ಮೈಸೂರು ಮೇಳದಲ್ಲಿ 30 ಮಳಿಗೆ, 20 ಜಾತಿ ಮಾವು

ಮೈಸೂರು, ಮೇ 19 : ಮಾವು ಮತ್ತು ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಮೈಸೂರಿನ ಅರಮನೆ ಸಮೀಪದ ಕರ್ಜನ್ ಪಾರ್ಕ್ ಆವರಣದಲ್ಲಿ ಮೇ 21 ರಿಂದ 24 ರವರೆಗೆ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ 30 ಮಳಿಗೆಗಳು ಇರಲಿದ್ದು, 20 ವಿವಿಧ ಜಾತಿಯ ಮಾವು ತಳಿಗಳು ಲಭ್ಯವಿರುತ್ತವೆ. [ಬೆಂಗಳೂರು : ಹಾಪ್ ಕಾಮ್ಸ್ ಮಾವು ಮೇಳಕ್ಕೆ ಚಾಲನೆ]

Mango

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗದಲ್ಲಿ ಬೆಳೆದ ಹಲಸು ಮತ್ತು ಮಾವಿನ ಹಣ್ಣುಗಳು ಮೇಳದಲ್ಲಿ ಲಭ್ಯವಿದ್ದು, ಸುಮಾರು 100 ಟನ್ ಮಾವು ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

ಪ್ರಮುಖ ಬೆಳಗಳ ಪರಿಚಯ : ಇದೇ ಮೊದಲ ಬಾರಿಗೆ ಮಾವು ಮತ್ತು ಹಲಸು ಮೇಳದಲ್ಲಿ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವಿಳ್ಯದೆಲೆ, ಉಡುಪಿ ಮಲ್ಲಿಗೆ, ದೇವನಹಳ್ಳಿ ಚಕ್ಕೊತ್ತ, ಬೆಂಗಳೂರು ನೀಲಿ ದ್ರಾಕ್ಷಿ, ಬೆಂಗಳೂರು ಸಾಂಬಾರು ಈರುಳ್ಳಿ ಮುಂತಾದವುಗಳ ಮಾರಾಟಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+