ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಉತ್ಪನ್ನ:MSP ಬೆಲೆ ನಿಗದಿ ಅದು ಉತ್ತಮ ಬೆಲೆ ಅಲ್ಲ: ರಮೇಶ್ ಚಂದ್

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಲ್ಲಾ ಸಂದರ್ಭಗಳಲ್ಲಿ ಅದೊಂದು ಉತ್ತಮ ಬೆಲೆ ಅಲ್ಲ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಅಭಿಪ್ರಾಯಪಟ್ಟರು.

ಡಿಜಿಟಲ್ ಮಾಧ್ಯಮ ವೇದಿಕೆಯಾದ ರೂರಲ್ ವಾಯ್ಸ್ ಆಯೋಜಿಸಿದ್ದ ಕೃಷಿ ಸಮಾವೇಶದಲ್ಲಿ, ಎಂಎಸ್‌ಪಿಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು ರೈತ ಗುಂಪುಗಳ ಇಟ್ಟಿರುವ ಬೇಡಿಕೆಯ ಕುರಿತು ಅವರು ಮಾತನಾಡಿದರು. ಕೃಷಿ ಬೆಳೆಗಳಿಗೆ ನೀಡಬೇಕೆನ್ನುವ ಎಂಎಸ್‌ಪಿ ಇದು ಸ್ಥಿರ ಬೆಲೆ ಆಗಿದ್ದರೂ ಸಹ ಉತ್ತಮ ಬೆಲೆ ಅಲ್ಲ. ಉತ್ತಮ ಬೆಲೆ ಸ್ಪರ್ಧೆಯಿಂದ ಬರುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯಿದ್ದರೆ, ರೈತರು ಉತ್ತಮ ಬೆಲೆ ಪಡೆಯಬಹುದು ಅವರು ವ್ಯಾಖ್ಯಾನಿಸಿದರು.

ಆರ್‌ಟಿಐ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ಭೂಮಿ ಕಳೆದುಕೊಂಡ ರೈತರುಆರ್‌ಟಿಐ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ಭೂಮಿ ಕಳೆದುಕೊಂಡ ರೈತರು

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಬೇಕೆಂದು ಬಯಸುವುದು ಸಹಜ. ಈಗಿನ ಬೆಲೆ ಏರಿಳಿತದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬುದು ತಪ್ಪಲ್ಲ. ಸರ್ಕಾರ 22 ಬೆಳೆಗಳಿಗೆ ಎಂಎಸ್‌ಪಿ ನಿಗದಿಪಡಿಸುತ್ತದೆ. ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಪಡಿತರ ಅಂಗಡಿಗಳ ಮೂಲಕ ಪೂರೈಕೆಗಾಗಿ ಗೋಧಿ ಮತ್ತು ಭತ್ತವನ್ನು ಸಂಗ್ರಹಿಸುತ್ತದೆ. ಕೆಲವು ಪ್ರಮಾಣದಲ್ಲಿ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳನ್ನು ಸಹ ಸಂಗ್ರಹಿಸಲಾಗುತ್ತದೆ.

Minimum Support Price (MSP) to be given for Agri products its not good price Ramesh Chand

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಹೆಚ್ಚು ಅವಲಂಬತರಾಗಬಾರದು ಎಂದು ಎಚ್ಚರಿಸಿದರು. ರೈತರು ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಬೇಕು. ಡೈರಿ, ಮೀನುಗಾರಿಕೆ ಮತ್ತು ತೋಟಗಾರಿಕೆಯಂತಹ ಮಿತ್ರ ವಲಯಗಳಲ್ಲಿ ಕ್ಷಿಪ್ರ ಮತ್ತು ನಿರಂತರ ಬೆಳವಣಿಗೆಗಳು ಆಗುತ್ತಿವೆ. ಆದ್ದರಿಂದ ಎಂಎಸ್‌ಪಿ ವ್ಯವಸ್ಥೆಯು ಎಲ್ಲಾ ಸಂದರ್ಭಗಳಲ್ಲಿ ಉತ್ತಮ ಬೆಲೆಯನ್ನು ನೀಡುತ್ತದೆ ಎಂದು ನಾವು ಭಾವಿಸಬಾರದು ಎಂದು ಪುನರುಚ್ಚರಿಸಿದರು.

ಎಂಎಸ್‌ಪಿ ನಿಗದಿಗೂ ಮುನ್ನ 3 ಬೆಲೆ ತಿಳಿಯಬೇಕು

ವಿಶೇಷ ಸಂದರ್ಭಗಳಲ್ಲಿ ಎಂಎಸ್‌ಪಿ ತನ್ನದೇ ಆದ ಪಾತ್ರವನ್ನು ಹೊಂದಿದೆ. ಆದರೆ ಈ ಬೆಲೆ ಮಾರುಕಟ್ಟೆಯ ಬೆಲೆ ಏರಿಳಿತ ಎದುರಿಸಬೇಕಾದ ರೈತರ ಉದ್ಯಮಶೀಲತೆಯ ಕೌಶಲ್ಯಗಳನ್ನು ಕೊಲ್ಲುತ್ತದೆ. ಎಂಎಸ್‌ಪಿಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡುವ ಬೇಡಿಕೆ ನಮ್ಮ ಮುಂದಿದೆ. ಇದಕ್ಕು ಮೊದಲು ನಾವು ಎಂಎಸ್‌ಪಿ, ನ್ಯಾಯಯುತ ಮಾರುಕಟ್ಟೆ ಬೆಲೆ ಮತ್ತು ನಿಜವಾದ ಮಾರುಕಟ್ಟೆ ಬೆಲೆ ಕುರಿತು ಅವಲೋಕನ ಮಾಡಿಕೊಳ್ಳಬೇಕು ಎಂದರು.

ನ್ಯಾಯಯೋಚಿತ ಮಾರುಕಟ್ಟೆ ಬೆಲೆ ಎಂಎಸ್‌ಪಿಗಿಂತ ಹೆಚ್ಚಿದ್ದರೆ, ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು ಕೆಲಸ ಮಾಡುತ್ತದೆ. ಆದಲ್ಲದೇ ನ್ಯಾಯಯುತ ಮಾರುಕಟ್ಟೆ ಬೆಲೆ ಎಂಎಸ್‌ಪಿಗಿಂತ ಕಡಿಮೆಯಿದ್ದರೆ, ಉದ್ಯಮಿಗಳು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಾರೆ, ಇದು ಸರ್ಕಾರಕ್ಕೆ ಹಣಕಾಸಿನ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ಆಂದೋಲನ ನಡೆಸುತ್ತಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಾಗ ಭರವಸೆ ನೀಡಿದಂತೆ ಸರ್ಕಾರ ಈ ವರ್ಷ ಜುಲೈನಲ್ಲಿ ಎಂಎಸ್‌ಪಿ ಕುರಿತು ಸಭೆ ರಚಿಸಿದೆ ಎಂದು ತಿಳಿಸಿದರು.

Minimum Support Price (MSP) to be given for Agri products its not good price Ramesh Chand

ಸಮಿತಿಯು ಎಂಎಸ್‌ಪಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸುವ ಮಾರ್ಗಗಳನ್ನು ಸೂಚಿಸಲಿದೆ. ಜೊತೆಗೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವುದು ಸೇರಿದಂತೆ ಇತರ ಸಮಸ್ಯೆಗಳಿಗೆ ಪರಿಹಾರವನ್ನು ಅನ್ವೇಷಿಸಲಿದೆ ಎಂದು ಹೇಳಿದರು.

English summary
Minimum Support Price (MSP) to be given for Agriculture products its not good price, says Member of NITI Aayog Ramesh Chand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X