ಬರಗಾಲದಲ್ಲಿಯೂ ಬೆಳೆ ಸಾಲ ತುಂಬಲು ಬ್ಯಾಂಕ್‌ಗಳಿಂದ ನೋಟಿಸ್, ಧಾರವಾಡ ಜಿಲ್ಲೆ ರೈತ ಕಂಗಾಲು
ಧಾರವಾಡ, ಅಕ್ಟೋಬರ್, 24: ಇಡಿ ಜಗತ್ತಿಗೆ ಅನ್ನ ಹಾಕುವವನೇ ರೈತ. ಹೀಗಾಗಿ ರೈತನಿಗೆ ಅನ್ನದಾತ ಎಂದು ಕರೆಯುತ್ತಾರೆ. ಈ ರೈತ ನಮಗೆ ಅನ್ನ ಹಾಕಲು ಏನೆನೋ ಮಾಡ್ತಾನೆ. ಸಾಲ ಸೂಲ ಮಾಡಿ ಬೆಳೆ ಬೆಳೆಯುತ್ತಾನೆ. ಆದರೆ ವಾತಾವರಣ ಅವನಿಗೆ ಕೈಕೊಡುತ್ತೆ. ಹೀಗಾಗಿ ಆ ಸಾಲ ತಿರಿಸದೇ ಅವನು ಸಂಕಷ್ಟಕ್ಕೆ ಸಿಲುಕ್ತಾನೆ. ಅಂತಹ ರೈತರಿಗೆ ಈಗ ಕೋರ್ಟ್‌ನಿಂದ ನೋಟಿಸ್ ಬರುತ್ತಿವೆ ಈ ಜಿಲ್ಲೆಯಲ್ಲಿ.
ಹಸಿದವರಿಗೆ ಅನ್ನ ಹಾಕುವ ರೈತರಿಗೆ ಎಷ್ಟೇ ನಾವು ಕೃತಜ್ಞತೆ ಸಲ್ಲಿಸಿದರು ಕಡಿಮೆ. ನಮಗೆ ಅನ್ನ ಹಾಕಲು ಹಗಲು ರಾತ್ರಿ ಆತ ದುಡಿಯುತಾನೆ. ಅಲ್ಲದೆ ಬ್ಯಾಂಕ್‌ಗಳಲ್ಲಿ ಸಾಲ ಸೂಲ ಮಾಡಿ ಬಿತ್ತನೆ ಮಾಡುತ್ತಾನೆ. ಆದರೆ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಈ ಬೆಳೆ ಹಾಳಾದರೆ ಏನು ಮಾಡಬೇಕೊ ಗೊತ್ತಿಲ್ಲ. ಇಂತಹ ರೈತರಿಗೆ ಈ ಬ್ಯಾಂಕ್‌ಗಳಿಂದ ನೋಟಿಸ್ ಬರಲು ಆರಂಭ ಮಾಡಿವೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರೈತರಿಗೆ ಕೇವಲ ನೋಟೀಸ್ ಮಾತ್ರವಲ್ಲ, ಸಮನ್ಸ್ ಸಹ ಜಾರಿ ಮಾಡಲಾಗಿದೆ.

ಬೆಂಗಳೂರಿನ ಡೆಬಿಟ್ ರಿಕವರಿ ಟ್ರಿಬ್ಯುನಲ್‌ದಿಂದ ಈ ನೋಟೀಸ್ ಜಾರಿಯಾಗಿದ್ದು, ಈಗ ಇಲ್ಲಿಯ ರೈತರು ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ನವಲಗುಂದ ತಾಲೂಕಿನ ಶಿರೂರದಲ್ಲಿನ ಎಸ್‌ಬಿಐನಲ್ಲಿ 2019ರಲ್ಲಿ ಬೆಳೆ ಸಾಲ ಪಡೆದಿದ್ದ ಈ ರೈತರಿಗೆ, ಮೊದಲು ಕಾಡಿದ್ದು ಕೋವಿಡ್. ಎರರು ವರ್ಷ ಕೋವಿಡ್‌ನಿಂದ ತತ್ತರಿಸಿದ ಈ ರೈತರಿಗೆ ಬೆಳೆ ಕೈಗೆ ಬಂದರೂ ಮಾರಾಟಕ್ಕೆ ಅವಕಾಶ ಸಿಗಲಿಲ್ಲ.
