ಕಾಡು ಹಂದಿ ಹಾವಳಿ: ಸಂಸತ್‌ನಲ್ಲಿ ಮಾತನಾಡಿದ ಡಿಕೆ ಸುರೇಶ್
ನವದೆಹಲಿ. ಜುಲೈ 20 : ಕಾಡು ಹಂದಿಗಳ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು ಎಂಬ ಅಂಶವನ್ನು ಸಂಸದ ಡಿ.ಕೆ ಸುರೇಶ ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ.
ಸಂಸತ್ ಕಲಾಪದ ವೇಳೆ ಮಾತನಾಡಿದ ಸುರೇಶ್, ಕರ್ನಾಟಕ ರಾಜ್ಯದಿಂದ ಕಾಡು ಹಂದಿಗಳ ಹಾವಳಿ ತಡೆ ಕೋರಿ ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆಯೇ? ಈ ಕುರಿತು ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಏನು? ಎಂದು ಪ್ರಶ್ನೆ ಮಾಡಿದರು.[ಸಂಸದ, ಶಾಸಕರನ್ನು ಹುಡುಕಿಕೊಟ್ಟವರಿಗೆ ಬಹುಮಾನ!]

ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 22 ಜನರನ್ನು ಆನೆಗಳು ಬಲಿ ತೆಗೆದುಕೊಂಡಿವೆ. ಪ್ರತಿವರ್ಷ 6000 ದಿಂದ 7000 ರೈತರು ಕಾಡು ಪ್ರಾಣಿಗಳಿಂದ ಬೆಳೆ ನಾಶ ಸಮಸ್ಯೆ ಎದುರಿಸುತ್ತಿದ್ದು ಪರಿಹಾರ ಕೋರುತ್ತಿದ್ದಾರೆ ಎಂದು ಹೇಳಿದರು.[ಅತಿ ಹೆಚ್ಚು,ಅತಿ ಕಡಿಮೆ ಅಂತರದಿಂದ ಗೆದ್ದ ಎಂಪಿಗಳು]
ಕಳೆದ 3 ವರ್ಷಗಳಲ್ಲಿ 250 ಜಾನುವಾರುಗಳು ಮೃತಪಟ್ಟಿವೆ. ಆದರೆ ಕಡಿಮೆ ಮೊತ್ತದ ಪರಿಹಾರ ರೈತರಿಗೆ ನೀಡಲಾಗಿದೆ ಎಂಬ ಅಂಶವನ್ನು ಗಮನಕ್ಕೆ ತಂದರು. ಈ ಎಲ್ಲ ಸಮಸ್ಯೆಗಳನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಪರಿಹರಿಸಬೇಕು ಎಂದು ಸುರೇಶ್ ಒತ್ತಾಯ ಮಾಡಿದರು.












Click it and Unblock the Notifications