್ಲಿ ಸ್ವಲ್ಪ ಬುದ್ಧಿಯೂ ರಾಹುಲ್ ಗಾಂಧಿಗಿಲ್ಲ ಎಂದು ದೂರಿದ್ದಾರೆ. ಮುಕ್ಕಾಲು ಮಂದಿ ಕಾಂಗ್ರೆಸ್ ವಿರುದ್ಧವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಜನರು ಏನೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮುಂದೆ ಓದಿ..
ದೇಶಾದ್ಯಂತ ಸಾಲ ಇನ್ನೂ ಹೆಚ್ಚಾಗುತ್ತದೆ
ದೇಶದಾದ್ಯಂತ ಸಾಲ ಇನ್ನೂ ಜಾಸ್ತಿಯಾಗುತ್ತದೆ ಹೊರತು ಮನ್ನಾ ಆಗುವುದಿಲ್ಲ ಇದಕ್ಕೆ ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ಯಾವ ರೀತಿ ದುರಾಡಳಿತ ನಡೆಸಿತ್ತು ಎನ್ನುವ ಉದಾಹರಣೆ ಇದೆಯಲ್ಲ ಎಂದು ಬಿಆರ್ ವೆಂಕಟೇಶ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಎಲ್ಲರೂ ಸಾಲ ಮಾಡುವ ಪರಿಸ್ಥಿತಿ ಬರುತ್ತೆ
ಓಹೋ ಅಂದ್ರೆ ದೇಶದಲ್ಲಿ ಎಲ್ಲರಿಗೂ ಸಾಲ ಮಾಡೋಪರಿಸ್ಥಿತಿಗೆ ತಂದುಯಿಡ್ತಿರ ಅಂತಾಯ್ತು . ನಿಮ್ಮ್ಗೆ ಅರಿಸಿತರೋದು ನಾವು ಸಲಾ ಮಾಡಿ ಸಾಯೋದು. ಎಂದು ಹರ್ಷ ಮೋಹಿತೆ ಎನ್ನುವವರು ಲೇವಡಿ ಮಾಡಿದ್ದಾರೆ.
ಮೊದಲು ಕಾಂಗ್ರೆಸ್ ನಾಯಕರ ಸಾಲ ಮನ್ನಾ
ಮೊದಲು ಕಾಂಗ್ರೆಸ್ ನಾಯಕರುಗಳ ಸಾಲ ಮನ್ನಾ ಮಾಡಿಕ್ಕೊಳ್ಳಿ ಹಾಗೆ ಪಕ್ಕದ ದೇಶ ಪಾಕಿಸ್ತಾನದ ಸಾಲವನ್ನು ಮನ್ನ ಮಾಡಿ ಯಾಕೆಂದರೆ ಅವರು ನಿಮ್ಮ ದೋಸ್ತಿಗಳು ಅಲ್ಲವೆ ಎಂದು ದೇವರಾಜ ಕೆ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಿಂತ ಸಿದ್ದರಾಮಯ್ಯ ಬುದ್ಧಿವಂತ
ಸಿದ್ದರಾಮಯ್ಯ ಸಾರ್ ನಿಮಗಿರುವ ಜ್ಞಾನದಲ್ಲಿ ನೂರರಲ್ಲಿ ಒಂದು ಭಾಗ ಜ್ಞಾನ ರಾಹುಲ್ ಗಾಂಧಿಯವರಿಗೆ ಇಲ್ಲ ಇಂಥವರನ್ನು ದೇಶದ ಪ್ರಧಾನಿ ಮಾಡಲು ಹೊರಟಿದ್ದೀರಲ್ಲಾ ನಮ್ಮ ದೇಶದ ಗತಿ ಏನಾಗಬೇಕು ಎಂದು ಮಹಾದೇವ್ ಎನ್ನುವವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications