ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ ನಿಧನ

|
Google Oneindia Kannada News

ಬೆಂಗಳೂರು, ಜನವರಿ 14: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ನಿವಾಸಿ, ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ(80) ಅವರು ನಿಧನರಾಗಿದ್ದಾರೆ.

ಜಪಾನಿನ ಮಸನವೋ ಫುಕುವೋಕಾ ಅವರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದ ನಾರಾಯಣ ರೆಡ್ಡಿ ಅವರು ನಾಡಿನ ರೈತರಿಗೆ ಮಾರ್ಗದರ್ಶಿಯಾಗಿದ್ದರು.

Nadoja great farmer Narayana Reddy passes away

ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಮೇಲು ಫುಕುವೋಕಾ ಪ್ರಭಾವ ಬೀರಿದ್ದರು. ತೇಜಸ್ವಿ ಅವರ ಸಹಜ ಕೃಷಿ ಪುಸ್ತಕದಲ್ಲಿ ನಾರಾಯಣ ರೆಡ್ಡಿ ಅವರ ಸಾವಯಮ ಕೃಷಿ ಬಗ್ಗೆ ಪ್ರಸ್ತಾಪವಿದೆ.

ಪ್ರಜಾವಾಣಿಯಲ್ಲಿ ಕೃಷಿ ಸಂಬಂಧಿತ ಪ್ರಶ್ನೋತ್ತರ ಅಂಕಣದಲ್ಲಿ ರೈತರ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತಿದ್ದರು. ನಾರಾಯಣ ರೆಡ್ಡಿ ಅವರು ಮೂವರು ಗಂಡು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನದ ನಂತರ ವರ್ತೂರಿನಲ್ಲಿ ನಾರಾಯಣ ರೆಡ್ಡಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

English summary
Nadoja great farmer Narayana Reddy(80) passes away at his residence in Marenahalli, Doddaballapur. He was a farmer who worked with the cult Japanese natural farmer’s idea and had huge success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X