• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಆದ ಬಳಿಕ, ಸಾಲಮನ್ನಾ ಘೋಷಿಸಿದ ಕಮಲ್ ನಾಥ್!

|

ಭೋಪಾಲ್, ಡಿಸೆಂಬರ್ 17 : ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯಾಹ್ನದಂದು ಕಮಲ್ ನಾಥ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ರೈತರ ಅಲ್ಪಾವಧಿ ಸಾಲಮನ್ನಾ ಮಾಡುತ್ತಿರುವುದಾಗಿ ಘೋಷಿಸಿದರು.

ರೈತರು ಪಡೆದಿರುವ 2 ಲಕ್ಷ ರುವರೆಗಿನ ಅಲ್ಪಾವಧಿ ಸಾಲವನ್ನು ಮನ್ನಾ ಮಾಡುವ ಆದೇಶಕ್ಕೆ ಕಮಲ್ ನಾಥ್ ಅವರು ಸಹಿ ಹಾಕಿದ್ದಾರೆ. ಮಧ್ಯಪ್ರದೇಶದಲ್ಲಿ ರೈತರ ಮನ ಗೆದ್ದವರು ಈ ಬಾರಿ ಚುನಾವಣೆ ಗೆಲ್ಲುತ್ತಾರೆ ಎಂಬ ಅಘೋಷಿತ ವಾಕ್ಯವನ್ನು ನಂಬಿಕೊಂಡು, ಅದಕ್ಕೆ ತಕ್ಕಂತೆ ಚುನಾವಣಾ ಪ್ರಚಾರವನ್ನು ಮಾಡಿದ ಕಾಂಗ್ರೆಸ್ ಜಯ ದಾಖಲಿಸಿದೆ.

ಕಮಲ್ ನಾಥ್ ಪ್ರಮಾಣವಚನ: ವ್ಯಾಪಕ ಪ್ರಶಂಸೆಗೊಳಗಾದ ಶಿವರಾಜ್ ಸಿಂಗ್ ನಡೆ

ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 10 ದಿನಗಳೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ಸರಿ ಸುಮಾರು ಎರಡು ಗಂಟೆಯೊಳಗೆ ರೈತರ ಸಾಲಮನ್ನಾ ಆದೇಶ ಹೊರಡಿಸಲಾಗಿದೆ.

ರಾಜಕೀಯದಲ್ಲಷ್ಟೇ ಹಗೆ... ಮಿಕ್ಕಂತೆ ನಾವಿರೋದೇ ಹೀಗೆ!

ಸಾಲಮನ್ನಾ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. 10 ದಿನಗಳ ಒಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬ್ಯಾಂಕ್​ಗಳು ಉದ್ಯಮಿಗಳ ಸಾಲಮನ್ನಾ ಮಾಡುತ್ತಾರೆ ಎಂದಾದರೆ ರೈತರ ಸಾಲಮನ್ನಾ ಮಾಡಲು ಯಾಕೆ ಸಾಧ್ಯವಿಲ್ಲ.

ಇದನ್ನು ನಾವು ಮಾಡಿ ತೋರಿಸುತ್ತೇವೆ. ಆದರೆ, ಈಗ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸಲಾಗಿದೆ. ಈ ಬಗ್ಗೆ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಚರ್ಚೆ ನಡೆಸಲಾಗುವುದು ಎಂದರು.

English summary
The newly sworn-in chief minister of Madhya Pradesh, Kamal Nath, after assuming office on Monday afternoon was to sign the farm loan waiver file.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X