ಕುಡಿಯುವ ನೀರಿನ ವ್ಯಾಪಾರ ವಿರುದ್ಧ ವಿಶಿಷ್ಟ ಪ್ರತಿಭಟನೆ

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದ ಮೂಲೆ ಮೂಲೆಯಲ್ಲೂ, ಕುವೆಂಪು ರವರ ಕವಿತೆಗಳು ಮಾರ್ದನಿಸುತ್ತಿದ್ದರೆ, ಛಾಯಾಚಿತ್ರಗಳು ಆಕರ್ಷಿಸುತ್ತಿದ್ದವು . ಈ ಮಧ್ಯೆ ವಿಶೇಷವಾಗಿ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಗಮನ ಸೆಳೆದಿದ್ದು "ಹಣಕ್ಕಾಗಿ ನೀರನ್ನು ಮಾರಾಟಮಾಡಬೇಡಿ" ಎಂಬ ನಾಮಫಲಕ.

ಕೆಂಪು ನಿಲುವಂಗಿ, ನೀಲಿ ಶಾಲು, ಬಿಳಿಪಂಚೆ ಎದೆ ಮುಟ್ಟುತ್ತಿದ್ದ ಕಪ್ಪು ಬಿಳಿ ಗಡ್ಡ , ನಕ್ಷತ್ರದ ಹೊಳಪಿರುವ ಆ ಕಣ್ಣುಗಳಿಂದಲೇ ಅನೇಕ ಸಂದೇಶಗಳನ್ನು ರವಾನಿಸುತ್ತ, ಒಂದು ಪುಟ್ಟ ಸ್ಲೇಟ್ ಮೂಲಕ ಬಂದವರೊಟ್ಟಿಗೆ ಉಭಯ ಕುಶಲೋಪರಿ, ವ್ಯವಹಾರವನ್ನು ನಡೆಸುತ್ತ ಪುಸ್ತಕ ವ್ಯಾಪಾರ ಮಾಡುತಿದ್ದ ಆ ಹಿರಿಯ ಜಂಗಮ.[1 ರು ಗೆ ಎಟಿಎಂ ಆರಂಭಿಸಿದ ಡಿಕೆಶಿ ಬ್ರದರ್ಸ್]

ಅಲ್ಲಿ ಬಂದಿದ್ದವರೆಲ್ಲ ಇವರಿಗೆ ಮಾತು ಬರುವುದಿಲ್ಲ, ಬಂದರು ಮಾತನಾಡುವುದಿಲ್ಲ ಹೀಗೆ ತಮ್ಮ ತಮ್ಮ ಊಹೆಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರೆ ಅವರು ಮಾತ್ರ ಬಂದವರತ್ತ ಒಂದು ಸಣ್ಣ ನಗು ಎಸೆದು ಕಾರ್ಯ ಮಗ್ನರಾಗಿರುತ್ತಿದ್ದರು.

Meet Man who does Silent Protest against MNCs selling Drinking Water

ಜಗದ ಒಂದೊಂದೇ ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದ ಇವರು ಮೊದಲು ಅನ್ನ, ನೀರು ಬಿಟ್ಟು ತದನಂತರ ಮಾತನಾಡುವುದು ನಿಲ್ಲಿಸಿ, ಪೆನ್ನು ಹಿಡಿಯುವುದನ್ನು ನಿಲ್ಲಿಸಿ ಉಪವಾಸದ ಅವಧಿಯನ್ನು ಹೆಚ್ಚಿಸಿ ಇದೀಗ ಮಾತನಾಡದೆ ಮೌನವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ.[2 ರೂ.ಗೆ 20 ಲೀಟರ್ ಶುದ್ಧ ನೀರು]

ಇವರ ಮೇಲೆ ಅನೇಕ ಬಾರಿ ಹಲ್ಲೆಗಳು ಆದಾಗಲೆಲ್ಲಾ ಹೀಗೆ ಒಂದೊಂದನೆ ನಿರಶನಗೊಳಿಸುತ್ತ ಬಂದ ಇವರಿಗೆ ಯಾವುದೇ ಸ್ವಂತ ಮನೆಯಿಲ್ಲ, ಅಪ್ಪ,- ಅಮ್ಮ, ಅಕ್ಕ - ತಂಗಿ, ಅಣ್ಣ - ತಮ್ಮ ಎನಿಸಿಕೊಳ್ಳುವ ಯಾವುದೇ ಹತ್ತಿರವಾದ ಸಂಬಂಧಗಳಿಲ್ಲ, ಮದುವೆಯಾಗಿಲ್ಲ, ಸರಿ ಸುಮಾರು ಹತ್ತು ವರ್ಷಗಳಿಂದ ಇವರ ನಾಲಿಗೆ ಚಲಿಸಿಲ್ಲ. ಸದಾ ಗಿಜಿ ಗಿಜಿ ಎನ್ನುವ ಮಹಾನಗರದೊಳಗೆ ಇವರ ಮಹಾಮೌನಕ್ಕೆ ಸ್ಫೋಟಕ ಶಕ್ತಿಯಿದೆ. [ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ]

Meet Man who does Silent Protest against MNCs selling Drinking Water

ಮೌನಿಯಾದ ಅಮೃತ್ ಅಥವಾ ಅಂಬ್ರೋಸ್: ಇವರ ಹೆಸರು ಅಮೃತ್ ಅಥವಾ ಅಂಬ್ರೋಸ್ ಅಥವಾ ಇವೆರಡೂ ಆಗಿರಲಿಕ್ಕಿಲ್ಲಾ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿಧರರಾಗಿದ್ದು ಕನ್ನಡ ಸಾಹಿತ್ಯ ಲೋಕದ ಅಚ್ಚುಮೆಚ್ಚಿನ ವಿಮರ್ಶಕರಾದ ಡಿ. ಅರ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮಾಡಲು ಹೊರಟಿದ್ದ ಇವರ ಕನಸಿಗೆ ಡಿ. ಅರ್ ನಾಗರಾಜ್ ರವರ ಸಾವೇ ಒಂದು ಶಾಪವಾಯಿತು. [ಗ್ರಾಹಕರೇ ಎಚ್ಚರ... ಪ್ಯಾಕೇಜ್ಡ್ ನೀರು ಆರೋಗ್ಯಕರವಲ್ಲ]

ಯಾವುದೋ ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಯು. ಜಿ. ಸಿ ಸಂಬಳ ಪಡೆದುಕೊಂಡು ಹಾಯಾಗಿ ಜೀವನ ನಡೆಸಬಹುದಾಗಿದ್ದ ಆ ಸಮಯದಲ್ಲಿ ಇವರೊಳಗಿನ ಹೋರಾಟದ ಕಿಚ್ಚು, ಇವರೊಳಡಗಿದ್ದ ಹೊರಬಂದಿದ್ದು ಬದುಕಿನ ಹಾದಿ ಕವಲೊಡೆದಿದ್ದು...

ಅದು ರೈತ ಸಂಘದ ಉಚ್ಛಾಯ ಕಾಲ ಅದೆಷ್ಟೋ ಪುಸ್ತಕಗಳನ್ನು ಓದಿಕೊಂಡಿದ್ದ ಮತ್ತು ಡಿ. ಅರ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಪಳಗಿದ್ದ ಅಮೃತ್, ರೈತ ಸಂಘದ ಜೊತೆ ಸೇರಿಕೊಂಡರು ತದನಂತರ ಹುಟ್ಟಿಕೊಂಡ ಹಸಿರುಸೇನೆಯ ರಾಜ್ಯನಾಯಕರಾದರು. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]

Meet Man who does Silent Protest against MNCs selling Drinking Water

ಆಗ ಅಮೃತರರು ಮಾತು ಬಿಟ್ಟಿರಲಿಲ್ಲ, ನೀವು ಮಾತು ಬಿಡಲು ಕಾರಣವೇನೆಂದು ಕೆದಕಿದರೆ ಕೈ ಸನ್ನೆ, ಸ್ಲೇಟ್ ಮೇಲೆ ಪುಟ್ಟ ಮಗುವಿಗೆ ಮೊತ್ತಮೊದಲ ಅಕ್ಷರಾಭ್ಯಾಸ ಮಾಡಿಸುವ ರೀತಿಯಲ್ಲಿ ಎಲ್ಲವನ್ನು ಬರೆದು ವಿವರಿಸಿದರು. ನಿಮ್ಮ ಊರು ಯಾವುದೆಂದು ಕೇಳಿದರೆ ಕೃಷ್ಣನಂತೆ ಕೊಳಲು ಹಿಡಿದು ತೋರಿಸಿದರು. ಉಡುಪಿಯಾಚೆಗೆ ಯಾವುದೋ ನನ್ನೂರು ಮತ್ತು ನಾ ಬೆತ್ತಲಾದರೆ ಅದೇ ನನ್ನೂರು ಎಂದು ಬರೆದು ತೋರಿಸಿದರು. [ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!]

ಅಮೃತರದ್ದು ಮುಖ್ಯವಾಗಿ ಜೀವಜಲದ ಖಾಸಗೀಕರಣದ ವಿರುದ್ಧ ಹೋರಾಟ. ನೀರನ್ನು ಮಾರುಕಟ್ಟೆಯಲ್ಲಿ ಒಂದು ಸರಕನ್ನಾಗಿಸುವುದು ನಿಸರ್ಗದ ವಿರುದ್ಧ ಹೆಜ್ಜೆ ಇಟ್ಟಂತೆ. ಭೂಮಿಮೇಲಿನ ಪ್ರತಿಯೊಂದು ಜೀವಿಗೂ ನೀರು ಉಚಿತವಾಗಿ ಸಿಗಬೇಕು ಇದು ಗಾಳಿಯಷ್ಟೇ ಮುಖ್ಯವಾದ ಜೀವಜಲ ಎಂಬುದೇ ಇವರ ಹೋರಾಟದ ತಿರುಳು. ['ರಾಜ್ಯದ ನೀರಿನ ಸಮಸ್ಯೆಗೆ ರಾಜಕಾರಣಿಗಳೇ ಕಾರಣ']

ಸಮಾಜಕ್ಕಾಗಿ ಇವರು ನಡೆಸುತ್ತಿರುವ ನಿಸ್ವಾರ್ಥ ಸೇವೆ, ಹೋರಾಟಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+