ನಂತರ ಎರಡು ವರ್ಷ ಅತೀವೃಷ್ಟಿಯಿಂದ ಬೆಳೆದ ಬೆಳೆ ನೀರು ಪಾಲಾಯಿತು. ಇದರಿಂದ ಈ ರೈತರು ಸಾಲ ತಿರಿಸಲಾಗಲಿಲ್ಲ. ಇದೇ ಕಾರಣಕ್ಕೆ ಈಗ ಅವರಿಗೆ ನೋಟಿಸ್ ಬರುತ್ತಿವೆ. ನವಲಗುಂದ ತಾಲೂಕಿನ ದ್ಯಾಮನಗೌಡ ಎಂಬುವವರು 2019ರಲ್ಲಿ 10 ಲಕ್ಷ ಸಾಲ ಪಡೆದಿದ್ದರು. ಆದರೆ ಆಗ ಸಾಲ ತುಂಬಲಾಗದೇ ಅದು ದುಪ್ಪಟ್ಟಾಗಿದೆ. ಅದೇ ರೀತಿ ಇದೇ ತಾಲೂಕಿನ ಬ್ಯಾಲ್ಯಾಳದ ರೈತ ದಯಾನಂದ 15 ಲಕ್ಷ ಸಾಲ ಪಡೆದಿದ್ದ. ಈಗ ಅವರಿಗೆ ಕೂಡ ಅಸಲು ಸೇರಿ 21 ಲಕ್ಷ ಆಗಿದೆ.
ಈ ಬಾರಿ ಇದೇ ರೈತರು ತಮಗೆ ಬೆಳೆ ಚೆನ್ನಾಗಿ ಬಂದರೆ ಅಲ್ಪ ಸ್ವಲ್ಪ ಸಾಲ ಮರು ಪಾವತಿ ಮಾಡಬಹುದು ಎಂದು ಕೊಂಡಿದ್ದರು. ಆದರೆ ಈ ಬಾರಿ ನವಲಗುಂದ ತಾಲೂಕಿನಲ್ಲಿ ಎಲ್ಲಿಲ್ಲದ ಬರ ತಾಂಡವವಾಡುತ್ತಿದೆ. ಸರ್ಕಾರನೇ ಈ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಹೀಗಾಗಿ ಈ ಬಾರಿಯೂ ಸಂಕಷ್ಟ ಎದುರಾಗಿದೆ.
ಸದ್ಯ ಈ ಸಮಸ್ಯೆಯನ್ನು ನೋಟಿಸ್ ಪಡೆದಿರುವ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾರೆ. ಸಚಿವರು ಲಿಡ್ ಬ್ಯಾಂಕ್‌ನವರಿಗೆ ಕರೆಸಿ ಮಾತನಾಡುತ್ತೇನೆ ಎಂದಿದ್ದಾರೆ. ಅಲ್ಲದೇ ನೋಟಿಸ್ ವಾಪಸ್ ಪಡೆಯಲು ಹೇಳಿ ಒನ್ ಟೈಮ್ ಸೆಟ್ಲಮೆಂಟ್ ಮಾಡಿಸುತ್ತೇವೆ ಎಂದಿದ್ದಾರೆ ಅಂತಾ ನೋಟಿಸ್ ಪಡೆದ ರೈತ ದ್ಯಾಮನಗೌಡ ಹೇಳಿದರು.
ಸದ್ಯ ಇದೇ ರೀತಿ ಎಷ್ಟೋ ರೈತರು ಸಾಲ ಪಡೆದಿದ್ದಕ್ಕೆ ನೋಟಿಸ್ ಪಡೆಯುತಿದ್ದಾರೆ. ಮೊದಲು ಮಳೆಯಿಂದ ಬೆಳೆ ಹಾಳು ಮಾಡಿಕೊಂಡಿದ್ದ ರೈತರು, ಈ ಬಾರಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದ್ದಾರೆ. ಹೀಗಾಗಿ ಸರ್ಕಾರ ಇವರತ್ತ ಗಮನ ಹರಿಸಿದರೆ, ರೈತರು ನೆಮ್ಮದಿಯಿಂದ ಅನ್ನ ಬೆಳೆಯಬಹುದಾಗಿದೆ.












Click it and Unblock the Notifications