ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಸಾನ್ ಮೋರ್ಚಾದಿಂದ ನ.19ಕ್ಕೆ 'ಫತೇ ದಿವಸ್' ಆಚರಣೆ

|
Google Oneindia Kannada News

ನವದೆಹಲಿ, ನವೆಂಬರ್ 18: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ರೈತ ಪ್ರತಿಭಟನಾ ಆಂದೋಲನದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾವು ಮೂರು ಕೃಷಿ ಕಾಯ್ದೆ ರದ್ದು ಮಾಡಿ ನವೆಂಬರ್ 19 ಅನ್ನು 'ಫತೇ ದಿವಸ್' ಎಂದು ಆಚರಿಸುತ್ತಿದೆ.

2022-2021ರ ರೈತ ಪ್ರತಿಭಟನಾ ಆಂದೋಲನದ ಪರಿಣಾಮವಾಗಿ ಕೇಂದ್ರ ಸರ್ಕಾರ 2021ರ ನವೆಂಬರ್ 19ರಂದು

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ದೇಶಿಸಿದ ದಿನವಾಗಿದೆ. ಹೀಗಾಗಿ ಆ ದಿವಸವನ್ನು 'ಫತೇ ದಿವಸ್' ಆಗಿ ಆಚರಿಸುತ್ತಿದ್ದೇವೆ ಎಂದು ಮೋರ್ಚಾ ನಾಯಕರು ಹೇಳಿದ್ದಾರೆ.

November 19 will be celebrated as Fateh Diwas by Samyukta Kisan Morcha

2022-2021 ರ ರೈತ ಪ್ರತಿಭಟನಾ ಆಂದೋಲನದ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (SKM) ನವೆಂಬರ್ 19 ಅನ್ನು 'ಫತೇ ದಿವಸ್' ಎಂದು ಆಚರಿಸಲಾಗುವುದು ಎಂದು ಹೇಳಿದೆ. 2021 ರಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಭಾರತ ಸರ್ಕಾರವು ನಿರ್ದೇಶಿಸಿದ ದಿನವಾಗಿದೆ ಎಂದು ಮೋರ್ಚಾ ನಾಯಕರು ಹೇಳಿದ್ದಾರೆ.

ಅಂದು ದೂರದರ್ಶನದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ ತಿಂಗಳಲ್ಲಿ ಬರಲಿರುವ ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರ ಮೂರು ಕಾಯಿದೆಗಳನ್ನು ರದ್ದುಗೊಳಿಸಲಿದೆ ಎಂದಿದ್ದರು. ಕಾನೂನಿನ ಪ್ರಯೋಜನಗಳನ್ನು ರೈತರಿಗೆ ಮನವರಿಕೆ ಮಾಡುವಲ್ಲಿ ತಮ್ಮ ಸರ್ಕಾರದ ಅಸಮರ್ಥತೆಯ ಬಗ್ಗೆ ವಿಷಾದಿಸಿದ್ದರು. ರೈತರಿಗೆ ಕಾಯ್ದೆಗಳ ಪ್ರಯೋಜನಗಳನ್ನು ವಿವರಿಸಲು ಅನೇಕ ಪ್ರಯತ್ನಗಳನ್ನು ಮಾಡಿದರೂ ನಾವು ವಿಫಲರಾಗಿದ್ದೇವೆ ಎಂದು ಮೂರು ಕಾಯ್ದೆ ರದ್ದು ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು ಎಂದರು.

November 19 will be celebrated as Fateh Diwas by Samyukta Kisan Morcha

ಈ ಮೂರು ಕಾಯ್ದೆಗಳು ರದ್ದು

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ. ಈ ಮೂರು ಕೃಷಿ ಕಾಯ್ದೆಗಳನ್ನು ಅನೇಕ ರೈತ ಸಂಘಗಳು ವಿರೋಧಿಸಿದವರು. ರೈತ ವಿರೋಧಿ ಕಾನೂನುಗಳು ಎಂದು ಪ್ರತಿಭಟನೆ ನಡೆಸಿದರು. ಬದಲಾಗಿ ಕಾರ್ಪೊರೇಟ್‌ಗಳು ಬೆಲೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮಸೂದೆಯನ್ನು ರಚಿಸುವಂತೆ ಒತ್ತಾಯಿಸಿದ್ದರು.

ನವೆಂಬರ್ 26ಕ್ಕೆ ರಾಜಭವನ ಮೆರವಣಿಗೆ

ರೈತರ ಇನ್ನು ಹಲವು ಬೇಡಿಕೆಗಳ ಬಾಕಿ ಇದ್ದು, ಅವುಗಳ ಈಡೇರಿ ಮತ್ತು ಕೇಂದ್ರದ ಭರವಸೆ ಉಲ್ಲಂಘನೆಯನ್ನು ಆರೋಪಿಸಿ ನವೆಂಬರ್ 26 ರಂದು ಕಿಸಾನ್ ಮೋರ್ಚಾ ರಾಷ್ಟ್ರವ್ಯಾಪಿ ರಾಜಭವನಗಳಿಗೆ ಮೆರವಣಿಗೆ ನಡೆಸಲು ಸಜ್ಜಾಗಿದೆ. ಕೃಷಿ ಕಾಯ್ದೆ ವಿರುದ್ಧ ಪ್ರತಭಟಿಸಿದ ರೈತರ ಎಸ್‌ಕೆಎಂ ಸಂಘಗಳ ಚಳವಳಿ ಮುಂದಿನ ಹಾದಿಯ ಚರ್ಚೆಗೆ ಡಿಸೆಂಬರ್ 8 ರಂದು ಸಭೆ ನಡೆಸಲು ಮೋರ್ಚಾ ನಿರ್ಧರಿಸಿದೆ.

ರೈತರ ಬೇಡಿಕೆ ಈಡೇರಿಸುವ ಭರವಸೆಯನ್ನು ಸರ್ಕಾರ ಮರೆತಿದೆ. ಕನಿಷ್ಠ ಬೆಂಬಲ ಬೆಲೆಯ ಸಮಿತಿಯನ್ನು ಸಹ ರಚಿಸಲಾಗಿಲ್ಲ. ರೈತ ಆಂದೋಲನದ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಿಸಿದ್ದ 'ಸುಳ್ಳು' ಪ್ರಕರಣಗಳು ಹಿಂಪಡೆದಿಲ್ಲ ಎಂದು ರೈತ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ.

English summary
November 19 will be celebrated as 'Fateh Diwas' by Samyukta Kisan Morcha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X